Alcohol Effect: ದುಡ್ಡು ಸಿಗಲಿಲ್ಲ ಅಂತ ತನ್ನ ಕಾಲನ್ನೇ ಕಡಿದುಕೊಂಡ ವ್ಯಕ್ತಿ, ಕಾಲು ಪೀಸ್ ಪೀಸ್ !
ಕೊಡಗು : ತಮ್ಮ ಚಪಲಗಳನ್ನು ಈಡೇರಿಸಿಕೊಳ್ಳಲು ಏನೇನೋ ಮಾಡುವವರನ್ನು ನೋಡಿದ್ದೇವೆ. ಇನ್ನು ಕೆಲವರು ಕಳ್ಳತನ ಮಾಡಿ ಅದರಿಂದ ಬಂದ ಸಂಪಾದನೆಯಿಂದ ತಮ್ಮ ಚಪಲಗಳಲ್ಲು ತೀರಿಸಿಕೊಳ್ಳುವವರು ಇದ್ದಾರೆ. ಇನ್ನು ಗ್ರಾಮೀಣ ಭಾಗದ ಜನರಾದರೆ ಮನೆಯಲ್ಲಿರುವ ವಸ್ತುಗಳನ್ನೇ ಮಾರಿ ತಮ್ಮ ಘಟಕಗಳನ್ನು ಈಡೇರಿಸಿಕೊಳ್ಳುವವರು ಇದ್ದಾರೆ. ಆದರೆ ಇಲ್ಲೊಬ್ಬ ಕುಡಿಯೋದಕ್ಕೆ ಮದ್ಯ ಸಿಕ್ಕಿಲ್ಲ ಅಂತ ತನ್ನ ಕಾಲನ್ನು ತಾನೇ ಕತ್ತಿಯಿಂದ ಕಡಿದು ತುಂಡರಿಸಿಕೊಂಡಿದ್ದಾನೆ. ಹೌದು ಇಂತಹ ವಿಚಿತ್ರ ಘಟನೆ ನಡೆದಿರೋದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕಾರ್ಮಾಡು ಗ್ರಾಮದಲ್ಲಿ. ಕಾರ್ಮಾಡು ಗ್ರಾಮದ 45 ವರ್ಷದ ಪಾಪಣ್ಣ ಎಂಬುವವನೇ ತನ್ನ ಕಾಲನ್ನು ತಾನೆ ಕತ್ತರಿಸಿಕೊಂಡ ಭೂಪ.
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಕಾರ್ಮಾಡು ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ಇದ್ದ ಇವನು ಮದ್ಯವ್ಯಸನಿಯಾಗಿದ್ದ. ಅಷ್ಟೇ ಅಲ್ಲ ಕಳೆದ ಒಂದೆರಡು ವರ್ಷಗಳಿಂದ ಮಾನಸಿಕ ಖಿನ್ನತೆಗೂ ಒಳಗಾಗಿದ್ದ. ಮದ್ಯಕ್ಕೆ ದಾಸನಾಗಿದ್ದ ಪಾಪಣ್ಣ ಯಾವಾಗಲೂ ಕಿಕ್ ಏರಿಸಿಕೊಂಡು ತಾಯಿ ಕೂಲಿ ನಾಲಿ ಮಾಡಿ ತಂದು ಹಾಕಿದ್ದನ್ನು ತಿಂದು ಕಾಲ ಕಳೆಯುತ್ತಿದ್ದ. ಊಟಕಷ್ಟೇ ತಾಯಿ ತಂದು ಕೊಡುವುದಾಗಿದ್ದರೆ ಪರವಾಗಿರಲಿಲ್ಲ. ಆದರೆ ಈತನ ಮದ್ಯದ ಅಮಲು ಏರಿಸುವುದಕ್ಕೂ ತಾಯಿ ಕೂಲಿ ಮಾಡಿ ತಂದು ಹಾಕಬೇಕಾಗಿತ್ತು. ಹಿಂದಿನಿಂದಲೂ ಆತನ ತಾಯಿಯೇ ಕೂಲಿ ಮಾಡಿ ಆತನ ಹೊಟ್ಟೆ ತುಂಬಿಸುವ ಜೊತೆಗೆ, ಆತನ ಮದ್ಯ ಸೇವನೆಗೂ ಹಣ ನೀಡುತ್ತಿದ್ದರು. ಕೂಲಿ ಮಾಡಿ ತಾಯಿ ಆತನ ಖರ್ಚಿಗೆ ಹಣ ಕೊಡುತ್ತಿದ್ದರು.
ಕಡಿದ ರಭಸಕ್ಕೆ ಕಾಲು ಎರಡು ತುಂಡಾಗಿದೆ. ಬಲಗಾಲಿನ ಪಾದದ ಭಾಗ ಸಂಪೂರ್ಣ ಕತ್ತರಿಸಿ, ಎರಡು ತುಂಡಾಗಿದೆ. ಕಾಲು ತುಂಡಾಗಿದ್ದರಿಂದ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು. ಇದರಿಂದ ಪಾಪಣ್ಣ ಬಹುತೇಕ ಅಸ್ವಸ್ಥನಾಗಿದ್ದ. ಗುರುವಾರ ಬೆಳಗ್ಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವನನ್ನು ಸ್ಥಳೀಯರು ಸಿದ್ಧಾಪುರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕಾಲುು ಎರಡು ತುಂಡಾಗಿ ಬಿದ್ದಿದ್ದರಿಂದ ಅದನ್ನು ಜೋಡಿಸಲು ಅವಕಾಶ ಆಗಬಹುದೇನೋ ಎಂಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ವಿಚಿತ್ರ ಘಟನೆ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಸಂಬಂಧ ತನಿಖೆ ಆರಂಭಿಸಿದ್ದಾರೆ.