Coronavirus: ಕಷಾಯದಿಂದ ಕೊರೊನಾ ಓಡಿಸಿದ ಕೈದಿಗಳು, ಸೆಂಟ್ರಲ್ ಜೈಲ್ ಕೂಡಾ ಈಗ ಮಾದರಿ ಸ್ಥಳ !
ಬೆಂಗಳೂರು: ರಾಜ್ಯದ ಕಾರಾಗೃಹಗಳಿಗೆ ಸೆಂಟ್ರಲ್ ಜೈಲ್ ಮಾದರಿಯಾಗಿದೆ..ಇಡೀ ರಾಜ್ಯದಲ್ಲೇ ಮೊದಲು ಕೊರೊನಾ ಪಾಸಿಟಿವ್ ಬಂದಿದ್ದ ಜೈಲಿಂದು ಕೊರೊನಾ ಮುಕ್ತವಾಗಿದೆ.. ನೂರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳಿದ್ದ ಸೆಂಟ್ರಲ್ ಜೈಲ್ ಕಂಟ್ರೋಲ್ ಗೆ ಬರಲು ಕಾರಣವಾಗಿದ್ದು ಜೈಲಾಧಿಕಾರಿಗಳ ದಶಸೂತ್ರ..ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಪಾಸಿಟಿವ್ ಬರ್ತಿತ್ತು.. ವಿಚಾರಣಾಧಿನಾ ಕೈದಿಗಳಿಂದಲೇ ಹೆಚ್ಚು ಸೊಂಕು ಕಾಣಿಸಿಕೊಂಡಿತ್ತು..ಈ ನಡುವೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಜೈಲಿಗೆ ಭೇಟಿ ಕೊಟ್ಟು , ಸೊಂಕಿನ ಕಡಿವಾಣಕ್ಕೆ ಸೂಚನೆ ಕೊಟ್ಟಿದ್ರು.. ಇದರ ಬೆನ್ ನಲ್ಲೇ ಕೇವಲ ಇಪ್ಪತ್ತು ದಿನದಲ್ಲಿ ಕೊರೊನಾ ಕಂಟ್ರೋಲ್ ಗೆ ತರಲಾಗಿದೆ..ಕಳೆದ ಒಂದು ವಾರದಿಂದಲೂ ಯಾವುದೇ ಪಾಸಿಟಿವ್ ಕೇಸ್ ರಿಪೋರ್ಟ್ ಆಗಿಲ್ಲ…ಈ ಮೂಲಕ ಪರಪ್ಪನ ಅಗ್ರಹಾರ ಕಾರಾಗೃಹ ಇತರೆ ಕಾರಾಗೃಹಗಳಿಗೆ ಮಾದರಿಯಾಗಿದೆ…
ಕೊರೊನಾ ಮುಕ್ತವಾಗಲು ಅನುಕೂಲವಾಗಿದ್ದು ಜೈಲಾಧಿಕಾರಿಗಳ ದಶಸೂತ್ರವಾಗಿದೆ..ಯಾರೇ ವಿಚಾರಣಾಧೀನಾ ಕೈದಿ ಬಂದ್ರೂ ಹದಿನಾಲ್ಕು ದಿನ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.ಕ್ವಾರಂಟೈನ್ ನಲ್ಲಿರೋ ಪ್ರತಿ ಕೈದಿಗೆ ದಿನಕ್ಕೆ ಎರಡು ಬಾರಿ ಕಷಾಯ ಸಹ ನೀಡಲಾಗ್ತಿದೆ..ಎಲ್ಲಾ ಕೈದಿಗಳಿಗೆ ಪ್ರತಿನಿತ್ಯ ಇಮ್ಯೂನಿಟಿ ಬೂಸ್ಟ್ ಮಾಡುವ ಔಷಧಿ ಕೊಡಲಾಗ್ತಿದೆ…ಯಾರೇ ಸಿಬ್ಬಂದಿ ಮೂರು ದಿನ ರಜೆ ಹೋದ್ರು ಸಹ ಕಡ್ಡಾಯ ನೆಗಟಿವ್ ರಿಪೋರ್ಟ್ ತರಬೇಕು..ಬ್ಯಾರಕ್ ಗಳಲ್ಲಿ ಐದು ಮಂದಿ ಕೈದಿಗಳು ಮಾತ್ರ ಇರಲು ಸೂಚನೆ ನೀಡಲಾಗಿದೆ.. ಯಾವುದೇ ಕೈದಿಗೆ ಸಣ್ಣ ನೆಗಡಿ, ಕೆಮ್ಮು ,ಜ್ವತ ಏನೇ ಇದ್ರೂ ಪ್ರತ್ಯೇಕ ಮಾಡಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ..
ಹೊರಗಿನ ತಿಂಡಿ ತಿನಿಸುಗಳಿಗೆ ಬ್ರೇಕ್ ಹಾಕಿದ್ದು, ಜೈಲಿನ ಒಳಗೆತಯಾರಿಸಿದ ತಿಂಡಿಯೇ ನೀಡಲಾಗುತ್ತೆ…ಒಂದ್ವೇಳೆ ಕುಟುಂಬಸ್ಥರನ್ನ ಯಾರಾದ್ರು ಕೈದಿ ನೋಡಲೇಬೇಕು ಎಂದಾಗ ಆನ್ ಲೈನ್ ವಿಡಿಯೋ ಮೂಲಕ ಭೇಟಿಗೆ ಅವಕಾಶ ಕೊಡಲಾಗುತ್ತೆ.. ಇದಕ್ಕೆ ಒಂದು ವಾರದ ಮುಂಚೆಯೇ ನೊಂದಾಣಿ ಮಾಡಿಕೊಳ್ಳಬೇಕು..ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಒಟ್ಟು 4643 ಕೈದಿಗಳಿದ್ದಾರೆ…ಕೋವಿಡ್ 19 ಹೆಚ್ಚಾದ ಹಿನ್ನಲೆ ಸುಪ್ರಿಂ ಕೋರ್ಟ್ ಆದೇಶದಂತೆ 92 ಮಂದಿಗೆ ಜೈಲಾಧಿಕಾತಿ ಪೆರೋಲ್ ಕೊಟ್ಟಿದ್ದು, ಈ ಮೂಲಕ ಜೈಲಿನಲ್ಲಿ ಜನಸಂದಣಿ ಕಡಿಮೆ ಮಾಡಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ..