ಕರೊನಾ ಭರಾಟೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ನಕಲಿ ಸ್ಯಾನಿಟೈಸರ್ ಮಾರಾಟಕ್ಕೆ ಬ್ರೇಕ್…..! ಬೆಚ್ಚಿಬೀಳಿಸುವಂತಿದೆ ‘ನಕಲಿ’ ಎಫೆಕ್ಟ್

ಚಂಡೀಗಢ : ಕರೊನಾ ಆರ್ಭಟದಲ್ಲಿ ನಕಲಿ ಮತ್ತು ಕಳಪೆ ಗುಣಮಟ್ಟದ ಸ್ಯಾನಿಟೈಸರ್​​ಗಳ ಉತ್ಪಾದನೆ ಮತ್ತು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಅಕ್ರಮಕ್ಕೆ ಬ್ರೇಕ್ ಹಾಕಲು ಹರಿಯಾಣ ಸರ್ಕಾರ ಕ್ರಮ ಕೈಗೊಂಡಿದೆ.
ಗುಣಮಟ್ಟದ ಮಾನದಂಡಗಳನ್ನು ಪೂರೈಸದ 11 ಸ್ಯಾನಿಟೈಸರ್ ಬ್ರಾಂಡ್‌ಗಳ ವಿರುದ್ಧ ಹರಿಯಾಣದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಯಾನಿಟೈಸರ್​​​ಗಳ ತಯಾರಿಕೆಯಲ್ಲಿ ಪ್ರಮಾಣೀಕೃತ ಮಾನದಂಡವನ್ನು ಪೂರೈಸಿಲ್ಲವೆಂದೋ ಅಥವಾ ಹೆಚ್ಚಿನ ಪ್ರಮಾಣದ ಮಿಥೆನಾಲ್ ಬಳಸಿರುವುದರಿಂದಲೋ ಹರಿಯಾಣ ರಾಜ್ಯ ಸರ್ಕಾರ ನಕಲಿ ಮತ್ತು ಕಳಪೆ ಗುಣಮಟ್ಟದ ಸ್ಯಾನಿಟೈಸರ್​ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ವರದಿಗಳ ಪ್ರಕಾರ, ರಾಜ್ಯದಾದ್ಯಂತ 248 ಸ್ಯಾನಿಟೈಸರ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 123 ಮಾದರಿಗಳ ಪರೀಕ್ಷಾ ವರದಿಗಳು ಬಂದಿವೆ. ಅಂದಾಜು 14 ಸ್ಯಾನಿಟೈಸರ್ ಬ್ರಾಂಡ್‌ಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಸರ್ಕಾರ ಸ್ಯಾನಿಟೈಸರ್‌ಗಳಲ್ಲಿ ಕಡಿಮೆ-ಗುಣಮಟ್ಟದ ಕಾರಣದಿಂದಾಗಿ 11 ಬ್ರಾಂಡ್‌ಗಳನ್ನು ಸ್ಥಗಿತಗೊಳಿಸಿದೆ. ಈ 11 ಸ್ಯಾನಿಟೈಜರ್ ಬ್ರಾಂಡ್‌ಗಳ ಪೈಕಿ, ಅಂದಾಜು ಒಂಬತ್ತು ಸ್ಯಾನಿಟೈಸರ್ ಬ್ರಾಂಡ್‌ಗಳು ಕಳಪೆ ಗುಣಮಟ್ಟದ್ದವುಗಳಾಗಿವೆ.

ಈ ಕಡಿಮೆ-ಗುಣಮಟ್ಟದ ಸ್ಯಾನಿಟೈಸರ್​​ಗಳಿಂದ ಗ್ರಾಹಕರಿಗೆ ಚರ್ಮ ಮತ್ತು ಇತರ ಸಮಸ್ಯೆಗಳು ಉಂಟಾಗುತ್ತಿವೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಅಂತಹ ಕಳಪೆ ಗುಣಮಟ್ಟದ ಸ್ಯಾನಿಟೈಸರ್​​​ಗಳ ಉತ್ಪಾದನೆಯೇ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದು ಕಂಡುಬಂದಿದೆ.
“ಮಾದರಿ ಪರೀಕ್ಷೆಯಲ್ಲಿ ಅವು ಕಳಪೆ ಮಟ್ಟದ್ದೆಂದು ಕಂಡುಬಂದರೆ ಅಂಥ ಬ್ರ್ಯಾಂಡ್‌ಗಳ ಪರವಾನಗಿಯನ್ನು ರದ್ದುಗೊಳಿಸಲು ಅಥವಾ ಅಮಾನತುಗೊಳಿಸಲು ನೋಟೀಸ್ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *