*ನಿರ್ಗತಿಕರಿಗೆ, ಬಡವರಿಗೆ, ಆಹಾರ ಕಿಟ್ ಮತ್ತು ಮಾಸ್ಕ್ ವಿತರಿಸಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಯಾಗಾಪೂರ್*
ಹೌದು ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಪೇಠಶಿರೂರ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕಾಟಮ್ಮದೇವರ ಹಳ್ಳಿಯಾ ಗ್ರಾಮ ಪಂಚಾಯತಿಯ ಸದಸ್ಯರಾದ ಅರುಣ್ ಕುಮಾರ್ ಯಾಗಾಪೂರ ಅವರು ಇಂದು ಪೇಠಶಿರೂರ ಗ್ರಾಮದಲ್ಲಿ ತಮ್ಮ 36ನೇ ವರ್ಷದ ಹುಟ್ಟುಹಬ್ಬವನ್ನ ನಿರ್ಗತಿಕರಿಗೆ, ಬಡವರಿಗೆ, ಅಂಗವಿಕಲರಿಗೆ, ಸುಮಾರು 200 ಹೆಚ್ಚು ಆಹಾರ ಕಿಟ್ ಮತ್ತು ಮಾಸ್ಕ್ ವಿತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿ ಮಾನವೀಯತೆ ತೋರಿದ್ದಾರೆ. ಕೊರೋನಾ ದಿಂದ ಕಷ್ಟದಲ್ಲಿ ಜೀವನ ಕಳೆವುತಿದ್ದ ಜನರಿಗೆ ಆಹಾರ ಕಿಟ್ ಮತ್ತ ಮಾಸ್ಕ್ ವಿತರಿಸಿ ಕೋವಿಡ್ ಅರಿವು ಮೂಡಿಸಿ ಇತರರಿಗೆ ಮಾದರಿಯಾಗಿದ್ದಾರೆ. ವರದಿ ಶಿವರಾಜ್ ಕಟ್ಟಿಮನಿ