ಇಂದಿರಾ ಗಾಂಧಿ ಆಗಲಿದ್ದಾರೆ ಬಾಲಿವುಡ್ ಕ್ವೀನ್…! ಕಾಂಗ್ರೆಸ್ ವಿರೋಧಿ ನಟಿಯಿಂದ ಕೈ ಅಧಿನಾಯಕಿ ಪಾತ್ರ !
ತಲೈವಿ ನಂತರ ‘ಇಂದಿರೆ’ಗಾಗಿ ಕಂಗನಾ ಮುಖಕ್ಕೆ ಬಣ್ಣ ! ನಟನೆ ಜೊತೆ ಡೈರೆಕ್ಷನ್ ಕ್ಯಾಪ್ ತೊಡಲಿರುವ ಕಂಗನಾ..!
ಕಂಗನಾ ರಣಾವತ್ ಯಾರಿಗೆ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾದಲ್ಲಿಯೋ ಕಂಗನಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾದ್ರೆ, ಡಿಫರೆಂಟ್ ಸ್ಟೋರಿ ಮೂಲಕ ಬಣ್ಣದ ಲೋಕದಲ್ಲಿ ಘರ್ಜಿಸುತ್ತಾ ಸುದ್ದಿಯಾಗ್ತಾರೆ. ಹೀಗೆ ಒಂದು ಕಡೆ ವಿವಾದ ಎದುರುಸುತ್ತಾ ಬಂದ್ರೆ. ಇನ್ನೊಂದು ಕಡೆ ಸಿನಿಮಾಗಳನ್ನ ಮಾಡುತ್ತಾ ಸಕ್ಸಸ್ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಸದ್ಯ ಕಂಗನಾ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ಗಳಿವೆ. ಇದರ ನಡುವೆಯೇ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿ ಮಾಡಲು ಸಜ್ಜಾಗ್ತಿದ್ದಾರೆ.
ಕಂಗನಾ ರಾಜಕೀಯ ಪ್ರವೇಶ ಮಾಡ್ತಿರೋದು ರಿಯಲ್ ಲೈಫ್ ನಲ್ಲಿ ಅಲ್ಲ, ರೀಲ್ ಲೈಫ್ಲ್ಲಿ. ಹೌದು ತಮಿಳುನಾಡಿನ ಮಾಜಿ ಪ್ರಧಾನಿ ಜಯಲಲಿತಾ ಬಯೋಪಿಕ್ನಲ್ಲಿ ತಲೈವಿ ಆಗಿ ಆರ್ಭಟಿಸಿದ, ಕಂಗನಾ ಈಗ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸೋಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಇಂದಿರಾ ಲೈಫ್ ಸ್ಟೋರಿ ಸಿನಿಮಾಕ್ಕೆ ‘ಎಮರ್ಜೆನ್ಸಿ’ ಎಂಬ ಟೈಟಲ್ ಫಿಕ್ಸ್ ಮಾಡಿದ್ದು, ಥೇಟ್ ಇಂದಿರಾ ಗಾಂಧಿ ರೀತಿ ಕಾಣಿಸಿಕೊಳ್ಳಲು ಫೇಸ್ ಹಾಗೂ ಬಾಡಿ ಸ್ಕ್ಯಾನ್ ಮಾಡಿಸಿ, ಪಾತ್ರಕ್ಕಾಗಿ ಸಾಕಷ್ಟ ತಯಾರಿ ನಡೆಸುತ್ತಿದ್ದಾರೆ. ಇನ್ನು ಇದರ ವಿಡಿಯೋ ಹಾಗೂ ಫೋಟೋವನ್ನ ಕಂಗನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ, ಈ ಖುಷಿಯನ್ನ ಕಂಗನಾ,ಮತ್ತೊಮ್ಮೆ ನಿರ್ದೇಶಕಿಯ ಕ್ಯಾಪ್ ಧರಿಸಲು ಖುಷಿ ಎನಿಸುತ್ತದೆ. ಈ ಚಿತ್ರಕ್ಕಾಗಿ ಎರಡು ವರ್ಷಕ್ಕೂ ಅಧಿಕ ಸಮಯ ಕೆಲಸ ಮಾಡಿದ ಬಳಿಕ ಅನಿಸುತ್ತಿರುವುದು, ಈ ಚಿತ್ರಕ್ಕೆ ನನ್ನ ಹೊರತಾಗಿ ಬೇರೆ ಯಾರೂ ಕೂಡ ಚೆನ್ನಾಗಿ ನಿರ್ದೇಶನ ಮಾಡಲು ಸಾಧ್ಯವಿಲ್ಲ. ಈ ಸಿನಿಮಾಗಾಗಿ ನನ್ನ ನಟನೆಯ ಕೆಲವು ಬೇರೆ ಪ್ರಾಜೆಕ್ಟ್ಗಳನ್ನು ತ್ಯಾಗ ಮಾಡಬೇಕಾಗಿದೆ. ಆದರೂ ನಾನು ಈ ಚಿತ್ರ ಮಾಡಲು ನಿರ್ಧರಿಸಿದ್ದೇನೆ. ತುಂಬ ಎಕ್ಸೈಟ್ ಆಗಿದ್ದೇನೆ. ಇದು ಒಂದು ಅದ್ಭುತ ಜರ್ನಿ ಆಗಿರಲಿದೆ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಕಂಗನಾ ನಟಿಸುವುದರ ಜೊತೆಗೆ ಆ್ಯಕ್ಷನ್ ಕಟ್ ಸಹ ಹೇಳಿದ್ದಾರೆ. ಈ ಹಿಂದೆ ‘ಮಣಿಕರ್ಣಿಕಾ’ ಸಿನಿಮಾದಲ್ಲಿಯೂ ನಟನೆಯ ಜೊತೆಗೆ ಡೈರೆಕ್ಷನ್ ಕ್ಯಾಪ್ ಧರಿಸಿದ್ದರು, ಇದೀಗ ಎರಡನೇ ಬಾರಿ ಮಣಿಕರ್ಣಿಕಾ ಬ್ಯಾನರ್ಸ್ ಅಡಿಯಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದ ಜೊತೆಗೆ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಕೆಲ ರಾಜಕೀಯ ನಾಯಕರ ಪಾತ್ರಗಳಿದ್ದು, ಇದಕ್ಕೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಇದರ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲಿಯೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇನ್ನು ಇಂದಿರ ಗಾಂಧಿ ಲುಕ್ನಲ್ಲಿ ಕಂಗನಾ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.
ರಾಜಕೀಯ,ರಾಜಕಾರಣಿಗಳ ಪಾತ್ರ ಮಾಡುವುದು ಕಂಗನಾಗೆ ಹೊಸದೇನಲ್ಲ. ಈಗಾಗಲೇ ‘ತಲೈವಿ’ ಸಿನಿಮಾದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದ್ರೆ ಕೊರೋನಾ ಎರಡನೇ ಅಲೆ ಲಾಕ್ಡೌನ್ ಇದ್ದು ಥಿಯೇಟರ್ ಮುಚ್ಚಿರೋ ಕಾರಣ ರಿಲೀಸ್ ಮುಂದಕ್ಕೆ ಹೋಗಿದೆ.