ಬ್ಲಾಕ್ ಫಂಗಸ್ ಔಷಧ ಕಾಳಸಂತೆಯಲ್ಲಿ ಮಾರಾಟ:ಜಿಮ್ಸ್ ನೌಕರ ಅರೆಸ್ಟ್
ಕಲಬುರಗಿ,ಜೂ.15:ಆಕ್ಸಿಜನ್, ರೆಮ್‍ಡಿಸಿವಿರ್ ಇಂಜೆಕ್ಷನ್ ಬಳಿಕ ಈಗ ಬ್ಲಾಕ್ ಫಂಗಸ್ ಸೋಂಕಿತರಿಗೆ ನೀಡುವ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಉದ್ಯೋಗಿಯೊಬ್ಬರನ್ನು ಸಿಟಿ ಪೆÇಲೀಸ್ ಕಮಿಷನ್‍ರೇಟ್ ಪೆÇಲೀಸರ ಸಹಕಾರದೊಂದಿಗೆ ಮಹಾರಾಷ್ಟ್ರ ಪೊಲೀಸ್ ರು ಬಂಧಿಸಿದ್ದಾರೆ.
ರಾಜಕುಮಾರ ಭಜಂತ್ರಿ ಎಂಬುವರೇ ಬಂಧಿತ ವ್ಯಕ್ತಿ. ಜಿಮ್ಸ್ ಆಸ್ಪತ್ರೆಯಲ್ಲಿ ನಸಿಂಗ್ ಸ್ಟಾಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೋವಿಡ್ ಸೋಂಕಿತರು ಗುಣಮುಖರಾದ ನಂತರ ಅವರಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ ಸೋಂಕಿನ ಚಿಕಿತ್ಸೆಗೆ ಖಾಸಗಿ ವಲಯದಲ್ಲಿ ಎಂಪಿಟೋರಿಸಿನ್ ಬಿ ಎಂಬ ಔಷಧ ಮಾರಾಟಕ್ಕೆ ಸಿಗುತ್ತಿಲ್ಲ. ಸರ್ಕಾರವು ಅದನ್ನು ಕೇವಲ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಈಗ ಸರಬರಾಜು ಮಾಡುತ್ತಿದೆ.
ಜಿಮ್ಸ್ ಉದ್ಯೋಗಿಯಾಗಿರುವ ಭಜಂತ್ರಿ ಎಂಬುವರು, ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ನೀಡಬೇಕಾಗಿದ್ದ ಇಂಜೆಕ್ಷನ್ ವೈಲ್‍ನ್ನು ರಾಮ ಲೆಕ್ಕ ಕೃಷ್ಣ ಲೆಕ್ಕ ತೋರಿಸಿ ಅದನ್ನು ತೆಗೆದುಕೊಂಡು ಹೋಗಿ ಮಹಾರಾಷ್ಟ್ರದ ಪೂನಾದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು ಎಂದು ಉನ್ನತ ಪೆÇಲೀಸ್ ಮೂಲಗಳು ತಿಳಿಸಿವೆ.
ಪೂನಾದಿಂದ ಬಂದಿದ್ದ ಪೆÇಲೀಸರ ತಂಡ, ಸಿಟಿ ಪೆÇಲೀಸ್ ಆಯುಕ್ತಾಲಯದ ಪೆÇಲೀಸರ ಸಹಕಾರ ಪಡೆದುಕೊಂಡು ಜಿಮ್ಸ್‍ಗೆ ತೆರಳಿ ಅಲ್ಲಿಂದ ಅರೋಪಿತನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಜಿಮ್ಸ್‍ನಲ್ಲಿ ದಾಖಲಾಗಿರುವ ರೋಗಿಗಳಿಗೆ ನೀಡಬೇಕಾಗಿರುವ ಔಷಧ ಮೇಲೆ ಹಿರಿಯ ವೈದ್ಯಾಧಿಕಾರಿಗಳು ನಿಗಾ ವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.