ಪಿಯುಸಿ ಫಲಿತಾಂಶಕ್ಕೆ ಹೈಕೋರ್ಟ್ ತಡೆ
ಬೆಂಗಳೂರು, ಜೂ. 18- ಮಹತ್ವದ ಬೆಳವಣಿಗೆ ಯೊಂದರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡದಂತೆ ಹೈಕೋರ್ಟ್ ತಡೆ ಹಿಡಿದಿದೆ.
ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಪಾಸ್ ಮಾಡುತ್ತೇವೆ ಎಂದು ಸರ್ಕಾರ ಆದೇಶ ನೀಡಿತ್ತು.
ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ರಿಪೀಟರ್ಸ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಫೀಠ, ಫಲಿತಾಂಶ ಪ್ರಕಟಿಸಿದಂತೆ ತಡೆ ನೀಡಿತು.
ಕಳೆದ ವಾರ ರಿಪಿಟರ್ಸ್ ವಿಧ್ಯಾರ್ಥಿಗಳು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚನೆ ನೀಡಿತ್ತು. ಇಂದು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ತಮ್ಮ ನಿಲುವನ್ನು ತಿಳಿಸಿ ಈಗಾಗಲೇ 12 ತಜ್ಞರ ಸಮಿತಿ ರಚಿಸಿರುವುದಾಗಿ ಹೈಕೋರ್ಟಿಗೆ ಮಾಹಿತಿ ಒದಗಿಸಿತು.
76 ಸಾವಿರ ರಿಪೀಟರ್ಸ್‍ಗಳ ಫಲಿತಾಂಶದ ಬಗ್ಗೆ ತೀರ್ಮಾನ ಮಾಡಲಿದೆ. ತಜ್ಞರ ಸಮಿತಿ ಸಲಹೆ ಆಧರಿಸಿ ಸರ್ಕಾರ ಮುಂದಿನ ಕ್ತಮ ಕೈಗೊಳ್ಳಲಿದೆ. ಎರಡು ವಾರಗಳಲ್ಲಿ ಸಮಿತಿ ವರದಿ ನೀಡಲಿದೆ ಎಂದು ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಕೃಷ್ಣಪ್ಪ ಹೈಕೋರ್ಟಿಗೆ ವಿವರ ನೀಡಿದರು.
ರಿಪೀಟರ್ಸ್ ಮತ್ತು ಸಾಮಾನ್ಯ ವಿಧ್ಯಾರ್ಥಿಗಳ ನಡುವೆ ಯಾವುದೇ ರೀತಿಯ ತಾರತಮ್ಯ ಬೇಡ ಎಂದು ಹೇಳಿ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿದೆ.