ಪಾಸಿಟಿವಿಟಿ ರೇಟ್‌ ಶೇ.5ಕ್ಕೆ ಕುಸಿದ ತಕ್ಷಣ ಮೈಸೂರು ಅನ್‌ಲಾಕ್‌ – ಪ್ರತಾಪ್‌ ಸಿಂಹ

ಮೈಸೂರು: ಶೀಘ್ರದಲ್ಲಿಯೇ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣವನ್ನು ಶೇ. 5ಕ್ಕಿಂತ ಕಡಿಮೆ ಮಾಡಿ ಅನ್‌ಲಾಕ್‌ ಮಾಡುವಂತೆ ಕೆಲಸ ಮಾಡುತ್ತೇವೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೈಸೂರಿನಲ್ಲಿ ಮೇ ತಿಂಗಳು ಒಂದರಲ್ಲೇ ಸಾವಿರಕ್ಕಿಂತ ಹೆಚ್ಚು ಜನ ನಿಧನರಾಗಿದ್ದಾರೆ. ಗ್ರಾಮಾಂತರ ಭಾಗದ ಸೋಂಕಿತರು ಕಾಯಿಲೆ ಉಲ್ಬಣಗೊಂಡ ಬಳಿಕ ಮೈಸೂರಿಗೆ ಬಂದು ನಿಧನರಾಗುತ್ತಿದ್ದಾರೆ. ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್‌ ಇದೆ. ಅದನ್ನು ಕಡಿಮೆ ಮಾಡಬೇಕಿದೆ. ಪಾಸಿಟಿವ್‌ ರೇಟ್‌ ಕಡಿಮೆ ಮಾಡಲು 10 ದಿನಗಳಿಂದ ಸಮಾರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಇದೆಲ್ಲದರ ಬಗ್ಗೆ ಅರಿವಿರುವುದರಿಂದ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ,” ಎಂದರು.

“ಮೈಸೂರಿನಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಹಳ್ಳಿ ಕಡೆಗೆ ಜಿಲ್ಲಾಡಳಿತ ಗಮನಹರಿಸಲಿ ಎಂದು ಒಂದು ತಿಂಗಳ ಹಿಂದೆಯೇ ಬಹಿರಂಗವಾಗಿ ಹೇಳಿದ್ದೆ. ನಾನು ಅವತ್ತು ಹೇಳಿದ್ದು ಸತ್ಯ ಎಂದು ಈಗ ಜನರಿಗೆ ಅರಿವಾಗಿದೆ,” ಎಂದು ಹೇಳಿದರು.

”ಮೂರನೇ ಅಲೆ ತಡೆಯಲು ಈಗಾಗಲೇ ಸಜ್ಜಾಗಿದ್ದೇವೆ. ಸ್ಕ್ಯಾ‌ನ್‌ ರೇನಲ್ಲಿ ಕಳೆದ ತಿಂಗಳಿನಲ್ಲಿಯೇ ಮೂರನೇ ಅಲೆ ಬಗ್ಗೆ ಸಭೆ ನಡೆಸಿದ್ದೇವೆ. ಈ ವೇಳೆ 29 ಮಕ್ಕಳ ತಜ್ಞರು ಬಂದಿದ್ದರು. ಒಂದೇ ಕ್ಯಾಂಪಸ್‌ನಲ್ಲಿ ಮಕ್ಕಳಿಗಾಗಿ 500 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಟ್ರಾಮಾ ಕೇರ್‌, ಜಿಲ್ಲಾಸ್ಪತ್ರೆ ಸೇರಿ ಒಂದೇ ಕಡೆ ವ್ಯವಸ್ಥೆ ಮಾಡಲು ಆಲೋಚಿಸಲಾಗಿದೆ,” ಎಂದು ಹೇಳಿದರು.

”ವೆಂಟಿಲೇಟರ್‌ ಯಾವ ಮಕ್ಕಳಿಗೆ ಮಾಡಿ ಫೈ ಮಾಡಬೇಕು ಅನ್ನುವುದನ್ನು ಯೋಚನೆ ಮಾಡಿದ್ದೇವೆ. ಯಾವ ಮಕ್ಕಳು ಕೊರೊನಾದಿಂದ ದಾಖಲಾಗಬಾರದು ಅನ್ನೋದಷ್ಟೇ ನಮ್ಮ ಉದ್ದೇಶ. ಮಕ್ಕಳಲ್ಲಿ ಕೊರೊನಾ ತಡೆಯಲು ಪೋಷಕರಿಗೆ ವ್ಯಾಕ್ಸಿನ್‌ ನೀಡಲು ಸಿದ್ದತೆ ಮಾಡಿಕೊಂಡಿದ್ದೇವೆ,” ಎಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *