ಕೊರೊನಾ ಇಳಿಕೆ, ಅಂತು ಇಂತು ತುಸು ನೆಮ್ಮದಿ ತಂತು
ಬೆಂಗಳೂರು, ಜೂ.15- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದು ಚೇತರಿಕೆ ದ್ವಿಗುಣಗೊಳ್ಳುತ್ತಿವೆ. ಇದರ ಪರಿಣಾಮ ಪಾಸಿಟಿವಿಟಿ ಪ್ರಮಾಣ ರಾಜ್ಯದಲ್ಲಿ ಪ್ರತಿಶತ 3.8 ಕ್ಕೆ ಕುಸಿದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ 985 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕು ಮತ್ತು ಸಾವಿನ ಸಂಖ್ಯೆ ಇಳಿಕೆಯಾಗುತ್ತಿರುವುದು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 5041 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 115 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.14,785 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 27,77,010 ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ಇಲ್ಲಿಯ ತನಕ ಚೇತರಿಸಿಕೊಂಡವರ ಸಂಖ್ಯೆ 25,81,559 ಮಂದಿ ಗುಣಮುಖರಾಗಿದ್ದಾರೆ.
ಸದ್ಯ ರಾಜ್ಯದಲ್ಲಿ 1,62,282 ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿದ್ದು ಸಕ್ರಿಯ ಪ್ರಕರಣಗಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಕಡಿಮೆ
ರಾಜಧಾನಿ ಬೆಂಗಳೂರಿನಲ್ಲಿ ಇಂದು 985 ಮಂದಿಗೆ ಸೋಂಕು ಕಾಣಿಸಿಕೊಂಡು 2,818 ಮಂದಿ ಚೇತರಿಸಿಕೊಂಡಿದ್ದಾರೆ
1.32 ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,32,600 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯ ತನಕ 3,19,23,601 ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕು ಸಂಖ್ಯೆ
ಜಿಲ್ಲೆ ಎಷ್ಟು
- ಬಾಗಲಕೋಟೆ – 23
- ಬಳ್ಳಾರಿ – 122
- ಬೆಳಗಾವಿ – 95
- ಬೆಂಗಳೂರು ಗ್ರಾಮಾಂತರ- 133
- ಬೆಂಗಳೂರು ನಗರ. – 985
- ಬೀದರ್ – 2
- ಚಾಮರಾಜನಗರ – 79
- ಚಿಕ್ಕಬಳ್ಳಾಪುರ – 65
- ಚಿಕ್ಕಮಗಳೂರು – 224
- ಚಿತ್ರದುರ್ಗ – 95
- ದಕ್ಷಿಣ ಕನ್ನಡ – 482
- ದಾವಣಗೆರೆ – 183
- ಧಾರವಾಡ – 65
- ಗದಗ – 21
- ಹಾಸನ -522
- ಹಾವೇರಿ – 29
- ಕಲಬುರಗಿ- 26
- ಕೊಡಗು – 64
- ಕೋಲಾರ – 162
- ಕೊಪ್ಪಳ – 30
- ಮಂಡ್ಯ – 213
- ಮೈಸೂರು – 490
- ರಾಯಚೂರು -5
- ರಾಮನಗರ – 25
- ಶಿವಮೊಗ್ಗ – 282
- ತುಮಕೂರು – 329
- ಉಡುಪಿ – 107
- ಉತ್ತರ ಕನ್ನಡ – 122
- ವಿಜಯಪುರ – 50
- ಯಾದಗಿರಿ- 11