ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸು ಮಾಡಿದ ಬೀದರ ಜಿಲ್ಲೆಯ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರಿಂದ ಅಭಿನಂದನೆ

ಬೀದರ ಕರ್ನಾಟಕ ಕಿರೀಟ್’ ಎಂದೇ ಹೆಸರಾದ ಗಡಿ ಜಿಲ್ಲೆಯ ಮೊಹಮ್ಮದ್ ನಜಿಮುದ್ದೀನ್ ಮತ್ತು ಮೊಹಮ್ಮದ್ ಕಮರುದ್ದೀನ್ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ-2019ರಲ್ಲಿ ಪಾಸಾಗಿ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಕ್ಕೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 5ರಂದು ಮೊಹಮ್ಮದ್ ನಜಿಮುದ್ದೀನ್ ತಂದೆ ನಯಿಮುದ್ದೀನ್ ಅವರನ್ನು ತಮ್ಮ ಕಚೇರಿಗೆ ಕರೆಯಿಸಿ, ಅವರಿಗೆ ಶಾಲುಹೊದಿಸಿ ಅಭಿನಂದಿಸಿದರು. ಪರಿಶ್ರಮಕ್ಕೆ ಫಲವಿದೆ ಎಂಬುದನ್ನು ತಾವು ತೋರಿಸಿದ್ದೀರಿ. ಅತ್ಯಂತ ಕಠಿಣವಾದ ಪರೀಕ್ಷೆಯನ್ನು ಪಾಸು ಮಾಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದೀರಿ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಹಾರೈಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್ ಹಾಗೂ ಸಾಧನೆ ತೋರಿದ ಅಭ್ಯರ್ಥಿಗಳ ಕುಟುಂಬದವರು ಇದ್ದರು.
ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ-2019ರಲ್ಲಿ 461ನೇ ರ‍್ಯಾಂಕ್ ಪಡೆದಿರುವ ಮೊಹಮ್ಮದ್ ನಜಿಮುದ್ದೀನ್ ಅವರು ಬೀದರನ ಹಳೆಯ ಪೊಲೀಸ್ ಠಾಣೆಯ ಹತ್ತಿರದ ಕಾಲೊನಿಯ ನಿವಾಸಿಯಾಗಿದ್ದಾರೆ. ಇವರು 1ರಿಂದ 10ನೇ ತರಗತಿವರೆಗೆ ಕೇಂದ್ರೀಯ ವಿದ್ಯಾಲಯ ಬೀದರನಲ್ಲಿ ಓದಿದ್ದು, ಹೈದ್ರಾಬಾದ್‌ನ ಚೈತನ್ಯ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿದ್ದಾರೆ. ಎಂ.ಎಸ್.ರಾಮಯ್ಯ ಇನಸ್ಟಿಟ್ಯೂಟ್ ಆಫ್ ಬೆಂಗಳೂರು ಇಲ್ಲಿ ಸಿವಿಲ್ ಎಂಜಿನಿಯರ್ ಓದಿದ್ದಾರೆ. ಮೊಹಮ್ಮದ್ ಅವರು ಸದರಿ ಪರೀಕ್ಷೆ ಪಾಸು ಮಾಡುವ ಮೊದಲು ನಾಗಪುರದ ನ್ಯಾಷನಲ್ ಅಕಾಡೆಮಿ ಆಫ್ ಡೈರೆಕ್ಟöನ ಇನ್‌ಕಮ್ ಟ್ಯಾಕ್ಸನಲ್ಲಿ ಅಸಿಸ್ಟಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾನೆ.
ಮೊಹಮ್ಮದ್ ಕಮರುದ್ದೀನ್ ಅವರಿಗೆ 511ನೇ ರ‍್ಯಾಂಕ್: ಮೊಹಮ್ಮದ್ ಕಮರುದ್ದೀನ್ ತಂದೆ ಫಿರೋಜುದ್ದೀನ್ ಖಾನ್ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ-2019ರಲ್ಲಿ 511ನೇ ರ‍್ಯಾಂಕ್ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ಬೀದರನ ಪನ್ಸಾಲ್ ತಾಲೀಮನ ನಿವಾಸಿಯಾಗಿರುವ ಮೊಹಮ್ಮದ್ ಕಮರುದ್ದೀನ್ ಅವರು 1 ರಿಂದ 9ನೇ ತರಗತಿವರೆಗೆ ಬೀದರನ ಏರಪೊರ‍್ಸ ಸ್ಕೂಲ್‌ನಲ್ಲಿ ಓದಿದ್ದಾರೆ. ಗುರುನಾನಕ್ ಸ್ಕೂಲ್ ಬೀದರನಲ್ಲಿ 10ನೇ ತರಗತಿ ಓದಿದ್ದಾರೆ. ಹೈದ್ರಾಬಾದ್‌ನಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದಾರೆ. ಗೌಹಾಟಿಯ ಐಐಟಿನಲ್ಲಿ ಬಿಟೆಕ್ ಸಿವಿಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ. ಇವರು 2014ರಲ್ಲಿ ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ ಪರೀಕ್ಷೆ ಪಾಸು ಮಾಡಿಕೊಂಡಿದ್ದು, ಸದ್ಯ ಉತ್ತರ ಪ್ರದೇಶದಲ್ಲಿ ಅಸಿಸ್ಟಂಟ್ ಮಟಿರಿಯಲ್ ಮ್ಯಾನೇಜರ್ ಎಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರಿಂದ ಅಭಿನಂದನೆ ಸಲ್ಲಿಸಿದರು.

ವರದಿ:-ಮಹೇಶ ಸಜ್ಜನ ಬೀದರ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *