National Camera Day 2021: ಸಖತ್ ಫೋಟೋ ತೆಗೀಬೇಕು ಅಂದ್ರೆ ಈ 8 ಸ್ಥಳಗಳಿಗೆ ಹೋಗ್ಲೇಬೇಕು !
ಇವತ್ತು ರಾಷ್ಟ್ರೀಯ ಕ್ಯಾಮೆರಾ ದಿನ. ಪ್ರತೀ ವರ್ಷ ಜೂನ್ 29ನ್ನು ನ್ಯಾಷನಲ್ ಕ್ಯಾಮೆರಾ ಡೇಯನ್ನಾಗಿ ಆಚರಿಸಲಾಗುತ್ತದೆ. ಕಳೆದ ವರ್ಷದಿಂದ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿದೆ. ನಕಾರಾತ್ಮಕ ವಾತಾವರಣದ ನಡುವೆಯೂ ಸಕಾರಾತ್ಮಕ ಚಿಂತನೆ ಅಗತ್ಯ. ಹೀಗಾಗಿ ಕೊರೋನಾದಿಂದ ಚೇತರಿಕೆ ಕಾಣುತ್ತಿರುವ ಸಮಯದಲ್ಲಿ ಈ ವರ್ಷದ ನ್ಯಾಷನಲ್ ಕ್ಯಾಮೆರಾ ಡೇಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ.
ಇವತ್ತು ರಾಷ್ಟ್ರೀಯ ಕ್ಯಾಮೆರಾ ದಿನ. ಪ್ರತೀ ವರ್ಷ ಜೂನ್ 29ನ್ನು ನ್ಯಾಷನಲ್ ಕ್ಯಾಮೆರಾ ಡೇಯನ್ನಾಗಿ ಆಚರಿಸಲಾಗುತ್ತದೆ. ಕಳೆದ ವರ್ಷದಿಂದ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿದೆ. ನಕಾರಾತ್ಮಕ ವಾತಾವರಣದ ನಡುವೆಯೂ ಸಕಾರಾತ್ಮಕ ಚಿಂತನೆ ಅಗತ್ಯ. ಹೀಗಾಗಿ ಕೊರೋನಾದಿಂದ ಚೇತರಿಕೆ ಕಾಣುತ್ತಿರುವ ಸಮಯದಲ್ಲಿ ಈ ವರ್ಷದ ನ್ಯಾಷನಲ್ ಕ್ಯಾಮೆರಾ ಡೇಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ.

ಕ್ಯಾಮೆರಾ, ಫೋಟೋ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ. ಫೋಟೋಗೆ ಪೋಸ್ ಕೊಟ್ಟು ನಿಂತುಬಿಡ್ತಾರೆ. ಬಗೆ-ಬಗೆಯ ಶೈಲಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಅದರಲ್ಲೂ ಹುಡುಗಿಯರಿಗೆ ಈ ಕ್ಯಾಮೆರಾ, ಫೋಟೋ ಮೇಲೆ ಹುಚ್ಚು ಜಾಸ್ತಿ. ಹಾಗಂತ ಹುಡಗರೇನೂ ಕಡಿಮೆ ಇಲ್ಲ..!

ಹಾಗಾದ್ರೆ ಪರ್ಫೆಕ್ಟ್ ಫೋಟೋಶೂಟ್ಗೆ ಪರ್ಫೆಕ್ಟ್ ಸ್ಥಳಗಳು ಯಾವುವು? ಯಾವ ಜಾಗ ಫೋಟೋ ತೆಗೆದುಕೊಳ್ಳಲು ಚೆನಾಗಿರುತ್ತೆ ಅಂತ ಯೋಚಿಸ್ತಿದಿರಾ? ಯಾರೇ ಆಗಲಿ ಫೋಟೋಗ್ರಫಿ ಬಗ್ಗೆ ಯೋಚಿಸಿದಾಗ ಮೊದಲು ತಲೆಗೆ ಬರುವುದು ನ್ಯೂಯಾರ್ಕ್ ಸಿಟಿ. ಅಲ್ಲಿನ ವೈವಿಧ್ಯಮಯ ಸಂಸ್ಕೃತಿ ಮತ್ತು ಐತಿಹಾಸಿಕ ವಾಸ್ತುಶಿಲ್ಪದೊಂದಿಗೆ ನ್ಯೂಯಾರ್ಕ್ ನಗರ ಸಾಕಷ್ಟು ಜನಪ್ರಿಯವಾಗಿದೆ. ಇಲ್ಲಿನ ಪ್ರತಿಯೊಂದು ರಸ್ತೆಯೂ ಆಕರ್ಷಣೆಯಿಂದ ಕೂಡಿರುತ್ತದೆ. ಜನರು ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ನ್ಯಾಷನಲ್ ಕ್ಯಾಮೆರಾ ದಿನದಂದು, ನೀವು ನ್ಯೂಯಾರ್ಕ್ನಲ್ಲಿ ಫೋಟೋ ತೆಗೆದುಕೊಳ್ಳಬೇಕೆಂದಿದ್ದರೆ, ಕೆಲವು ಪರ್ಫೆಕ್ಟ್ ಸ್ಥಳಗಳು ಇಲ್ಲಿವೆ.

ಸೆಂಟ್ರಲ್ ಪಾರ್ಕ್ ನ್ಯೂಯಾರ್ಕ್ ಸಿಟಿಯ ಐಕಾನಿಕ್ ಪಾರ್ಕ್. ಇಲ್ಲಿ ಫಿಲ್ಮ್ ಶೂಟಿಂಗ್ ಕೂಡ ನಡೆಯುತ್ತೆ. ಇದು ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ನಲ್ಲಿದೆ. ಸುಮಾರು 843 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಸೆಂಟ್ರಲ್ ಪಾರ್ಕ್ ತುಂಬಾ ವಿಶಾಲವಾಗಿದ್ದು, ಆಕರ್ಷಣೀಯವಾಗಿದೆ. ಹೀಗಾಗಿ ಫೋಟೋಶೂಟ್ಗೆ ಸೆಂಟ್ರಲ್ ಪಾರ್ಕ್ ಹೇಳಿ ಮಾಡಿಸಿದ ಜಾಗ ಎಂದರೆ ತಪ್ಪಾಗಲಾರದು.

ನ್ಯೂಯಾರ್ಕ್ ಸಿಟಿಯಲ್ಲಿರುವ ಮತ್ತೊಂದು ಸ್ಥಳವೆಂದರೆ ಫ್ಲಾಟಿರನ್ ಬಿಲ್ಡಿಂಗ್. ಇದು ನ್ಯೂಯಾರ್ಕ್ನ ಐಕಾನಿಕ್ ಕಟ್ಟಡವಾಗಿದ್ದು, ಬಹಳ ಸುಂದರವಾಗಿದೆ. 1902ರಲ್ಲಿ ಈ ಬಿಲ್ಡಿಂಗ್ ಕಟ್ಟಲಾಗಿದೆ. ವಿವಿಧ ಭಂಗಿಗಳಲ್ಲಿ ಫೋಟೋ ತೆಗೆದುಕೊಳ್ಳಲು ಈ ಸ್ಥಳ ಪರ್ಫೆಕ್ಟ್ ಆಗಿದೆ. ಹೀಗಾಗಿ ಈ ವರ್ಷದ ನ್ಯಾಷನಲ್ ಕ್ಯಾಮೆರಾ ಡೇಗೆ ಅಲ್ಲೇ ಫೋಟೋ ತೆಗೆದುಕೊಳ್ಳಿ.

ನ್ಯೂಯಾರ್ಕ್ನಲ್ಲಿ ಬ್ರೂಕ್ಲಿನ್ ಬ್ರಿಡ್ಜ್ ಬಳಿ ಫೋಟೋ ತೆಗೆದುಕೊಳ್ಳೋ ಅವಕಾಶ ಸಿಕ್ಕಿದ್ರೆ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ. ಸ್ಟನ್ನಿಂಗ್ ಫೋಟೋಗ್ರಾಫ್ಗಳನ್ನು ತೆಗೆದುಕೊಳ್ಳಲು ಬ್ರೂಕ್ಲಿನ್ ಬ್ರಿಡ್ಜ್ ಪರ್ಫೆಕ್ಟ್ ಜಾಗ. ಲೋವರ್ ಮ್ಯಾನ್ಹ್ಯಾಟನ್ ಸ್ಕೈಲೈನ್ನ ಅದ್ಭುತ ನೋಟಗಳನ್ನು ಈ ಬ್ರಿಡ್ಜ್ ನೀಡುತ್ತದೆ. ಈ ಸೇತುವೆಯನ್ನು ಪ್ರತಿದಿನ ಸಾವಿರಾರು ಪ್ರಯಾಣಿಕರು, ಪಾದಾಚಾರಿಗಳು ಮತ್ತು ವಾಹನ ಸವಾರರು ದಾಟುತ್ತಿರುತ್ತಾರೆ. ಹೀಗಾಗಿ ಅಪಾಯಕಾರಿಯಾಗಿದೆ, ಬಹಳ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ.

ನ್ಯೂಯಾರ್ಕ್ನಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುವ ಸ್ಥಳವೆಂದರೆ ಹೈ ಲೈನ್. 1.45 ಮೈಲಿ ಉದ್ದದ ಉದ್ಯಾನವನ ಇದಾಗಿದೆ. ನ್ಯೂಯಾರ್ಕ್ನ ಆಕರ್ಷಣೀಯ ಸ್ಥಳಗಳಲ್ಲೊಂದು. ಇದು 1980ರವರೆಗೆ ಮ್ಯಾನ್ಹ್ಯಾಟನ್ನ ಪಶ್ಚಿಮ ಭಾಗದಲ್ಲಿ ಸೇವೆ ಸಲ್ಲಿಸಲು ಬಳಸಿದ ರೈಲು ಮಾರ್ಗವಾಗಿತ್ತು. ಬಳಿಕ ಉದ್ಯಾನವನವಾಗಿ ಬದಲಾಯಿತು. ಮ್ಯಾನ್ಹ್ಯಾಟನ್ನ ಮಧ್ಯಭಾಗದಲ್ಲಿ ಎತ್ತರದ ಕಟ್ಟಡಗಳು ಮತ್ತು ಹಸಿರಿನಿಂದ ಆವೃತವಾಗಿರುವ ಉದ್ಯಾನವನ ಫೋಟೋ ತೆಗೆದುಕೊಳ್ಳಲು ಸರಿಯಾದ ಸ್ಥಳವಾಗಿದೆ.

ನ್ಯೂಯಾರ್ಕ್ನ ಟೈಂ ಸ್ಕ್ವೇರ್ ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಬಣ್ಣ-ಬಣ್ಣಗಳಿಂದ ಕೂಡಿದ್ದು, ಆಕರ್ಷಣೀಯವಾಗಿದೆ. 2021ರ ನ್ಯಾಷನಲ್ ಕ್ಯಾಮೆರಾ ದಿನಕ್ಕೆ ಅಲ್ಲಿ ಫೋಟೋಗ್ರಫಿ ಅಭ್ಯಾಸ ಮಾಡಿ.

ಗ್ರ್ಯಾಂಡ್ ಸೆಂಟ್ರಲ್ ಸ್ಟೇಷನ್ ನ್ಯೂಯಾರ್ಕ್ನಲ್ಲಿ ಫೋಟೋಗ್ರಫಿಗೆ ಹೇಳಿ ಮಾಡಿಸಿದ ಜಾಗ. ರೈಲುಗಳು ಮತ್ತು ಸಬ್ವೇಗಾಗಿ 1913ರಲ್ಲಿ ಈ ಸ್ಟೇಷನ್ ನಿರ್ಮಿಸಲಾಯಿತು. ಮಿಡ್ಟೌನ್ ಮ್ಯಾನ್ಹ್ಯಾಟನ್ನಲ್ಲಿ ಪ್ರಯಾಣಿಕರ ಟರ್ಮಿನಲ್ ಇದಾಗಿದೆ. ಇದನ್ನು ಸಂರಕ್ಷಿತ ಐತಿಹಾಸಿಕ ಹೆಗ್ಗುರುತು ಎಂದು ಪರಿಗಣಿಸಲಾಗಿದೆ. ಇಲ್ಲಿ ಪೀಕ್ ಅವರ್ನಲ್ಲಿ ಹೆಚ್ಚು ಜನ ಸೇರುತ್ತಾರೆ.

ಎಂಪೈರ್ ಸ್ಟೇಟ್ ಬಿಲ್ಡಿಂಗ್ ನ್ಯೂಯಾರ್ಕ್ನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಕಾರಣಾಂತರಗಳಿಂದ ಇದನ್ನು ಮುಚ್ಚಲಾಗಿತ್ತು, 2019ರಲ್ಲಿ ಮತ್ತೆ ತೆರೆಯಲಾಯಿತು. ಇದು ಫೋಟೋಗ್ರಫಿಗೆ ಪರ್ಫೆಕ್ಟ್ ಜಾಗವಾಗಿದೆ.

ಕಾನಿ ಐಲ್ಯಾಂಡ್ನಲ್ಲಿ ಫೋಟೋ ತೆಗೆಯುವುದು ಪ್ರತಿಯೊಬ್ಬ ಫೋಟೋಗ್ರಾಫರ್ನ ಕನಸಾಗಿದೆ. ಇದು ಸೌತ್ ಬ್ರೂಕ್ಲಿನ್ನ ಪಕ್ಕದಲ್ಲಿದೆ. ಅಮ್ಯೂಸ್ಮೆಂಟ್ ಪಾರ್ಕ್ ಕೂಡ ಇದೆ. ಬೇಸಿಗೆ ಸಮಯದಲ್ಲಿ ಇಲ್ಲಿ ಹೆಚ್ಚು ಜನರು ಬರುತ್ತಾರೆ. ಇದು ಫೋಟೋಗ್ರಫಿಗೆ ಹೇಳಿ ಮಾಡಿಸಿದ ಜಾಗವಾಗಿದೆ.