29/06/2021ದ್ವಾದಶ ರಾಶಿ ಭವಿಷ್ಯ
ಈ ದಿನದ 12 ರಾಶಿಗಳ ಭವಿಷ್ಯ

ಈ ದಿನ ನಿಮ್ಮ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕಿರುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಈ ದಿನ ಗ್ರಹಗಳು ಪೂರಕವಾಗಿದೆ, ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯುವುದು ಈ ಫಲವನ್ನು ಸದುಪಯೋಗಪಡಿಸಿಕೊಳ್ಳಿ.

ಕೆಲಸದತ್ತ ಹೆಚ್ಚಿನ ಗಮನ ಹರಿಸುವಿರಿ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಹೆಚ್ಚಿನ ಸಂತಸ ಸಿಗಲಿದೆ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಇದು ಸಕಾಲವಾಗಿದೆ. ಹರಿತಾದ ಯಂತ್ರಗಳ ಜೊತೆ ಕೆಲಸ ಮಾಡುವವರು ಈ ದಿನ ಜಾಗ್ರತರಾಗಿರಿ

ಈ ದಿನ ನಿಮ್ಮ ಸಹೋದ್ಯೋಗಿಯೊಬ್ಬರು ಅತಿ ಉತ್ತಮ ಉಪಾಯಗಳನ್ನು ನೀಡಲಿದ್ದು ಅವರ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ನಿಮ್ಮ ಹೃದಯದ ಮಾತಿಗೆ ಬೆಲೆ ಕೊಡುವುದು ಈ ದಿನ ಬಹಳ ಮುಖ್ಯವಾಗಿದೆ. ಸುಬ್ರಹ್ಮಣ್ಯನ ಸೇವೆಯಿಂದ ಶುಭಪ್ರಾಪ್ತಿ

ನಿಮ್ಮೊಡನೆ ಹರಿದು ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವಿರಿ. ಇಲೆಕ್ಟಿçಕಲ್ ಕಂಟ್ರಾಕ್ಟರುಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ ಅದೇರೀತಿಯಾಗಿ ಅವಗಡಗಲು ಸಂಭವಿಸುವ ಸಮಯವೂ ಇದೆ. ವೃತ್ತಿಯಲ್ಲಿ ಮತ್ತು ಸಹ-ಕೆಲಸಗಾರರಲ್ಲಿ ಗಮನಹರಿಸಿ.

ಗುರಿಯನ್ನು ಮುಟ್ಟುವತ್ತ ನಿಮ್ಮ ಹಾದಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡಲ್ಲಿ ನಿಮ್ಮ ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿ ನೆರವೇರುವುದು. ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ

ಇಂದಿನ ನಿಮ್ಮ ನಡವಳಿಕೆ ಎಲ್ಲರ ಕೇಂದ್ರ ಬಿಂದುವಾಗಲಿದೆ. ಈ ದಿನ ದೊರೆತಿರುವ ಖ್ಯಾತಿಯನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವುದು ಉತ್ತಮ. ಮನರಂಜನೆಗೂ ಸಾಕಷ್ಟು ಸಮಯವನ್ನು ಮೀಸಲಿಟ್ಟು ಮಡದಿ ಮಕ್ಕಳೊಂದಿಗೆ ಸಂತಸದಿಂದಿರುವಿರಿ.

ಜಮೀನು ಖರೀದಿ ಅಥವಾ ಜಮೀನಿನ ಗುತ್ತಿಗೆಯಂತಹ ವ್ಯವಹಾರಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುಲು ಕಲಿಯಬೇಕಾಗುತ್ತದೆ. ಅರಳಿಮರದ ಪ್ರದಕ್ಷಿಣೆ ಬರುವುದರಿಂದ ಪಾಪಪರಿಹಾರ

ಯಾವುದೇ ಪರಿಸ್ಥಿತಿಯಲ್ಲಿಯೂ ನಿಮ್ಮ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡುವುದು ನಿಮ್ಮ ಅಭ್ಯಾಸ. ನಿಮ್ಮ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರವಾಗುವುದು. ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸದೇ ನಿಮ್ಮ ಮನದ ಭಾವನೆಯನ್ನು ಸ್ಪಷ್ಟವಾಗಿ ತೆರೆದಿಡಿ

ನಿಮ್ಮಲ್ಲಿ ಇಂದು ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ. ಇಂದು ನಿಮ್ಮಲ್ಲಿನ ಸೃಜನಶೀಲತೆಗೆ ಉತ್ತಮ ವೇದಿಕೆ ಲಭಿಸಲಿದೆ. ಬಡಗಿ ಕೆಲಸ ಮಾಡುವವರಿಗೆ ಇಂದು ಸುಯೋಗವಿದೆ. ಹಸಿರು ಬಣ್ಣ ಅದೃಷ್ಟ ತರುವುದು

ಈ ದಿನ ನೀವು ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಹೆಜ್ಜೆ ಇಡುವುದು ಸೂಕ್ತ. ಪುಸ್ತಕ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವ ಸಂಭವವಿದೆ. ನಿಮ್ಮ ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ವೇದಿಕೆ ಸಿಗಲಿದೆ

ಬದುಕನ್ನು ವಿಲಾಸಿಯಾಗಿ ಕಳೆಯುವ ಹೊರತಾಗಿ ಅನೇಕ ಜವಾಬ್ದಾರಿಗಳಿವೆ ಎಂಬುದನ್ನು ಮರೆಯದಿರಿ. ಕ್ಷಣಿಕ ಸುಖಗಳಿಗೆ ಗಮನ ನೀಡದೆ ಗಂಭೀರವಾಗಿ ಆಲೋಚಿಸಿ. ಮಹಿಳೆಯರಿಗೆ ಸ್ವತಂತ್ರ ಉದ್ಯಮದ ಹಾದಿ ಸುಗಮವಾಗುವುದು

ಇಂದು ನೀವು ಸರಿಯಾದ ಹಾದಿಯಲ್ಲಿಯೇ ನಡೆಯುವಿರಿ. ನಿಮ್ಮ ಸಂಗಾತಿಯೊಂದಿಗೆ ಇದ್ದ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಿಕ್ಕಿ ದೂರ ದೇಶಕ್ಕೆ ಪ್ರಯಾಣ ಮಾಡುವ ಅವಕಾಶ ಸಿಗಲಿದೆ