ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಚಿಕಿತ್ಸೆ ನೀಡದೆ ನಿರ್ಲಕ್ಷ ವಹಿಸಿದ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹ
ಕೋವಿಡ್ 19 ಸಂಧರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ ಪತ್ರಕರ್ತರಿಗಾಗಿ ಪ್ಯಾಕೇಜ್ ಘೋಷಿಸುವಂತೆ ಹಾಗೂ ಪತ್ರಕರ್ತರನ್ನ ಫ್ರಂಟ್ ಲೈನ್ ವರ್ಕರ್ ಎಂದು ಘೋಷಿಸಿ ಯಾವುದೇ ಸೌಲಭ್ಯ ಅವರಿಗೆ ನೀಡದಿರುವುದನ್ನ ಖಂಡಿಸಿ ಅಫಜಲ್ಪುರ್ ತಾಲೂಕಿನ ಪತ್ರಕರ್ತರ ಬಳಗದಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು . ಈ ಸಂಧರ್ಭದಲ್ಲಿ ಅಫಜಲಪುರದ ಎಲ್ಲ ಹಿರಿಯ ಮತ್ತು ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು