*ಪೆಟ್ರೋಲ್ , ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ. ಕತ್ತೆಗಳ ಜೊತೆ ಪ್ರತಿಭಟನೆ ಮಾಡಿ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದ ಸಿಪಿಐಎಂ ಪಕ್ಷದ ಸದಸ್ಯರು*
ಹೌದು ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಕೊಡ್ಲಿ ಗ್ರಾಮದಲ್ಲಿ ಸಿಪಿಐಎಂ ಪಕ್ಷದ ಸದಸ್ಯರು ಇಂದು ಕೇಂದ್ರ ಸರಕಾರದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ, ಪ್ರತಿಭಟನೆಮಾಡಿದ್ದರು .
ಬಳಿಕ ಮಾತನಾಡಿದ್ದ ಅವರು, ಕಳೆದ ಒಂದೂವರೆ ವರ್ಷದಿಂದ ದೇಶದ ಜನತೆ ತೀವ್ರ ರೀತಿಯ ಕೋವಿಡ್ ಸಂಕಷ್ಠ ಎದುರಿಸುತ್ತಿರುವಾಗಲೇ ಅವರ ಸಂಕಟ ನಿವಾರಣೆಗೆ ಕ್ರಮ ವಹಿಸುವ ಬದಲು. ಅವರ ಮೇಲೆ ಭಾರೀ ಬೆಲೆ ಏರಿಕೆಯ ಹೊರೆ ಹೇರುವ ಕ್ರೌರ್ಯವನ್ನು ಮೆರೆಯುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯು 25 ರೂ. ಗಳಷ್ಟು ಹೆಚ್ಚಳಗೊಂಡಿದೆ. ಕಳೆದ ಒಂದು ತಿಂಗಳಲ್ಲಿ 16 ಬಾರಿ ಬೆಲೆ ಏರಿಸಲಾಗಿದೆ. ಈಗಾ ಅದು 100 ರೂ.ಗಳನ್ನು ದಾಟಿದೆ. ಡೀಸೆಲ್ ಬೆಲೆಯು 100 ರೂ.ಗಳಿಗೆ ಹತ್ತಿರವಾಗಿದೆ. ಅಡುಗೆ ಅನಿಲವೂ ಭಾರಿ ಏರಿಕೆ ಕಂಡಿದೆ.
ಇದು ಅತ್ಯಂತ ಅಸಹನೀಯವಾಗಿದೆ ಎಂದು ಸಿಪಿಐಎಂ ಕೇಂದ್ರ ಸರಕಾರದ ಈ ಜನವಿರೋಧಿ ಹಾಗೂ ಲೂಟಿಕೋರ ನೀತಿಯನ್ನು ಬಲವಾಗಿ ಖಂಡಿಸುತ್ತದೆ. ಇದು ಸಹಜವಾಗಿಯೇ ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಗಿದೆ.
ಜಾಗತಿಕವಾಗಿ ಕಚ್ಛಾ ತೈಲದಲ್ಲಿ ಯಾವುದೇ ಬೆಲೆ ಏರಿಕೆ ಆಗದಿದ್ದರೂ ದೇಶದಲ್ಲಿ ಈ ಪ್ರಮಾಣದಲ್ಲಿ ಇವುಗಳ ಬೆಲೆಗಳು ಏರಿಕೆಯಾಗಲೂ ಕೇಂದ್ರ ಸರಕಾರವೇ ನೇರ ಹೊಣೆಗಾರನಾಗಿದೆ. ಇದು ಜನತೆಯನ್ನು ದೊಡ್ಡ ಪ್ರಮಾಣದಲ್ಲಿ ಲೂಟಿಗೊಳಪಡಿಸುವ ವಿಚಾರವಾಗಿದ್ದು ಇದನ್ನು ರಾಜ್ಯದಾದ್ಯಂತ ಪ್ರತಿರೋಧಿಸುವಂತೆ ಜನತೆಗೆ ಸಿಪಿಐಎಂ ಕರೆ ನೀಡಿತ್ತು. ಅದರಂತೆ ಇಂದು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಕತ್ತೆಗಳ ಜೊತೆ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದರು. ಈ ಸಂದರ್ಭದಲ್ಲಿ
ಗುರುನಂದೇಶ ಕೋಣಿನ್ ತಾಲೂಕ ಸದಸ್ಯರು CPIM,
ಶಿವಕುಮಾರ ಪೊಲೀಸ್ ಪಾಟೀಲ್ ವಜೀರಗಾಂವ್, ಶಿವಕುಮಾರ ಪ್ಯಾಟಿಮನಿ. ಉಪಸ್ಥಿತರಿದ್ದರು.
ವರದಿ ಶಿವರಾಜ್ ಕಟ್ಟಿಮನಿ