ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕಳೆದ ವರ್ಷ ಮದುವೆ ಆಗಿದ್ರು, ಈಗ ಈ ಜೋಡಿ ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿದೆ. ಅರ್ಥಾತ್, ನಿಖಿಲ್ ಕುಮಾರಸ್ವಾಮಿ ಶೀಘ್ರವೇ ತಂದೆ ಆಗಲಿದ್ದಾರೆ. ರೇವತಿ ಜನ್ಮದಿನದಂದೇ ಈ ಸುದ್ದಿ ಹೊರಬಿದ್ದಿದೆ.
ನಿಖಿಲ್ ಹಾಗೂ ರೇವತಿ ಕಳೆದ ವರ್ಷ ಅದ್ದೂರಿಯಾಗಿ ಮದುವೆ ಆಗಲು ನಿರ್ಧರಿಸಿದ್ರು, ಮಂಡ್ಯದಲ್ಲಿ ಸಾವಿರಾರು ಜನರಿಗೆ ಊಟ ಹಾಕೋಕೆ ಸಿದ್ಧತೆ ಕೂಡ ನಡೆದಿತ್ತು. ಆದ್ರೆ, ಆಗ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ, ಮದುವೆ ಸಮಾರಂಭ ಸಿಂಪಲ್ ಆಗಿ ನಡೆದಿದ್ದು, ಕುಟುಂಬದವರ ಸಮ್ಮುಖದಲ್ಲಿ ನಿಖಿಲ್ ಹಾಗೂ ರೇವತಿ ಮದುವೆ ಆದ್ರು. ಈಗ ನಿಖಿಲ್ ತಂದೆ ಆಗ್ತಿದ್ದಾರೆ.
ರೇವತಿ ಐದು ತಿಂಗಳು ಗರ್ಭಿಣಿ. ರೇವತಿ ಜನ್ಮದಿನದಂದು ಈ ವಿಚಾರ ಹೊರ ಬಿದ್ದಿರುವ ಬಗ್ಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂಭ್ರಮಿಸುತ್ತಿದ್ದಾರೆ. ಇನ್ನು, ನಾಲ್ಕು ತಿಂಗಳಲ್ಲಿ ನಿಖಿಲ್ ತಂದೆ ಆಗಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾದ ಶೂಟಿಂಗ್ಗಾಗಿ ಕೆಲ ತಿಂಗಳ ಹಿಂದೆ ಲೇಹ್-ಲಡಾಕ್ಗೆ ತೆರಳಿದ್ದರು. ಈಗ ಅವರು ಪರೀಕ್ಷೆಗೆ ಒಳಗಾಗಿದ್ದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ‘ನಾನು ಇಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ಪ್ರಾಥಮಿಕ ವರದಿ ಪಾಸಿಟಿವ್ ಬಂದಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ’ ಎಂದು ಮನವಿ ಮಾಡಿಕೊಂಡಿದ್ದರು. ನಂತರ ನಿಖಿಲ್ ಗುಣಮುಖರಾಗಿದ್ದರು.