ಕೊರೋನಾ ನಡುವೆ ಟ್ರಿಪ್ ​ಗೆ ಹೋಗಬೇಕು ಅಂತಾ ಇದ್ದೀರಾ ಹಾಗಿದ್ರೆ ಈ ಸ್ಟೋರಿ ನೋಡಿ..!

ಕೊರೋನಾ ನಡುವೆ ಟ್ರಿಪ್​ಗೆ ಹೋಗಬೇಕು ಅಂತಾ ಇದ್ದೀರಾ ಹಾಗಿದ್ರೆ ಈ ಸ್ಟೋರಿ ನೋಡಿ..!


ಕೊರೋನಾದಿಂದಾಗಿ ಮನೆಯಲ್ಲಿ ಇದ್ದು ಸಾಕಾಗಿದ್ದವರು ಅದೆಷ್ಟೋ ಜನ, ಪಾರಂಪರಿಕ ತಾಣಗಳನ್ನು ವೀಕ್ಷಣೆ ಮಾಡಬೇಕು ಎಂದುಕೊಂಡವರಿಗೆ ಇಲ್ಲಿದೆ ಗುಡ್​ ನ್ಯೂಸ್. ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಅಡಿಯಲ್ಲಿರುವ ಬರುವ ಎಲ್ಲಾ ಪಾರಂಪರಿಕ ಮತ್ತು ಸಂರಕ್ಷಿತ ಸ್ಮಾರಕಗಳು ಪ್ರವಾಸಿ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಜೂನ್ 16 ರಿಂದ ತೆರೆಯಲಾಗುವುದು ಎಂದು ಸರ್ವೇಕ್ಷಣಾ ಸಂಸ್ಥೆ ಪ್ರಕಟಿಸಿದೆ.
ಕೊವಿಡ್​-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಕೇಂದ್ರೀಕೃತ ಸಂರಕ್ಷಿತ ಸ್ಮಾರಕಗಳು, ತಾಣಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಜೂನ್ 16 ರಿಂದ ತೆರೆಯಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಅಧಿಕಾರಿ ಪ್ರಹ್ಲಾದ್ ಸಿಂಗ್ ಪಟೇಲ್ ಆದೇಶದಲ್ಲಿ ತಿಳಿಸಿದ್ದಾರೆ.


ಕೋವಿಡ್​-19 ಎರಡನೇ ಅಲೆಯಿಂದಾಗಿ ಭಾರತದ ದೇಶದಲ್ಲಿ ಬರುವ ಎಲ್ಲಾ ಪಾರಂಪರಿಕ ಸ್ಥಳ, ಅರಮನೆಗಳು, ದೇವಸ್ಥಾನಗಳನ್ನು ಬಂದ್​ ಮಾಡಿ ಆದೇಶವನ್ನು ಹೊರಡಿಸಿತ್ತು. ತಾಜ್ ಮಹಲ್, ಕೆಂಪು ಕೋಟೆ ಮತ್ತು ಅಜಂತ ಗುಹೆಗಳು ಸೇರಿದಂತೆ ಎಲ್ಲಾ ಕೇಂದ್ರೀಕೃತ ಸಂರಕ್ಷಿತ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಏಪ್ರಿಲ್ 15 ರಂದು ಮುಚ್ಚಲು ಸರ್ಕಾರ ಆದೇಶಿಸಿತ್ತು. ಇದೀಗ ಕೊರೋನಾ ಎರಡನೇ ಅಲೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರವಾಸಿ ತಾಣಗಳನ್ನು ತೆರೆಯಲು ಸರ್ವೇಕ್ಷಣಾ ಸಂಸ್ಥೆ ಪ್ರಕಟಿಸಿದೆ
ಎಎಸ್‌ಐ ವ್ಯಾಪ್ತಿಯಲ್ಲಿದೆ ಸುಮಾರು 100 ವರ್ಷಕ್ಕಿಂತ ಹಳೆಯದಾದ ಸ್ಮಾರಕಗಳು ಬರುತ್ತವೆ. ಉತ್ತರ ಪ್ರದೇಶದ ತಾಜ್ ಮಹಲ್ ಮತ್ತು ಆಗ್ರಾ ಕೋಟೆಗಳು ಸೇರಿದಂತೆ ಕರ್ನಾಟಕದ ಹಂಪಿ, ಬಾದಾಮಿ, ಪಟ್ಟದಕಲ್ಲು ಗೋಳಗುಮ್ಮಟ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳು ಸಹ ಎಎಸ್‌ಐ ವ್ಯಾಪ್ತಿಗೆ ಬರುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *