ಕೋವಿಡ್ ಸಮಯದಲ್ಲಿ ಜಾಗರುಕತೆಯಿಂದ ಕಾರ್ಯನಿರ್ವಹಿಸಿದ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಸೇವೆಯನ್ನು ಒಂದು ವರ್ಷಗಳ ಕಾಲ (2022 ಜೂನ್ ತನಕ) ವಿಸ್ತರಿಸಲಾಗಿದೆ.
ಖ್ಯಾತ ವೈದ್ಯರೂ ಆಗಿರುವ ಅನುಭವಿ ಡಾ.ಮಂಜುನಾಥ್ ಸೇವೆಯನ್ನು ವಿಸ್ತರಿಸುವಂತೆ ಹಲವು ಪ್ರಮುಖರು ಸಿಎಮ್ ಯಡಿಯೂರಪ್ಪರ ಗಮನಕ್ಕೆ ತಂದಿದ್ದರು. ಕಾರಣ ಕೋವಿಡ್ ಸಂದರ್ಭದಲ್ಲಿ ಡಾ.ಮಂಜುನಾಥ್ ರ ಅವರು ಕಾರ್ಯ ನಿರ್ವಹಿಸಿದ ರೀತಿಯು ಶ್ಲ್ಯಾಘನಿಯವಾಗಿತ್ತು. ಅವರ ಸೇವಾ ಅವಧಿಯು ಇಂದು (ಜೂನ್.30) ಅಂತ್ಯವಾಗಲಿತ್ತು.
ಇದೀಗ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಡಾ.ಮಂಜುನಾಥ್ ರ ಸೇವಾವಧಿಯನ್ನು ಮತ್ತೆ ಒಂದು ವರ್ಷಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.