ಕಲಬುರಗಿ : ಕಾಳನೂರ್ ತಾಂಡಾದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಜೀವಾವಧಿ ಶಿಕ್ಷೆ
ಕಲಬುರಗಿ,ಜೂ.16: ತಾಲ್ಲೂಕಿನ ಕಾಳನೂರ್ ತಾಂಡಾದ ಬಾಲಕಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಆರೋಪಿ ಅರವಿಂದ್ ಅಲಿಯಾಸ್ ವಿನೋದ್ ತಂದೆ ಗನ್ನು ರಾಠೋಡ್‍ನಿಗೆ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್. ಗೋಪಾಲಕೃಷ್ಣ ಅವರು ಜೀವಾವಧಿ ಶಿಕ್ಷೆ ಹಾಗೂ 50,000ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದರು.
ಕಳೆದ 2017ನೇ ಸಾಲಿನಲ್ಲಿ ಬಾಲಕಿಯ ತಾಯಿಯು ಗುಲಬರ್ಗಾ ವಿಶ್ವವಿದ್ಯಾಲಯದ ಪೋಲಿಸ್ ಠಾಣೆಯಲ್ಲಿ ಈ ಕುರಿತು ದೂರು ಸಲ್ಲಿಸಿದ್ದಳು. ಆಗಿನ ತನಿಖಾಧಿಕಾರಿ ಹಾಲಿ ಎಂ.ಬಿ. ನಗರ ವೃತ್ತದ ಸಿಪಿಐ, ಸದ್ಯ ಸಹಾಯಕ ಪೋಲಿಸ್ ಆಯುಕ್ತ ಜೆ.ಎಚ್. ಇನಾಂದಾರ್ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಎಸ್.ಎಸ್. ಘಂಟಿಮಠ್ ಅವರು ವಾದ ಮಂಡಿಸಿದ್ದರು.