ಒಂದು ಸಲ ರಾಜ್ಯದ ಮಂತ್ರಿಯಾದ್ರೆ ಸಾಕು ನಮ್ಮ ಹಣೆ ಬರಹವೇ ಬದಲಾಗುತ್ತದೆ ಅಂತ ಕೆಲ ರಾಜಕಾರಣಿಗಳು ಕನಸು ಕಾಣುತ್ತಾರೆ. ಆದರೆ ನಮ್ಮ ಬಿ.ಎಸ್. ಯಡಿಯೂರಪ್ಪನವರ ಗ್ರಹಚಾರವೋ ಏನೋ ಗೊತ್ತಿಲ್ಲ. ಅವರು ಸಿಎಂ ಆದಾಗೆಲ್ಲಾ ಕಷ್ಟಗಳು ಬಂದೇ ಬರುತ್ತಿವೆ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅನುಕಂಪ ವ್ಯಕ್ತಪಡಿಸಿದ್ದಾರೆ.
ಹೊಸದುರ್ಗ ನಗರದ ಸ್ಲಂ ನಿವಾಸಿಗಳು ಹಾಗೂ ಕಡು ಬಡವರಿಗೆ ಉಚಿತವಾಗಿ 6,500 ಆಹಾರ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಗೂಳಿಹಟ್ಟಿ ಶೇಖರ್ ರಾಜ್ಯದಲ್ಲಿ ಸಿಎಂ ಬಿಎಸ್ ವೈ ಬದಲಾವಣೆ ವಿಚಾರದ ಚರ್ಚೆ ನಡೆಯುತ್ತಿದೆ. ರಾಜ್ಯದ ಸಿಎಂ ಆಗಿ ಬಿಎಸ್‍ವೈ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಆದ್ರೆ ಗ್ರಹಚಾರವೋ, ಏನೋ ಗೊತ್ತಿಲ್ಲ ಅವರು ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಎಲ್ಲೆಡೆ ನೆರೆ ಹಾವಳಿಯ ಸಂಕಷ್ಟ ಎದುರಾಗಿತ್ತು. ಆಗ ಎದೆಗುಂದದೇ ನೆರೆಹಾವಳಿಯನ್ನು ಸಿಎಂ ಎದುರಿಸಿದರು. ಈ ಬಾರಿಯು ಸಹ ನೆರೆ ಹಾವಳಿ ಜೊತೆಗೆ ಕೋವಿಡ್ ಸಂಕಷ್ಟ ಎದುರಾಗಿದೆ ಅಂದ ಹೇಳಿದ್ದಾರೆ..
ಹೀಗಾಗಿ ಪ್ರತಿದಿನ ತೀವ್ರ ಒತ್ತಡದಲ್ಲಿ ಸಿಎಂ ಕೆಲಸ ಮಾಡುವಂತಾಗಿದೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿಯಾಗಿ ನೆಮ್ಮದಿಯಿಂದ ಎಲ್ಲಾ ಪೂರೈಸುವುದು ಕಷ್ಟ ಎನಿಸುತ್ತಿದೆ. ಆದರೆ ಸಿಎಂ ಸ್ಥಾನದ ಬಗ್ಗೆ ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ಸಿಎಂ ಬದಲಾವಣೆ ಬಗ್ಗೆ ನಾನೇನು ಹೇಳಿಕೆ ನೀಡಲ್ಲ, ನಮ್ಮ ಪಕ್ಷದ ತೀರ್ಮಾನವೇ ಅಂತಿಮ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಸ್ಪಷ್ಟಪಡಿಸಿದ್ದಾರೆ