ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ ಬಾಯ್ಕಾಟ್ ಜಾಹ್ನವಿ ಕಪೂರ್ ಅಭಿಯಾನ
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನೆಪೋಟಿಸಂ (ಸ್ವಜನಪಕ್ಷಪಾತ) ಪೋಷಿಸುತ್ತಿರುವ ಬಾಲಿವುಡ್ನ ಹಲವು ಬಲಾಢ್ಯರ ಚಿತ್ರಗಳನ್ನು ನೋಡಬಾರದು ಎಂಭ ಅಭಿಯಾನವೊಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ತಿಂಗಳಿನಿಂದ ನಡೆಯುತ್ತಿದೆ.
ಬಾಲಿವುಡ್ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುತ್ತಾರೆ ಎನ್ನಲಾದ ಕರಣ್ ಜೋಹರ್, ಸಲ್ಮಾನ್ ಖಾನ್ ಮುಂತಾದವರ ಚಿತ್ರಗಳನ್ನು ನೋಡಬಾರದು ಎಂಬ ತೀರ್ಮಾನಕ್ಕೆ ಹಲವರು ಬಂದಂತಿದೆ. ಈ ಸಾಲಿಗೆ ಈಗ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕೂಡಾ ಸೇರಿಕೊಂಡಿದ್ದಾರೆ.
ಜಾಹ್ನವಿಯನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್ ಕಪೂರ್. ಜಾಹ್ನವಿ ಸಹ ನೆಪೋಟಿಸಂನಿಂದಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಸಿಟ್ಟಾಗಿರುವ ಕೆಲವರು, ಆಕೆಯ ಚಿತ್ರಗಳನ್ನು ಬಾಯ್ಕಾಟ್ ಮಾಡುವ ಬಗ್ಗೆ ತೀರ್ಮಾನಿಸಿದ್ದಾರೆ. ಅದಕ್ಕೆ ಸರಿಯಾಗಿ ಜಾಹ್ನವಿ ಅಭಿನಯದ ಎರಡನೆಯ ಚಿತ್ರವಾದ ‘ಗುಂಜನ್ ಶರ್ಮಾ: ದಿ ಕಾರ್ಗಿಲ್ ಗರ್ಲ್’ ಚಿತ್ರವು ಇದೇ ತಿಂಗಳ 12ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಹೀಗಿರುವಾಗಲೇ, ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ಜಾಹ್ನವಿಕಪೂತ್ ಎಂಬ ಹ್ಯಾಶ್ಟ್ಯಾಗ್ ಅಭಿಯಾನ ಸಹ ಶುರುವಾಗಿದೆ. ಸುಶಾಂತ್ ಸಿಂಗ್ ಸಾವಿನಿಂದ ಮತ್ತು ನೆಪೋಟಿಸಂನಿಂದ ಬೇಸರಗೊಂಡಿರುವವರೆಲ್ಲರೂ ಜಾಹ್ನವಿ ಅಭಿನಯದ ಹೊಸ ಚಿತ್ರವನ್ನು ನೋಡಬೇಡಿ ಎಂದು ಕರೆ ನೀಡುತ್ತಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ, ಜಾಹ್ನವಿ ಮಾತ್ರ ತನಗೆ ಯಾವುದೂ ಸಂಬಂಧವಿಲ್ಲ ಎನ್ನುವಂತೆ ಇನ್ಸ್ಟಾಗ್ರಾಂನಲ್ಲಿ ಚಿತ್ರದ ಬಿಹೈಂಡ್ ದಿ ಸೀನ್ಸ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಅಭಿಮಾನಿಗಳಿಗೆ ಹೇಳುತ್ತಿದ್ದಾರೆ.