ಭೀಮಾತೀರದಲ್ಲಿ ಜೋಡಿ ಕೊಲೆ. ” ದಲಿತ ಯುವಕ ಮತ್ತು ಮುಸ್ಲಿಂ ಯುವತಿಯ ಬರ್ಬರ ಕೊಲೆ “

 

ಇದು ಎಲ್ಲಿ ಅಂತೀರಾ ಇದು ವಿಜಯಪುರ ಜಿಲ್ಲೆಯ ದೇವರ ಹೀಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ನಡೆದ ಘಟನೆ.

ಮುಸ್ಲಿಂ ಜಾತಿಯ ಬಂದಗಿಸಾಬ ತಂಬದ ಎಂಬುವರ ಅಪ್ರಾಪ್ತ ವಯಸ್ಸಿನ ಹುಡುಗಿ ( 16) . ದಲಿತ ಮಾದಿಗ ಸಮುದಾಯದ ಬಸವರಾಜ ಬಡಿಗೇರ (19) ಎಂಬ ಹುಡುಗನೊಂದಿಗೆ ಗ್ರಾಮದ ಹೋರ ವಲಯದ ತೋಟದ ನಾಲೆಯೊಂದರಲ್ಲಿ ಮಾತಾಡುತ ಕುಳಿತ್ತಿದ್ದಾರೆ ಎಂಬ ಸಂಶಯದ ಮೇಲೆ ಹುಡುಗಿಯ ತಾಯಿಯ ತಂದೆ ಅವರನ್ನು ನೋಡಿ , ಇಬ್ಬರನ್ನು ಹಗ್ಗದಿಂದ ಕಟ್ಟಿ ಹಾಕಿ , ಹುಡುಗಿಯ ತಂದೆಯಾದ ಬಂದಗಿಸಾಬನಿಗೆ ತಿಳಿಸಿದ್ದಾರೆ.

ಹುಡುಗಿಯ ತಂದೆ ಮತ್ತು ಅಣ್ಣಾ ಕೂಡಿಕೊಂಡು ಹುಡುಗ ಮತ್ತು ಹುಡುಗಿಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಗುಸು ಗುಸುನೇ ಮಾತಾಡ್ತಿದ್ದಾರೆ.

ಹುಡುಗಿಯ ತಂದೆ ಮೂಲತಃ ಖಾನಾಪುರ ಗ್ರಾಮದವನು ಈ ವಿಷಯ ತಿಳಿದು ಕಲಕೇರಿ ಪೋಲಿಸ್ ಠಾಣಾ ಪಿ ಎಸ್ ಆಯ್ ಶ್ರೀಮತಿ ಗಂಗೂ ಬಿರಾದಾರ , ಮತ್ತು ನಾಗರಿಕ ಮಾಹಿತಿ ಹಕ್ಕು ನಿರ್ದೇಶನಾಲಯ ವಿಜಯಪುರ.
ಬೆಳಗಾವಿ ಎಸ್ಪಿ ಆದ ಅನೀಲ ಕುಮಾರ್ ಭೂಮರೆಡ್ಡಿ, CPI S S ಸಿಮಾನಿ, M N ಸಿಂಧೂರ ಮತ್ತು ಹೆಡ್ ಕಾನ್ಸಸ್ಟೆಬಲ್ M P ಪತ್ತಾರ, R A ಕನ್ನೂರ ಇವರೆಲ್ಲರು ಘಟನೆ ಆದ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು.

ವರದಿ ;ಯಲ್ಲಾಲಿಂಗ ಪೂಜಾರಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *