ಸಿಡಿಲಿಗೆ ಎರಡು ಆಕಳು ಬಲಿ ರೈತನ ಮನೆಗೆ ಕಾಂಗ್ರೆಸ್ ಮುಖಂಡರು ಸುಭಾಷ್ ರಾಠೋಡ್ ಭೇಟಿ
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರುಮ್ಮನಗೂಡ ಗಾಂಧಿ ನಗರ ತಾಂಡಾದ ಗಣಪತಿ ಗೋಪು ಚಿನ್ನಾ ರಾಠೋಡ ರವರ ಆಕಳುಗಳು ಮನ್ನೆ ಸುರಿದ ಧಾರಾಕಾರ ಮಳೆಯಲ್ಲಿ ಸಿಡಿಲು ಬಡಿದು ಸ್ಥಳದಲ್ಲೆ ಮೃತಪಟ್ಟಿವೆ.
ಈ ವಿಷಯವನ್ನು ತಿಳಿದು ಚಿಂಚೋಳಿ ಕಾಂಗ್ರೆಸ್ ಪಕ್ಷದ ಮುಖಂಡ ಸುಭಾಷ ರಾಠೋಡ ಅವರು, ರೈತ ಗಣಪತಿ ಗೋಪು ಚಿನ್ನಾ ರಾಠೋಡ ರುಮ್ಮನಗೂಡ ಗಾಂಧಿ ನಗರ ತಾಂಡಾ ಅವರ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯವನ್ನು ತುಂಬಿ ನಿಮಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತನಾಡಿ ಕೊಡಿಸಲಾಗುದು ಎಂದು ಧೈರ್ಯ ಹೇಳಿದರು.
ವ್ಯಯಕ್ತಿಕವಾಗಿ ಧನ ಸಹಾಯ ನೀಡಿದರು .
ಈ ಸಂದರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅನೀಲ ಜಮಾದಾರ, ಜಿಪಂ. ಮಾಜಿ ಸದಸ್ಯ ಶಬ್ಬೀರಮಿಯ್ಯ ಸೌದಾಗರ, ಮುಖಂಡರುಗಳಾದ ಬಸವರಾಜ ಕುಲಕುಂದಿ, ಗ್ರಾಪಂ.ಅಧ್ಯಕ್ಷ ಮೋದಿನ ಪಟೇಲ್, ಗ್ರಾಪಂ. ಸದಸ್ಯರುಗಳಾದ ಫುಲಸಿಂಗ್ ಆಡೆ, ಆನಂದ ಜಾಧವ, ಗೋವಿಂದ ಆಡೆ, ಪ್ರಮುಖರಾದ ಕಿಶಾನ ಚಿನ್ನಾ ರಾಠೋಡ, ರಾಮಶೆಟ್ಟಿ, ಸವಿತಾ ಬಾಯಿ, ಶ್ರೀಮಂತ ರೆಡ್ಡಿ, ಉದಯ ಕುಮಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.ವರದಿ ಶಿವರಾಜ್ ಕಟ್ಟಿಮನಿ