ಬದುಕಿನ ಬೇಸರದ ಅನುಭವ ಬಿಚ್ಚಿಟ್ಟ ನಟಿ ಪ್ರಿಯಾಮಣಿ ಹಾಗೆಲ್ಲ ಮಾಡಬೇಡಿ ಎಂದು ಹೇಳಿದ್ರು!

ಹೈಲೈಟ್ಸ್‌:

  • ನಟಿ ಪ್ರಿಯಾಮಣಿ ಅವರು ಬಾಡಿಶೇಮಿಂಗ್‌ಗೆ ಒಳಗಾಗಿದ್ದರು
  • ಬಾಡಿಶೇಮಿಂಗ್ ಕುರಿತು ಮನಬಿಚ್ಚಿ ಮಾತನಾಡಿದ ನಟಿ ಪ್ರಿಯಾಮಣಿ
  • ‘ದಿ ಫ್ಯಾಮಿಲಿ ಮ್ಯಾನ್ 2’ ನಂತರದಲ್ಲಿ ಬಾಲಿವುಡ್‌ನ ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಿಯಾಮಣಿ ಬಣ್ಣ ಹಚ್ಚುತ್ತಿದ್ದಾರೆ
  • ಅಜಯ್ ದೇವಗನ್ ಅವರ ‘ಮೈದಾನ್’ ಸಿನಿಮಾದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ

ಪಂಚಭಾಷಾ ತಾರೆ ನಟಿ ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2‘ ಸಿರೀಸ್ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಈ ಹಿನ್ನಲೆಯಲ್ಲಿ ಪ್ರಿಯಾಮಣಿ ಕೂಡ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಆ ವೇಳೆ ಬಾಡಿ ಶೇಮಿಂಗ್‌ ಆದ ಕುರಿತು ಮಾತನಾಡಿಕೊಂಡಿದ್ದಾರೆ.

ನನ್ನನ್ನು ಯಾವ ರೀತಿಯಲ್ಲಿ ನೋಡಲು ಇಷ್ಟಪಡ್ತೀರಿ?
“ಅನೇಕ ಬಾರಿ 65ಕೆಜಿ ತೂಕ ದಪ್ಪ ಆಗಿದ್ದೆ, ಈಗ ಹೇಗಿದ್ದೀನೋ ಅದಕ್ಕಿಂತ ಏನೂ ದಪ್ಪ ಕಾಣುತ್ತಿರಲಿಲ್ಲ. ಆದರೆ ಕೆಲವರು ನೀವು ದಪ್ಪ ಆಗಿದ್ದೀರಿ ಅಂತೆಲ್ಲ ಹೇಳುತ್ತಿದ್ದರು. ಈಗ ಜನರು ಯಾಕೆ ನೀವು ಸಣ್ಣ ಆದ್ರಿ ಅನ್ನುತ್ತಾರೆ. ನೀವು ದಪ್ಪ ಆಗಿದ್ದಾಗಲೇ ಇಷ್ಟ ಆಗುತ್ತಿದ್ರಿ ಎನ್ನುತ್ತಾರೆ. ಆಗ ನಾನು ದಪ್ಪ ಅಥವಾ ತೆಳ್ಳಗೆ ಯಾವ ರೀತಿಯಲ್ಲಿ ನನ್ನನ್ನು ನೋಡಲು ಇಷ್ಟಪಡ್ತೀರಿ ಅಂತ ಸ್ಪಷ್ಟಪಡಿಸಿಕೊಳ್ಳಿ ಎಂದು ಹೇಳುತ್ತಿದ್ದೆ” ಎಂದಿದ್ದಾರೆ ಪ್ರಿಯಾಮಣಿ

ನಾನೇನು ಬೆಳ್ಳಗಿಲ್ಲ…

“ಯಾಕೆ ನೀವು ಬಾಡಿ ಶೇಮ್ ಮಾಡ್ತೀರಿ? ಯಾಕೆ ಮಾಡಬೇಕು? ಕೆಲವರು ನೀವು ಕಪ್ಪಗೆ ಕಾಣುತ್ತಿದ್ದೀರಿ, ಡಾರ್ಕ್ ಆಗಿದ್ದಿರಿ ಅಂತ ನನಗೆ ಹೇಳಿದ್ದಾರೆ. ನಿಮ್ಮ ಮುಖ ಬೆಳಗ್ಗೆ ಇದೆ, ಕಾಲು ಕಪ್ಪಿದೆ ಎಂದಿದ್ದರು. ಆಗೆಲ್ಲ ನಾನು ನಿಮಗೇನು ಕಷ್ಟ? ಏನು ತಪ್ಪಿದೆ? ನಾನು ಡಾರ್ಕ್ ಸ್ಕಿನ್ ಹೊಂದಿದ್ದರೂ ಕೂಡ ನಾನು ಬೆಳ್ಳಗೆ ಇದ್ದೇನೆಂದು ನಂಬೋದಿಲ್ಲ. ಗೋಧಿ ಬಣ್ಣ ಎಂದುಕೊಳ್ಳುತ್ತೇನೆ” ಎಂದು ಪ್ರಿಯಾಮಣಿ ಹೇಳಿದ್ದಾರೆ.

ಹಾಗೆಲ್ಲ ಮಾಡಬೇಡಿ
“ನಾನು ಕಪ್ಪಗಿದ್ದರೆ ಏನು ತಪ್ಪು? ಮೊದಲನೆಯದಾಗಿ ನಿಮ್ಮ ಅಭಿಪ್ರಾಯ ಬದಲಿಸಿಕೊಳ್ಳಿ. ಯಾರನ್ನೂ ಕಪ್ಪು ಅಂತ ಕರೆಯಬೇಡಿ. ಕಪ್ಪು ನಿಜಕ್ಕೂ ಸುಂದರವಾದುದು. ಶ್ರೀಕೃಷ್ಣ ಕಪ್ಪಗಿದ್ದ. ಆತ ತುಂಬ ಸುಂದರವಾಗಿದ್ದ. ಈ ರೀತಿ ಕಾಮೆಂಟ್ ಮಾಡಬೇಡಿ. ನೀವು ದಪ್ಪ, ಕಪ್ಪು ಅಂತೆಲ್ಲ ಹೇಳಿ ನಿಮ್ಮ ತಲೆಯಲ್ಲಿ ಏನೇ ಇದ್ದರೂ ಹಾಗೆ ಇಟ್ಟುಕೊಳ್ಳಿ, ಯಾಕೆ ನೆಗೆಟಿವಿಟಿ ಹಂಚುತ್ತೀರಿ? ಹಾಗೆಲ್ಲ ಮಾಡಬೇಡಿ” ಎಂದು ಪ್ರಿಯಾಮಣಿ ಕಿವಿಮಾತು ಹೇಳಿದ್ದಾರೆ. ಇನ್ನು ವೃತ್ತಿ ವಿಚಾರಕ್ಕೆ ಬರೋದಾದರೆ ಪ್ರಿಯಾಮಣಿ ಕೈತುಂಬ ಸಿನಿಮಾಗಳಿವೆ, ನಟ ಅಜಯ್ ದೇವಗನ್ ಅವರ ‘ಮೈದಾನ್’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *