PM MODI ಸರ್ಕಾರದ PLI SCHEME ಅಡಿ ಲಕ್ಷಾಂತರ ಜನರಿಗೆ ಸಿಗಲಿದೆ ಉದ್ಯೋಗಾವಕಾಶ

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಒಂದೆಡೆ ವಿಶ್ವದ ಆರ್ಥಿಕತೆಯು ಬಿಕ್ಕಳಿಸುತಿರುವ ನಡುವೆಯೇ, ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಭಾರತ ಅತ್ಯಂತ ಆಕರ್ಷಕ ದೇಶವಾಗಿ ಹೊರಹೊಮ್ಮಿದೆ.

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಒಂದೆಡೆ ವಿಶ್ವದ ಆರ್ಥಿಕತೆ ಹಿಂಜರಿಯುತ್ತಿರುವ ಮಧ್ಯೆಯೇ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಭಾರತ ಅತ್ಯಂತ ಆಕರ್ಷಕ ದೇಶವಾಗಿ ಹೊರಹೊಮ್ಮಿದೆ. ಮುಂಬರುವ ಐದು ವರ್ಷಗಳಲ್ಲಿ ಸುಮಾರು 22 ಕಂಪನಿಗಳು ಭಾರತದಲ್ಲಿ 11.5 ಲಕ್ಷ ಕೋಟಿ ರೂ. ಮೊಬೈಲ್ ಫೋನ್ ಗಳನ್ನು ಮತ್ತು ಘಟಕಗಳನ್ನು ಉತ್ಪಾದಿಸಲಿವೆ.

ಕೇಂದ್ರ ಪ್ರಧಾನಿ  ಮೋದಿ(PM Modi) ಸರ್ಕಾರವು ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಿದ್ದು, ಇದರಿಂದ ದೇಶದ 12 ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಲಭಿಸಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್,  ವಿಶ್ವದ ಅತ್ಯುನ್ನತ ಮೊಬೈಲ್ ತಯಾರಕ ಕಂಪನಿಗಳ ಯುನಿಟ್ ಗಳನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಮ್ಮದಾಗಿತ್ತು. ಇದರಿಂದ ಭಾರತೀಯ ಮೊಬೈಲ್ ತಯಾರಕ ಕಂಪನಿಗಲಿಗಳನ್ನು ಕೂಡ ಅಭಿವೃದ್ಧಿಗೊಳಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.ಇದಕ್ಕಾಗಿ ನಾವು ‘ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಪ್ರೊಗ್ರಾಮ್ (PLI)’ ಜಾರಿಗೆ ತಂದಿದ್ದೇವೆ ಎಂದಿದ್ದಾರೆ.

ಈ ಯೋಜನೆಯ ಅಡಿ ನಾವು 5 ವರ್ಷಗಳ ಕಾಲ ಜಾಗತಿಕ ಮತ್ತು ಭಾರತೀಯ ಕಂಪನಿಗಳಿಗೆ ಪ್ರೋತ್ಸಾಹ ನೀಡಲಿದ್ದೇವೆ. ಇದಕ್ಕಾಗಿ ಜುಲೈ 31 ರವರೆಗೆ ಒಟ್ಟು 22 ಕಂಪನಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮುಂಬರುವ 5 ವರ್ಷಗಳಲ್ಲಿ 11.5 ಲಕ್ಷ ಕೋಟಿ ಮೊಬೈಲ್ ಫೋನ್ ಮತ್ತು ಘಟಕಗಳನ್ನು ತಯಾರಿಸುವುದಾಗಿ ಎಲ್ಲಾ ಕಂಪನಿಗಳು ತಿಳಿಸಿವೆ. ವಿಶ್ವದ ಪ್ರಮುಖ ಮೊಬೈಲ್ ಘಟಕ ತಯಾರಿಸುವ ಮಹತ್ವದ ಕಂಪನಿಗಳನ್ನು ಭಾರತಕ್ಕೆ ಕರೆತರುವುದು ಹಾಗೂ ಭಾರತದ ಮೊಬೈಲ್ ಕಂಪನಿಗಳಿಗೆ ಮುಂದುವರಿಯಲು ಅವಕಾಶ ನೀಡುವುದು ನಮ್ಮ ಪ್ರಯತ್ನವಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ. ಹೀಗಾಗಿ, ನಾವು ‘ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಪ್ರೊಗ್ರಾಮ್ (PLI)’ ಅನ್ನು ಜಾರಿಗೆ ತಂದಿದ್ದೇವೆ, ಇದರಲ್ಲಿ ನಾವು 5 ವರ್ಷಗಳ ಕಾಲ ಜಾಗತಿಕ ಮತ್ತು ಭಾರತೀಯ ಕಂಪನಿಗಳಿಗೆ ಪ್ರೋತ್ಸಾಹ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಮುಂದಿನ 5 ವರ್ಷಗಳಲ್ಲಿ, ಅವುಗಳಲ್ಲಿನ ಶೇಕಡಾ 60 ರಷ್ಟು ಉತ್ಪಾದನೆಯನ್ನು ರಫ್ತು ಮಾಡಲಾಗುವುದು.ಅಂದರೆ, 7 ಲಕ್ಷ ಕೋಟಿ ಮೊಬೈಲ್ ಮತ್ತು ಘಟಕಗಳನ್ನು ರಫ್ತು ಮಾಡಲಾಗುತ್ತದೆ. ಮುಂದಿನ 5 ವರ್ಷಗಳಲ್ಲಿ ಈ ಕಂಪನಿಗಳು ಸುಮಾರು 3 ಲಕ್ಷ ಭಾರತೀಯರಿಗೆ ಪ್ರತ್ಯಕ್ಷವಾಗಿ ಮತ್ತು 9 ಲಕ್ಷ ಭಾರತೀಯರಿಗೆ ಪರೋಕ್ಷವಾಗಿ  ಉದ್ಯೋಗ ಕಲ್ಪಿಸಲಿದ್ದಾರೆ.

“ಇಂದು ನಾವು ಇತಿಹಾಸ ನಿರ್ಮಿಸಲಿದ್ದೇವೆ. ನಾವು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುವಾಗ, ಪ್ರತ್ಯೇಕತಾವಾದಿಗಳು ಭಾರತದ ಬಗ್ಗೆ ಮಾತನಾಡುವುದಿಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಭಾರತದ ಆರ್ಥಿಕತೆಯ ಜೊತೆಗೆ ವಿಶ್ವದ ಆರ್ಥಿಕತೆಗೆ ಬಲ ನೀಡುವೆವು. ಮೇಕ್ ಇನ್ ಇಂಡಿಯಾ ಭಾರತಕ್ಕೆ ಮಾತ್ರ, ಇದು ಯಾವುದೇ ದೇಶಕ್ಕೆ ವಿರುದ್ಧವಾಗಿಲ್ಲ” ಎಂದು ಪ್ರಸಾದ್ ಹೇಳಿದ್ದರೆ. ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾದಾಗಿನಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ವಿಶೇಷವಾಗಿ ಮೊಬೈಲ್ ಉತ್ಪಾದನೆ ವೇಗವಾಗಿ ಬೆಳೆದಿದೆ ಎಂದು ಪ್ರಸಾದ್ ಹೇಳಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಎರಡು ಕಾರ್ಖಾನೆಗಳು ಇದ್ದವು. ಆದರೆ, ಪ್ರಸ್ತುತ ದೇಶಾದ್ಯಂತ ಸುಮಾರು 200 ಫ್ಯಾಕ್ಟರಿಗಲಿವೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಇಡೀ ವಿಶ್ವ ಕರೋನಾ ಬಿಕ್ಕಟ್ಟಿನ ಸಂಕಷ್ಟವನ್ನು ಎದುರಿಸುತ್ತಿದೆ, ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕರೋನಾ ಬಿಕ್ಕಟ್ಟಿನ ಈ ಯುಗದಲ್ಲಿಯೂ ಕೂಡ ಜಾಗತಿಕ ಹೂಡಿಕೆದಾರರಿಗೆ ಭಾರತ ನೆಚ್ಚಿನ ಹೂಡಿಕೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಜಾಗತಿಕ ಹೂಡಿಕೆದಾರರು ಏಪ್ರಿಲ್ ನಿಂದ ಜುಲೈ ತಿಂಗಳಲ್ಲಿ ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಈ ಜಾಗತಿಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ ಎಂಬುದು ಇಲ್ಲಿ ಗಮನಾರ್ಹ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *