Petrol-Diesel Price : ರಾಜ್ಯದಲ್ಲೂ 100 ರ ಗಡಿ ದಾಟಿದ ಪೆಟ್ರೋಲ್ ಬೆಲೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ
ಬೆಂಗಳೂರು : ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೆ ಏರಿಯುತ್ತಿದೆ. ಇಂದು ರಾಜ್ಯದಲ್ಲೂ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ. ದಾವಣಗೆರೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 100.17ಕ್ಕೆ ಏರಿಕೆ ಆದರೆ, ಡೀಸೆಲ್ ಬೆಲೆ ಒಂದು ಲೀಟರ್‌ಗೆ ₹ 92.83 ಆಗಿದೆ.
ನಿನ್ನೆ ಬಳ್ಳಾರಿ, ಶಿರಸಿಯಲ್ಲಿ ಪೆಟ್ರೋಲ್ ಬೆಲೆ 100 ರೂ.ಗೆ ತಲುಪಿತ್ತು. ಕಳೆದ ತಿಂಗಳು ಇದೇ ಸಮಯದಲ್ಲಿ ಪೆಟ್ರೋಲ್ ದರ(Petrol Price) ₹ 95.99 ಇದ್ದರೆ ಡೀಸೆಲ್ ದರ ₹88.06 ಇತ್ತು. ಆ ಮೂಲಕ ಒಂದು ತಿಂಗಳಲ್ಲಿ ಪೆಟ್ರೋಲ್ ₹ 4.18 ಹೆಚ್ಚಾದರೆ, ಡೀಸೆಲ್ ದರ ₹ 4.77 ಏರಿಕೆ ಕಂಡಿದೆ.
ಮೂರು ದಿವಸ ನಿರಂತರ ಏರಿಕೆ: ಮೇ 4ರಿಂದ 6ರವರೆಗೆ ಮೂರು ದಿನದಲ್ಲಿ ಇಂಧನ ದರ ನಿರಂತರವಾಗಿ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ 29 ಪೈಸೆ, 18 ಪೈಸೆ, 24 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ದರ(Diesel Price) ಒಂದು ಲೀಟರ್‌ಗೆ ಕ್ರಮವಾಗಿ 32, 20 ಹಾಗೂ 30 ಪೈಸೆಗಳಿಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 4.76 ರೂ.ಗಳಷ್ಟಿದ್ದರೆ, ಡೀಸೆಲ್ ಬೆಲೆ ಪ್ರತಿ ಲೈರ್‌ಗೆ 5.31 ರೂ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸುತ್ತವೆ.
ಮುಂಬೈ(Mumbai)ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 101.52 ರೂ. ಡೀಸೆಲ್ ಪ್ರತಿ ಲೀಟರ್‌ಗೆ 93.58 ರೂ. ರಾಜಸ್ಥಾನದ ಶ್ರೀ ಗಂಗನಗರ ಜಿಲ್ಲೆಯು ದೇಶದಲ್ಲಿ ಅತಿ ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 106.37 ರೂ ಮತ್ತು ಲೀಟರ್ ಗೆ 99.23 ರೂ. .
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ :
-ಚೆನ್ನೈ: ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 96.71 ರೂ; ಡೀಸೆಲ್ ಬೆಲೆ(Diesel Price) – ಪ್ರತಿ ಲೀಟರ್‌ಗೆ 90.92 ರೂ.
-ಕೋಲ್ಕತಾ: ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 95.28 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 89.07 ರೂ.
-ಬೆಂಗಳೂರು(Bengalure): ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 98.49 ರೂ. ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 91.41 ರೂ.
-ಹೈದರಾಬಾದ್: ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 99.06 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 93.99 ರೂ.
-ಪುಣೆ(Pune): ಪೆಟ್ರೋಲ್ ಬೆಲೆ – ಪ್ರತಿ ಲೀಟರ್‌ಗೆ 101.13 ರೂ; ಡೀಸೆಲ್ ಬೆಲೆ – ಪ್ರತಿ ಲೀಟರ್‌ಗೆ 91.77 ರೂ.