ಬೆಳ್ಳಂಬೆಳಗ್ಗೆ ಪಾಕಿಸ್ತಾನದಲ್ಲಿ 4.9 ತೀವ್ರತೆಯ ಭೂಕಂಪ: ಆತಂಕದಲ್ಲಿ ಜನತೆ!
ಹೈಲೈಟ್ಸ್:
- ಪಾಕಿಸ್ತಾನದ ಕೊಹಾಟ್ ಜಿಲ್ಲೆಯಲ್ಲಿ ಭೂಕಂಪನ
- ರಿಕ್ಟರ್ ಮಾಪಕನದಲ್ಲಿ 4.9 ಕಂಪನ ದಾಖಲು
- ರಸ್ತೆಗಳು, ಕಟ್ಟಡಗಳಲ್ಲಿ ಕೊಂಚ ಮಟ್ಟಿನ ಕಂಪನದ ಅನುಭವ
ಇಸ್ಲಾಮಾಬಾದ್: ಪಾಕಿಸ್ತಾನದ ಕೊಹಾಟ್ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ. ಬುಧವಾರ ಮುಂಜಾನೆ ಸರಿಸುಮಾರು 6:09 ಸಮಯಕ್ಕೆ ಭೂಕಂಪನ ಉಂಟಾಗಿದೆ ಎಂದು
ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋ ಸೈನ್ಸಸ್ ತಿಳಿಸಿದೆ. ಪಾಕಿಸ್ತಾನದ ಕೊಹಾಟ್ ಜಿಲ್ಲೆಯ ಖೈಬರ್ ಪಖ್ತುನ್ಕ್ವಾದಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿಸಿದೆ.
ಇನ್ನು ಕಂಪನದ ತೀವ್ರತೆ, ರಿಕ್ಟರ್ ಮಾಪಕನದಲ್ಲಿ 4.9 ಎಂದು ದಾಖಲಾಗಿರುವುದಾಗಿ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋ ಸೈನ್ಸಸ್ ಮಾಹಿತಿ ನೀಡಿದೆ. ಇನ್ನು ರಾಷ್ಟ್ರಿಯ ಭೂಕಂಪನದ ಕೇಂದ್ರ ಮಾಹಿತಿ ಪ್ರಕಾರ ಈ ಪ್ರದೇಶದ ಜನರಿಗೆ ಭೂಕಂಪನದ ಅನುಭವವಾಗಿದೆ ಎಂದು ತಿಳಿಸಿದ್ದಾರೆ. ರಸ್ತೆಗಳು, ಕಟ್ಟಡಗಳಲ್ಲಿ ಕೊಂಚ ಮಟ್ಟಿನ ಕಂಪನವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಭಾರತದ ಭೂಕಂಪನದ ಕೇಂದ್ರ ಕೂಡ ಭೂಕಂಪನ ಆಗಿರುವುದನ್ನು ಸ್ಪಷ್ಟಪಡಿಸಿದೆ.