ಕಲಬುರಗಿಯಲ್ಲಿ ಭೀಕರ ಕೊಲೆ.. ಕೈಕಟ್ಟಿ, ಪೆಟ್ರೋಲ್ ಸುರಿದು ವಿದ್ಯಾರ್ಥಿಯ ಬರ್ಬರ ಹತ್ಯೆ!

ನಿನ್ನೆ ದುಷ್ಕರ್ಮಿಗಳು ಸೈಯದ್ ಚಿಂಚೋಳಿ ಮುಖ್ಯರಸ್ತೆ ಬಳಿಯ ಜಮೀನಿನಲ್ಲಿ ವಿದ್ಯಾರ್ಥಿಯ ಕೈಗೆ ಹಗ್ಗ ಕಟ್ಟಿ ಮುಖದ ಮೇಲೆ ಕಲ್ಲುಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ದಾರಿಹೋಕರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಲಬುರಗಿ: ಮತ್ತೊಂದು ಕೊಲೆ ಪ್ರಕರಣ ನಗರದ ಜನರನ್ನು ಬೆಚ್ಚಿಬೀಳಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಯ ಕೈ ಕಟ್ಟಿಹಾಕಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ ಬಳಿ ನಡೆದಿದೆ.

ಶಿವಪುತ್ರಪ್ಪ ಪಗಡೆ (25) ಕೊಲೆಗೀಡಾಗಿರುವ ವಿದ್ಯಾರ್ಥಿ. ಮೂಲತಃ ಆಳಂದ ತಾಲೂಕಿನ ಬೋಧನ ಗ್ರಾಮದ ನಿವಾಸಿಯಾಗಿದ್ದ ಶಿವಪುತ್ರಪ್ಪ, ನಗರದ ಶಹಾಬಜಾರ್​ನಲ್ಲಿ ವಾಸವಾಗಿದ್ದ. ಡಿಪ್ಲೋಮಾ ಮುಗಿಸಿ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಜೊತೆಗೆ ನಗರದಲ್ಲಿ ಕೆಲಸ ಮಾಡಿಕೊಂಡಿದ್ದ. ಶನಿವಾರ ದುಷ್ಕರ್ಮಿಗಳು ಸೈಯದ್ ಚಿಂಚೋಳಿ ಮುಖ್ಯರಸ್ತೆ ಬಳಿಯ ಜಮೀನೊಂದರಲ್ಲಿ ವಿದ್ಯಾರ್ಥಿಯ ಕೈಗೆ ಹಗ್ಗ ಕಟ್ಟಿ ಮುಖದ ಮೇಲೆ ಕಲ್ಲುಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ದಾರಿಹೋಕರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ ಜೆ.ಎಚ್ ಇನಾಮದಾರ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಸದ್ಯ ಮೃತ ಯುವಕನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *