ಮೂಲ ಸೌಕರ್ಯ ಕೊರತೆ: ಶಾಸಕ ದತ್ತಾತ್ರೇಯ ಪಾಟೀಲ್ಗೆ ಘೇರಾವ್
ಹೀರಾಪುರ ಬಡಾವಣೆಯಲ್ಲಿ ಕಾಮಾಗಾರಿ ಶಂಕುಸ್ಥಾಪನೆಗೆ ಹೊರಟಿದ್ದ ವೇಳೆ, ಬಡಾವಣೆ ಜನ ಘೇರಾವ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಹದಿನೈದು ವರ್ಷಗಳಿಂದ ಹೀರಾಪುರ ಬಡಾವಣೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ನೀವುಗಳು ಚುನಾವಣೆಗೆ ಬಂದಾಗ ಮಾತ್ರ ನಮ್ಮ ಕಡೆ ಬರ್ತೀರಾ. ನಂತರ ನಮ್ಮ ಗೋಳು ಕೇಳುವವರು ಯಾರು ಎಂದು ಪ್ರಶ್ನೆ ಮಾಡಿದರು.
ಕಲಬುರಗಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಹೋಗಿದ್ದ ಕಲಬುರಗಿ ದಕ್ಷಿಣ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ಗೆ ಸ್ಥಳೀಯ ನಿವಾಸಿಗಳು ಕಾರು ಅಡ್ಡಗಟ್ಟಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ನಗರದ ಹೀರಾಪುರ ಬಡಾವಣೆಯಲ್ಲಿ ಕಾಮಾಗಾರಿ ಶಂಕುಸ್ಥಾಪನೆಗೆ ಹೊರಟಿದ್ದ ವೇಳೆ ಬಡಾವಣೆ ಜನ ಘೇರಾವ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಹದಿನೈದು ವರ್ಷಗಳಿಂದ ಹೀರಾಪುರ ಬಡಾವಣೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ನೀವುಗಳು ಚುನಾವಣೆಗೆ ಬಂದಾಗ ಮಾತ್ರ ನಮ್ಮ ಕಡೆ ಬರ್ತೀರಾ. ನಂತರ ನಮ್ಮ ಗೋಳು ಕೇಳುವವರು ಯಾರು ಎಂದು ಪ್ರಶ್ನೆ ಮಾಡಿದರು. ಇದೆ ವೇಳೆ, ಬಡವಾಣೆಯ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕರಿಗೆ ಆಗ್ರಹಿಸಿದರು.