ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಲಸಿಕೆ ಕಂಡು ಹಿಡಿದ ಭಾರತೀಯ ವಿಜ್ಞಾನಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಶ್ಲಾಘಿಸಿದ್ದಾರೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್) ಸೊಸೈಟಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು, ಕಾರ್ಯಕ್ರಮದಲ್ಲಿ ಸ್ವದೇಶಿ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದು, ಆತ್ಮನಿರ್ಭರ ಭಾರತಕ್ಕೆ ವಿಜ್ಞಾನಿಗಳ ಕೊಡುಗೆ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.

ಕೊವಿಡ್-19 ಬಿಕ್ಕಟ್ಟು ನಮ್ಮ ವೇಗವನ್ನು ನಿಧಾನಗೊಳಿಸಿರಬಹುದು ಆದರೆ ‘ಆತ್ಮನಿರ್ಭರ್ ಭಾರತ್’ ಹೊಂದಿರುವ, ಬಲವಾದ ಭಾರತ ನಮ್ಮ ಸಂಕಲ್ಪವಾಗಿ ಉಳಿದಿದೆ. ಹೊರಗಡೆ ಸಾಧಿಸಿದ ಆವಿಷ್ಕಾರಗಳನ್ನು ಕಂಡು ಹಿಡಿಯಲು ಭಾರತ ವರ್ಷಗಟ್ಟಲೆ ಕಾಯುತ್ತಿತ್ತು, ಈಗ ನಮ್ಮ ವಿಜ್ಞಾನಿಗಳು ಅದೇ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಒಂದು ವರ್ಷದಲ್ಲಿ ಭಾರತದಲ್ಲಿ ಕೋವಿಡ್ ಲಸಿಕೆ ತಯಾರಿಸಿದ್ದಕ್ಕಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಸೊಸೈಟಿ ಸಭೆಯಲ್ಲಿ ವಿಜ್ಞಾನಿಗಳನ್ನು ಇದೇ ವೇಳೆ ಮೋದಿಯವರು ಶ್ಲಾಘಿಸಿದ್ದಾರೆ.

ಶಾಂತಿ ಸ್ವರೂಪ್ ಭಟ್ನಾಗರ್ ನಂತಹ ಪ್ರತಿಭಾವಂತ ವಿಜ್ಞಾನಿಗಳನ್ನು ಉತ್ಪಾದಿಸಿರುವ ನಮ್ಮ ದೇಶದಲ್ಲಿ ವಿಜ್ಞಾನ, ಸಮಾಜ ಮತ್ತು ಉದ್ಯಮಕ್ಕಾಗಿ ಸಂಸ್ಥೆ ಕೆಲಸ ಮಾಡುತ್ತದೆ ಎಂದರು.

ಕೃಷಿ, ಖಗೋಳವಿಜ್ಞಾನ, ವಿಪತ್ತು ನಿರ್ವಹಣೆ, ರಕ್ಷಣಾ ತಂತ್ರಜ್ಞಾನ, ಲಸಿಕೆಗಳು ಮತ್ತು ವರ್ಚುವಲ್ ರಿಯಾಲಿಟಿ ವರೆಗಿನ ವಿವಿಧ ಅಂಶಗಳಲ್ಲಿ ಭಾರತವು ಸ್ವಾವಲಂಬಿಗಳಾಗಲು ಬಯಸಿದೆ.

ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತ ಇದೀಗ ಇಡೀ ವಿಶ್ವಕ್ಕೆ ದಾರಿ ತೋರಿಸುತ್ತಿದೆ. ಅಲ್ಲದೆ, ಸಾಫ್ಟ್ ವೇರ್, ಉಪಗ್ರಹ ಅಭಿವೃದ್ಧಿಯಲ್ಲಿ ಇತರೆ ರಾಷ್ಟ್ರಗಳ ಪ್ರಗತಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *