ಕರುನಾಡಿಗೆ ವರುಣಾಘಾತ, ರಣಭೀಕರ ಪ್ರವಾಹ ನಿಭಾಯಿಸಲು ಸರ್ಕಾರ ಸಜ್ಜು

ಬೆಂಗಳೂರು: ಕರೊನಾ ಆತಂಕದ ನಡುವೆ ಕರುನಾಡಿಗೆ ವರುಣಾಘಾತ ಸಂಭವಿಸಿದ್ದು, ಜನಜೀವನ ಮೂರಾಬಟ್ಟೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಎದುರಾಗಿರುವ ಪ್ರವಾಹ ಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು, ಕ್ಷೇತ್ರ ಬಿಟ್ಟು ಹೋಗದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಈಗಾಗಲೇ 50 ಕೋಟಿ ಹಣ ಬಿಡುಗಡೆ ಮಾಡಿದ್ದು, ಅಗತ್ಯ ಇದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡುವುದಾಗಿ ಹೇಳಿರುವ ಸಿಎಂ, ಅತಿ ತುರ್ತು ಕೆಲಸಗಳಿಗೆ ನೀವೆ ತೀರ್ಮಾನ ತೆಗೆದುಕೊಂಡು ಮುಂದುವರಿಯಬೇಕು. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಬೇಕು, ಸ್ಥಳದಲ್ಲೇ ಪರಿಹಾರ ವಿತರಣೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವರುಗಳಿಗೆ ಆದೇಶಿಸಿದ್ದಾರೆ. ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸರ್ಕಾರದ ಮುಖಕಾರ್ಯದರ್ಶಿ ವಿಜಯಭಾಸ್ಕರ್​, ಆಯಾ ಜಿಲ್ಲೆಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಕಳೆದ ಬಾರಿಯ ಪ್ರವಾಹ ಸಂದರ್ಭದಲ್ಲಿ ಸಂಪುಟ ರಚನೆ ಆಗಿರಲಿಲ್ಲ, ಆಗ ಸಿಎಂ ಒಬ್ಬರೇ ಇದ್ದರು. ಈಗ ಆಗಿಲ್ಲ, ನಾವು ಮುಂಜಾಗ್ರತೆ ಕ್ರಮ ತೆಗೆದುಕೊಳ್ತೇವೆ. ಡ್ಯಾಂ ಗಳಿಗೆ ನೀರು ಬಂದರೆ ಬಿಡೋಕೆ ಸೂಚಿಸಿದ್ದೇನೆ. ಕೋಯ್ನಾದಿಂದ ನೀರು ಬಿಡುವ ಆಪತ್ತು ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್​ ಹೇಳಿದರು.

ಮಳೆಗಾಲದಲ್ಲಿ ಅತಿಸೃಷ್ಠಿ ಆಗೋದು ಸಹಜ. ಆಸ್ಪತ್ರೆಯಿಂದಲೇ ಸಿಎಂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಪ್ರವಾಹ ಭೀತಿ ಇರುವ ಸ್ಥಳಕ್ಕೆ ಎನ್​ಡಿಆರ್​ಎಫ್ ಪಡೆ ರವಾನಿಸಲಾಗಿದೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ರಾಜ್ಯದೆಲ್ಲೆಡೆ ಭಾರೀ ಮಳೆ ಸುರಿಯುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. ತುರ್ತು ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂದು ಎಸ್​ಡಿಆರ್​ಎಫ್ ಸಭೆ ಕರೆಯಲಾಗಿದ್ದು, ಪ್ರವಾಹದ ಮಾಹಿತಿ ಪಡೆದು ಸೂಕ್ತ ಕರ್ಮಕ್ಕೆ ನಿರ್ದೇಶನ ನೀಡಲಾಗುವುದು. ಎಸ್​ಡಿಆರ್​ಎಫ್ ನಿಧಿ ಬಳಸಲು ಆದೇಶ ನೀಡುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *