ಕೊರೊನಾ ಸೋಂಕು ಇಳಿಮುಖ : ಚೇತರಿಕೆ ದುಪ್ಪಟ್ಟು
ಬೆಂಗಳೂರು, ಜೂ.24-; ರಾಜ್ಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಸೋಂಕಿನ ಸಂಖ್ಯೆ ಇಂದು ಕುಸಿತ ಕಂಡಿದೆ. ಚೇತರಿಕೆ ದುಪ್ಪಟ್ಟು ಹೆಚ್ಚಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 3,979 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.138 ಮಂದಿ ಸೋಂಕಿತರು ಸಾವನ್ನಪ್ಪಿದ್ದು. ಈ ಅವಧಿಯಲ್ಲಿ 9,768 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 969 ಮಂದಿಗೆ ಕಾಣಿಸಿಕೊಂಡಿದ್ದು,3176 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.ಹಲವು ದಿನಗಳ ನಂತರ 14ಮಂದಿ ಸಾವನ್ನಪ್ಪಿದ್ದಾರೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 28,23,444 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 26,78,,473 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 34,425ಕ್ಕೆ ಏರಿಕೆ.
ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,10,523 ರಷ್ಟು ಇದೆ.
ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರನಾಣ ಶೇ.3.46 ರಷ್ಟು ಇದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 2.46 ರಷ್ಡು ಇದೆ.
1.61 ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಇಂದು 1,61,287 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 3,33,50,310 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂದಿನ ಪ್ರಕರಣ
ಜಿಲ್ಲೆ ಎಷ್ಟು
- ಬಾಗಲಕೋಟೆ- 7
- ಬಳ್ಳಾರಿ – 67
- ಬೆಳಗಾವಿ – 98
- ಬೆಂಗಳೂರು ಗ್ರಾಮಾಂತರ- 81
- ಬೆಂಗಳೂರು ನಗರ. – 969
- ಬೀದರ್ 18
- ಚಾಮರಾಜನಗರ- 64
- ಚಿಕ್ಕಬಳ್ಳಾಪುರ- 44
- ಚಿಕ್ಕಮಗಳೂರು- 110
- ಚಿತ್ರದುರ್ಗ- 33
- ದಕ್ಷಿಣ ಕನ್ನಡ – 498
- ದಾವಣಗೆರೆ- 118
- ಧಾರವಾಡ- 62
- ಗದಗ- 18
- ಹಾಸನ- 336
- ಹಾವೇರಿ- 28
- ಕಲಬುರಗಿ- 31
- ಕೊಡಗು- 115
- ಕೋಲಾರ- 103
- ಕೊಪ್ಪಳ- 18
- ಮಂಡ್ಯ- 137
- ಮೈಸೂರು- 404
- ರಾಯಚೂರು- 16
- ರಾಮನಗರ – 32
- ಶಿವಮೊಗ್ಗ- 206
- ತುಮಕೂರು- 128
- ಉಡುಪಿ- 123
- ಉತ್ತರ ಕನ್ನಡ- 103
- ವಿಜಯಪುರ – 4
- ಯಾದಗಿರಿ- 7