ಜುಲೈ 30ರವರೆಗೆ ಸಾರ್ವಜನಿಕರಿಗೆ ಗೋವಾ ಪ್ರವಾಸ ತಡೆ

ಗೋವಾ ಅಂದ್ರೆ ಯಾರೆಲ್ಲ ಇಷ್ಟಪಡೋದಿಲ್ಲ ಹೇಳಿ ಲಾಕ್​ಡೌನ್​ ಮುಗಿದ ನಂತರ ಗೋವಾಗೆ ಹೋಗಿ ಬರಬೇಕು ಎಂದು ಪ್ರವಾಸಿಗರು ಆಸೆ ಇರುತ್ತದೆ ಲಾಕ್​ಡೌನ್​ನಿಂದ ಮನೆಯಲ್ಲಿ ಇದ್ದವರು ಗೋವಾ ಪ್ರವಾಸಕ್ಕೆ ತೆರಳಲು ಯೋಜನೆ ಹಾಕಿಕೊಂಡುತ್ತೀರಾ ಆದರೆ ಗೋವಾ ಸರ್ಕಾರ ಜುಲೈ 30ರವರೆಗೆ ಪ್ರವಾಸಿಗರಿಗೆ ನಿರ್ಬಂಧ ಹಾಕಿದ್ದಾರೆ.

ಹೌದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜನರ ಆರೋಗ್ಯದ ದೃಷ್ಠಿಯಿಂದ ಪ್ರವಾಸಿಗರಿಗೆ ನಿರ್ಬಂಧ ಹಾಕಿದ್ದಾರೆ ಗೋವಾದಲ್ಲಿ ಪ್ರತಿಯೊಬ್ಬರು ಕೊವಿಡ್​ ಲಸಿಕೆ ಪಡೆದ ಬಳಿಕವಷ್ಟೇ ಪ್ರವಾಸಿಗರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡುತ್ತೆವೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್​ ತಿಳಿಸಿದ್ದಾರೆ.

ಗೋವಾ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಕೊವಿಡ್​ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ, ಆದರೆ ಪ್ರವಾಸಿಗರಿಗೆ ಮಾತ್ರ ಗೋವಾ ಪ್ರವಾಸಕ್ಕೆ ತಡೆ ನೀಡಿದ್ದಾರೆ. ಗೋವಾದಲ್ಲಿನ ಪ್ರತಿಯೊಬ್ಬ ನಾಗರೀಕನು ಮೊದಲ ಲಸಿಕೆ ಪಡೆದ ಬಳಿಕವಷ್ಟೆ ಪ್ರವಾಸಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಗೋವಾದ ಮುಖ್ಯಮಂತ್ರಿ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *