ಜಮ್ಮುವಿನಲ್ಲಿ ಮತ್ತೊಂದು ಡ್ರೋನ್‌ ದಾಳಿಗೆ ಉಗ್ರರ ಯತ್ನ: 2 ಡ್ರೋನ್‌ಗಳನ್ನು ಹಿಮ್ಮೆಟ್ಟಿಸಿದ ಯೋಧರು!

ಹೈಲೈಟ್ಸ್‌:

  • ಮತ್ತೆ ವಾಯುನೆಲೆ ಬಳಿ ಮಹಾರಾಡಿದ ಎರಡು ಡ್ರೋನ್‌
  • ಕೂಡಲೇ ಯೋಧರಿಂದ ಡ್ರೋನ್‌ ಮೇಲೆ ಗುಂಡಿನ ದಾಳಿ
  • ಸಮಯೋಚಿತ ವರ್ತನೆಯಿಂದ ತಪ್ಪಿದ ಭಾರೀ ಅನಾಹುತ

ಜಮ್ಮು:ವಾಯುನೆಲೆ ಮೇಲಿನ ದಾಳಿ ಬಳಿಕವೂ ಪಾಕಿಸ್ತಾನದ ಉಗ್ರ ಸಂಘಟನೆಗಳು ಡ್ರೋನ್‌ ದಾಳಿ ಪ್ರಯತ್ನ ಮುಂದುವರಿಸಿದ್ದು, ಅದನ್ನು ಯೋಧರು ವಿಫಲಗೊಳಿಸಿದ್ದಾರೆ. ಭಾನುವಾರ ರಾತ್ರಿ 11.45ರ ಸುಮಾರಿಗೆ ರತ್ನುಚಕ್‌-ಕಲುಚಕ್‌ ವಾಯುನೆಲೆ ಮೇಲೆ ಒಂದು ಡ್ರೋನ್‌ ಕಾಣಿಸಿದ್ದು, ಕ್ಷಿಪ್ರ ದಾಳಿ ತಂಡ (ಕ್ಯೂಆರ್‌ಟಿ)ಗಳು ಅವುಗಳತ್ತ ಗುಂಡು ಹಾರಿಸಿವೆ.

ಬಳಿಕ ಡ್ರೋನ್‌ ಅಲ್ಲಿಂದ ಪೇರಿಕಿತ್ತಿದೆ. ಅಲ್ಲದೆ, ಸೋಮವಾರ ಬೆಳಗಿನ ಜಾವ 2.40ರ ಸುಮಾರಿಗೆ ಎರಡು ಡ್ರೋನ್‌ಗಳು ಹಾರಾಡುತ್ತಿದ್ದವು. ಗುಂಡಿನ ದಾಳಿ ಬಳಿಕ ಅವೂ ಹಿಮ್ಮೆಟ್ಟಿವೆ. ಎರಡೂ ಡ್ರೋನ್‌ಗಳು ದಾಳಿಗೆ ಯತ್ನಿಸಿದ್ದು, ಭದ್ರತಾ ಸಿಬ್ಬಂದಿಯ ಮುನ್ನೆಚ್ಚರಿಕೆಯಿಂದಾಗಿ ಅನಾಹುತ ತಪ್ಪಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ವಾಯುನೆಲೆಯೇ ಗುರಿ!
ವಾಯುನೆಲೆಗಳಲ್ಲಿ ಇರುವ ಹೆಲಿಕಾಪ್ಟರ್‌ಗಳಿಗೆ ಹಾನಿ ಮಾಡುವುದು ಮತ್ತು ಎಟಿಸಿ (ಏರ್‌ ಟ್ರಾಫಿಕ್‌ ಕಂಟ್ರೋಲ್‌ ) ವ್ಯವಸ್ಥೆ ಹಾಳು ಮಾಡುವುದೇ ಉಗ್ರರ ಗುರಿಯಾಗಿತ್ತು. ದಾಳಿ ಹಿಂದೆ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಕೈವಾಡವಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ತಪ್ಪಿದ ಭಾರಿ ಅನಾಹುತ!
ಡ್ರೋನ್‌ ದಾಳಿ ಬೆನ್ನಲ್ಲೇ ಜಮ್ಮುವಿನ ಮಾರುಕಟ್ಟೆ ಪ್ರದೇಶಗಳ ಮೇಲೆ ದಾಳಿ ಮಾಡಲು ಸಹ ಲಷ್ಕರೆ ತಯ್ಬಾ ಉಗ್ರರು ಸಂಚು ರೂಪಿಸಿದ್ದು, ಚಾಣಾಕ್ಷತನ ಮೆರೆದ ಭದ್ರತಾ ಸಿಬ್ಬಂದಿಯು ಸೋಮವಾರ ಶೋಪಿಯಾನ್‌ನಲ್ಲಿ ಮೂವರು ಉಗ್ರರನ್ನು ಬಂಧಿಸುವ ಮೂಲಕ ಭಾರಿ ಅನಾಹುತವೊಂದನ್ನು ತಪ್ಪಿಸಿದ್ದಾರೆ.

ದಾಳಿ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರಲ್ಲಿಒಬ್ಬನನ್ನು ನಾಸಿರ್‌-ಉಲ್‌-ಹಕ್‌ ಎಂದು ಗುರುತಿಸಿದ್ದು, ಈತನಿಂದ 6 ಕೆಜಿ ಐಇಡಿ ವಶಪಡಿಸಿಕೊಳ್ಳಲಾಗಿದೆ. ಜಮ್ಮುವಿನ ಮಾರುಕಟ್ಟೆ ಪ್ರದೇಶಗಳಲ್ಲಿಈತ ಐಇಡಿ ಸ್ಫೋಟಿಸಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ”ನಾಸಿರ್‌-ಉಲ್‌-ಹಕ್‌ ಜೈನ್‌ಹಾಲ್‌ ಬನಿಹಾಲ್‌ ನಿವಾಸಿಯಾಗಿದ್ದು, ದಕ್ಷಿಣ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳ ಜತೆ ನಂಟು ಹೊಂದಿದ್ದ. ಜನನಿಬಿಡ ಪ್ರದೇಶಗಳಲ್ಲಿಐಇಡಿ ಸ್ಫೋಟಿಸುವುದು ಇವರ ಸಂಚಾಗಿತ್ತು. ಇವರ ಬಂಧನದಿಂದ ದೊಡ್ಡ ದುರಂತ ತಪ್ಪಿದಂತಾಗಿದೆ,” ಎಂದು ಜಮ್ಮು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಚಂದನ್‌ ಕೊಹ್ಲಿತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *