ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ. 2.58 ಕ್ಕೆ ಕುಸಿತ
ಬೆಂಗಳೂರು- ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಹಲವು ದಿನಗಳ ನಂತರ 5 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ಅಲ್ಲದೆ ಸಾವಿನ ಸಂಖ್ಯೆಯೂ ಇಳಿಕೆಯಾಗಿದೆ.
ರಾಜ್ಯದಲ್ಲಿ ಪಾಸಿಟಿವ್ ಪ್ರಮಾಣ ಇಂದು ಶೇ.2.58 ಕ್ಕೆ ಕುಸಿದಿದೆ. ಅಲ್ಲದೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಶೇ 2.65 ಕ್ಕೆ ಕುಸಿದಿದೆ ಎಂದು ರಾಜ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿಂದು ಹೊಸದಾಗಿ 4,517 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು120 ಮಂದಿ ಸಾವನ್ನಪ್ಪಿದ್ದು, 8,456 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಒಟ್ಟಾರೆ 28,06,453ಕ್ಕೆ ಏರಿಕೆಯಾಗಿದೆ.ಇದುವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 26,45,735ಕ್ಕೆ ತಲುಪಿದೆ. ಇಲ್ಲಿಯ ತನಕ ಮೃತಪಟ್ಟವರ ಸಂಖ್ಯೆ 33 ,883 ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ 1,26,813 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಅತಿ ಕಡಿಮೆ:
ರಾಜಧಾನಿ ಬೆಂಗಳೂರಿನಲ್ಲಿ 933 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 12, 05 259 ಏರಿಕೆಯಾಗಿದೆ.
ಇಂದು 1,902 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ ಒಟ್ಟು 11ಲಕ್ಷ 18 ,531 ಮಂದಿ ಗುಣಮುಖರಾಗಿದ್ದಾರೆ. ಸದ್ಯ, 71282 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಇಂದು 1,74 ,521 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ಇಲ್ಲಿಯವರೆಗೂ ಒಟ್ಟಾರೆ 3 ,27,39, 539 ಮಂದಿಗೆ ಪರೀಕ್ಷೆ ನಡೆಸಲಾಗಿದೆ.
ಜಿಲ್ಲೆ – ಸೋಂಕು
- ಬಾಗಲಕೋಟೆ – 10
- ಬಳ್ಳಾರಿ – 67
- ಬೆಳಗಾವಿ – 201
- ಬೆಂಗಳೂರು ಗ್ರಾಮಾಂತರ – 111
- ಬೆಂಗಳೂರು ನಗರ- 933
- ಬೀದರ್ 6
- ಚಾಮರಾಜನಗರ – 61
- ಚಿಕ್ಕಬಳ್ಳಾಪುರ – 123
- ಚಿಕ್ಕಮಗಳೂರು – 183
- ಚಿತ್ರದುರ್ಗ- 74
- ದಕ್ಷಿಣ ಕನ್ನಡ – 525
- ದಾವಣಗೆರೆ – 136
- ಧಾರವಾಡ – 77
- ಗದಗ – 28
- ಹಾಸನ – 136
- ಹಾವೇರಿ – 24
- ಕಲಬುರಗಿ – 9
- ಕೊಡಗು – 137
- ಕೋಲಾರ- 77
- ಕೊಪ್ಪಳ – 61
- ಮಂಡ್ಯ- 131
- ಮೈಸೂರು- 545
- ರಾಯಚೂರು – 19
- ರಾಮನಗರ- 12
- ಶಿವಮೊಗ್ಗ -141
- ತುಮಕೂರು – 144
- ಉಡುಪಿ- 167
- ಉತ್ತರ ಕನ್ನಡ – 146,
- ವಿಜಯಪುರ – 7
- ಯಾದಗಿರಿ – 16