‘ರಮೇಶ್ ಜಾರಕಿಹೊಳಿ ಸಾಯೋವರೆಗೆ ಬಿಜೆಪಿಯಲ್ಲಿರ್ತೇನೆ ಎಂದಿರೋದು ಖುಷಿಯಾಗಿದೆ’; ಈಶ್ವರಪ್ಪ
ಹೈಲೈಟ್ಸ್:
- ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಎರಡು ಸ್ಥಾನ ಸಿಗಲಿದೆ
- ರಾಜ್ಯಕ್ಕೆ ಎರಡು ಸಚಿವ ಸ್ಥಾನ ನೀಡುವಂತೆ ಪಕ್ಷದ ವತಿಯಿಂದ ಮನವಿ ಮಾಡಲಾಗುವುದು
- ರಮೇಶ್ ಜಾರಕಿಹೊಳಿ ಸಾಯೋವರೆಗೆ ಬಿಜೆಪಿಯಲ್ಲಿರ್ತೇನೆ ಎಂದಿರೋದು ಖುಷಿಯಾಗಿದೆ
- ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ
ಶಿವಮೊಗ್ಗ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜಕೀಯ ನಿವೃತ್ತಿ ಪಡೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ರಮೇಶ್ ಜಾರಕಿಹೊಳಿ ನಿವೃತ್ತಿ ಪಡೆದರೂ ಸಾಯುವವರೆಗೆ ಬಿಜೆಪಿಯಲ್ಲೇ ಉಳಿಯುತ್ತೇನೆ ಎಂದಿರುವುದು ಖುಷಿಯಾಗಿದೆ ಎಂದರು. ಸಚಿವ ಯೋಗೇಶ್ವರ್ ದಿಲ್ಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ದಿಲ್ಲಿಗೆ ಯಾರು ಬೇಕಾದರೂ ಹೋಗಬಹುದು. ಹೋಗಬಾರದು ಎಂದು ಸಂವಿಧಾನದಲ್ಲಿ ಬರೆದಿಲ್ಲ ಎಂದರು.
ಇನ್ನು ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಎರಡು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಕೇಂದ್ರ ಸಂಪುಟ ವಿಸ್ತರಣೆ ಸಮಯದಲ್ಲಿ ರಾಜ್ಯಕ್ಕೆ ಎರಡು ಸಚಿವ ಸ್ಥಾನ ನೀಡುವಂತೆ ಪಕ್ಷದ ವತಿಯಿಂದ ಮನವಿ ಮಾಡಲಾಗುವುದು. ಈ ಹಿಂದೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಸ್ಥಾನ ಖಾಲಿ ಇದೆ. ಇದರ ಬಗ್ಗೆ ಕೇಂದ್ರದ ನಾಯಕರು ಯೋಚನೆ ಮಾಡುತ್ತಾರೆ ಎಂದರು.