Delta Plus Variant| ಬೆಂಗಳೂರಿಗೂ ಕಾಲಿಟ್ಟ ಡೆಲ್ಟಾ ಪ್ಲಸ್​ ಸೋಂಕು; ಓರ್ವ ವೃದ್ಧನಲ್ಲಿ ವೈರಸ್​ ಪತ್ತೆ!

ಬೆಂಗಳೂರು (ಜೂನ್ 24); ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕೇರಳದಲ್ಲಿ ಪತ್ತೆಯಾಗಿ ಭೀತಿ ಹುಟ್ಟಿಸಿದ್ದ ಡೆಲ್ಟಾ ಪ್ಲಸ್​ ವೈರಸ್​ ಬುಧವಾರ ಮೈಸೂರಿನಲ್ಲೂ ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಆತಂಕ ಹೆಚ್ಚಿಸಿತ್ತು. ಆದರೆ, ಇಂದು ಬೆಂಗಳೂರಿನಲ್ಲೂ 86 ವರ್ಷದ ಓರ್ವ ವೃದ್ಧನಲ್ಲಿ ಮಾರಣಾಂತಿಕ ವೈರಸ್​ ಪತ್ತೆಯಾಗಿದೆ. ಶೀತ, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಾ ಇದ್ದ ವ್ಯಕ್ತಿಗೆ ಜೂನ್ 10 ರಂದು ಕೊರೋನಾ ಪಾಸಿಟಿವ್ ದೃಢವಾಗಿತ್ತು. ಹೀಗಾಗಿ ಸ್ಯಾಂಪಲ್ ಪಡೆದು ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಗೆ ಕಳಿಸಲಾಗಿತ್ತು. ಇಂದು ವರದಿ ಬಂದಿದ್ದು ಡೆಲ್ಟಾ ಪ್ಲಸ್ ಇರೋದು ಪತ್ತೆಯಾಗಿದೆ. ಯಾವುದೇ ಟ್ರಾವೆಲ್ ಹಿಸ್ಟರಿಯಿಲ್ಲದೇ ಮನೆಯಲ್ಲೇ ಇದ್ದ ಕಾರಣ, ಸೊಂಕಿತರ ಸಂಪರ್ಕಿತರು, ಪ್ರೈಮರಿ ,ಸೆಕೆಂಡರಿ ಕಾಂಟ್ಯಾಕ್ಟ್, ಮತ್ತು ವ್ಯಕ್ತಿ ವಾಸ ವಿದ್ದ ಏರಿಯಾ ಎಲ್ಲಾ ಮಾಹಿತಿಯನ್ನು ಆರೋಗ್ಯ ಇಲಾಖೆ ಗೌಪ್ಯವಾಗಿ ಇಟ್ಟಿದೆ. ಅಲ್ಲದೆ, ವೈರಸ್ ದೇಹದಲ್ಲೇ ಮ್ಯೂಟೆಂಟ್ ಆಯ್ತಾ ಎನ್ನುವ ಬಗ್ಗೆಯೂ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ‌ ಹಾಕುತ್ತಿದ್ದಾರೆ.

ಕೊರೋನಾ ಮಹಾಮಾರಿಯಿಂದಾಗಿ ಜನರು ಮೊದಲೇ ನಲುಗಿ ಹೋಗಿದ್ದಾರೆ. ಇದರ ಮಧ್ಯದಲ್ಲಿ ರೂಪಾಂತರ ವೈರಸ್ ಗಳ ಕಾಟವೂ ಹೆಚ್ಚಾಗಿದ್ದು, ಹೊಸದಾಗಿ ಕಾಣಿಸಿಕೊಂಡಿರುವ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ವೈರಸ್ ಮತ್ತಷ್ಟು ಆತಂಕ ಸೃಷ್ಟಿಮಾಡಿದೆ. ಈ ವೈರಸ್ ಯಾವುದೇ ಗುಣ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುತ್ತಿದ್ದು ಮೈಸೂರು ಬೆಂಗಳೂರಿನಲ್ಲಿ ತಲಾ ಒಂದು ಪ್ರಕರಣ ಈಗಾಗಲೇ ದೃಢವಾಗಿದೆ.

ಆದರೆ ಪಕ್ಕದ ಮಹಾರಾಷ್ಟ್ರದಲ್ಲಿ ಸುಮಾರು 25 ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಗಳು ಪತ್ತೆಯಾಗಿದೆ. ಸೋಂಕಿತಿಗೆ ವಿಶೇಷ ಚಿಕಿತ್ಸೆಯ ಬಗ್ಗೆ ರಾಜ್ಯ ಸರ್ಕಾರ ಯೋಚಿಸುತ್ತಿದೆ. ಈ ಹೊಸ ತಳಿ ವೈರಾಣುಗಳಿಗೂ ಸದ್ಯಕ್ಕೆ ಕೊರೋನಾ ಲಸಿಕೆಯೇ ರಾಮಬಾಣವಾಗಿದ್ದು, ಇದನ್ನು ತಡೆಗಟ್ಟಲು ಲಸಿಕೆ ಹಂಚಿಕೆ ಸಶಕ್ತಿಗೊಳ್ಳಬೇಕು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಸಚಿವ ಸುಧಾಕರ್ ಸ್ಪಷ್ಟ ಪಡಿಸಿದ್ದಾರೆ.

ಕೊರೋನಾ ರೂಪಾಂತರಿ ಪತ್ತೆ ಹಚ್ಚಲು ಜಿನೋಯ ಸೀಕ್ವೆನ್ಸಿಂಗ್ ಟೆಸ್ಟ್.!!

ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗುತ್ತಿದ್ದಂತೆ ಇತ್ತ ಬಿಬಿಎಂಪಿ ಕೂಡ ಅಲರ್ಟ್ ಆಗಿದೆ. ಅಲ್ದೇ ನಗರದಲ್ಲಿ ಡೆಲ್ಟಾ ಹಾಗೂ ಡೆಲ್ಟಾ‌ ಪ್ಲಸ್ ರೂಪಾಂತರಿಗಳನ್ನು ಪತ್ತೆ ಹಚ್ಚಲು ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ನಡೆಸಲು ಕೇಂದ್ರ ಸರ್ಕಾರವೇ ಪಾಲಿಕೆಗೆ ಸೂಚಿಸಿದೆ ಎಂದು ಸ್ವತಃ ಪಾಲಿಕೆ ಮುಖ್ಯ ಆಯುಕ್ತರೇ ತಿಳಿಸಿದ್ದಾರೆ. ಈ ಹಿಂದಿನಿಂದಲೂ ಟೆಸ್ಟಿಂಗ್ ನಡೆಯುತ್ತಿದೆ. ಆದ್ರೆ ಅದನ್ನು ಪ್ರತಿ ದಿನ ಮಾಡುವಂತಹ ಪ್ರಕ್ರಿಯೆ ಅಳವಡಿಸಿಕೊಳ್ಳುತ್ತಿದ್ದೇವೆ.

ರಾಜ್ಯ ಮಟ್ಟದಲ್ಲಿ ಹೆಚ್ಚಿನ ಟೆಸ್ಟ್ ನಡೆಯುತ್ತಿದೆ. ಹೊಸ ರೂಪಾಂತರ ವೈರಸ್ ಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಸಂಶೋಧನೆ ಗಳಿಗೆ ಪೂರಕವಾಗಿ ಬಿಬಿಎಂಪಿ ಕೆಲಸ ಮಾಡ್ತಾ ಇದೆ.‌ ಪಾಸಿಟಿವ್ ಟೆಸ್ಟ್ ಗಳಲ್ಲಿನಾ ಶೇ. 8 ರಷ್ಟು ಟೆಸ್ಟ್ ಗಳನ್ನು ಜಿನೋಮ್ ಸ್ವೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತದೆ. ಡೆಲ್ಟಾ ವೈರಸ್ ವಿಚಾರವಾಗಿ ತಜ್ಞರು ಬಹಳ ಎಚ್ಚರಿಕೆ ವಹಿಸಿದ್ದಾರೆ.ಡೆಲ್ಟಾ ವೈರಸ್ ರೂಪಾಂತರ ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆಗಳು ನಡೆಯುತ್ತಿದೆ. ತಜ್ಞರ ಅಭಿಪ್ರಾಯದಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಾಗುವುದು ಎಂದು ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತಾ ಹೇಳಿದ್ದಾರೆ.

ಕರ್ನಾಟಕ ಸೇರಿದಂತೆ 5 ಕಡೆ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ. ಲಸಿಕೆ ಹಾಕಿದವರಿಗೂ ಹಬ್ಬಬಹುದಾದ ವೈರಸ್ ಇದಾಗಿದ್ದು, ಮುನ್ನೆಚ್ಷರಿಕೆ ಕ್ರಮ ತೆಗೆದುಕೊಳ್ಳುವಂತೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಲಸಿಕೆಯ ರೋಗ ನಿರೋಧಕ ಶಕ್ತಿಯ ಸಾಮಾರ್ಥ್ಯವನ್ನು ಕುಂದಿಸುವ ಶಕ್ತಿ ಈ ವೈರಸ್‌ಗೆ ಇರುವ ಕಾರಣದಿಂದಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡಿರುವ 5 ಕಡೆ ಹಲವು ಕ್ರಮಗಳಿಗೆ ಸೂಚನೆ ಸಹ ನೀಡಲಾಗಿದೆ.

ಸದ್ಯ ದೇಶದಲ್ಲಿ 30 ಕೇಸ್‌ಗಳು ಕಂಡುಬಂದಿದ್ದು ಮಹಾರಾಷ್ಟ್ರದಲ್ಲಿ 24, ಮಧ್ಯಪ್ರದೇಶದಲ್ಲಿ 4, ಕರ್ನಾಟಕದಲ್ಲಿ 1, ತಮಿಳುನಾಡಿನಲ್ಲಿ 1 ಪ್ರಕರಣ ದಾಖಲಾಗಿವೆ. ಈ ವೈರಸ್ 9 ದೇಶಗಳಲ್ಲಿ 200 ಮಂದಿಗೆ ಸೋಂಕು ಪತ್ತೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *