ಏಕಾಏಕಿ ತೂಕ ಕಳೆದುಕೊಂಡ ಸರ್ವಾಧಿಕಾರಿ ಕಿಮ್ ಜಾಂಗ್ ಉನ್: ವಿಡಿಯೋ ಕಂಡು ದಂಗಾದ ನೆಟ್ಟಿಗರು!
ಹೈಲೈಟ್ಸ್:
- ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತೂಕ ಕಳೆದುಕೊಂಡಿದ್ದೇಕೆ?
- ತೂಕ ಇಳಿಕೆಯ ಹಿಂದಿದ್ಯಾ ಭಾರೀ ಲೆಕ್ಕಚಾರಗಳು?
- ಒಂದು ವಿಡಿಯೋ ಇದೀಗ ನೂರಾರು ಚರ್ಚೆಗಳಿಗೆ ಗ್ರಾಸ
ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗಮನಾರ್ಹ ಪ್ರಮಾಣದಲ್ಲಿ ಬೊಜ್ಜು ಕರಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ಚರ್ಚೆಗಳು ನಡೆಯುತ್ತಿವೆ. ಕಿಮ್ ಜಾನ್ ಉನ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವಿಡಿಯೋವೊಂದು ಹರಿದಾಡುತ್ತಿದೆ.
37 ವರ್ಷದವರು ಎನ್ನಲಾಗುತ್ತಿರುವ ಕಿಮ್, ಆ ವಿಡಿಯೋದಲ್ಲಿ, ಅದಕ್ಕಿಂತ ಹಿಂದಿನ ವಿಡಿಯೊ ಅಥವಾ ಚಿತ್ರಗಳಲ್ಲಿ ಕಂಡದ್ದಕ್ಕಿಂತ ಸಾಕಷ್ಟು ಸಣ್ಣ ದೇಹ ಹೊಂದಿದ್ದಾರೆ. ಕಿಮ್ ಯಾಕೆ ತೂಕ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅವರ ವಿಡಿಯೊ ಪ್ರಸಾರ ಮಾಡಿರುವ ಸಂಸ್ಥೆಯೂ ಆ ಬಗ್ಗೆ ಮಾಹಿತಿ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ, ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.