ಸವಿತಾ ಸಮಾಜ ಭವನದಲ್ಲಿ ಸಂತರ ಸ್ಮರಣೋತ್ಸವ, ರಕ್ಷಾ ಬಂಧ ಕಾರ್ಯಕ್ರಮ
ಬೀದರ:- ಜನವಾಡ ರಸ್ತೆಯಲ್ಲಿರುವ ನೇತಾಜಿನಗರ ಸವಿತಾ ಭವನ ಸಭಾಂಗಣದಲ್ಲಿ ಶ್ರಾವಣ ಸೋಮುವಾರರಂದು ಸಂತ ಸೇನಾ ಮಹಾರಾಜ, ಪಂಡಿತ ರೇವತಿ ಪ್ರಸಾದ ಶರ್ಮಾ ಮತ್ತು ಘಾಳೆಪ್ಪಾ ಹಾರೂರಗೇರಿ ರವರ ಸ್ಮರೋತ್ಸವ, ಹವನ ಪವಿತ್ರ ರಕ್ಷಾ ಬಂಧನ ಸರಳ ಸಮಾರಂಭಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರೊಂದಿಗೆ ಆಚರಿಸಲಾಯಿತು. ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಸೇನಾ ಅವರ ಅಧ್ಯಕ್ಷತೆಯಲ್ಲಿ ಪವಿತ್ರ ರಕ್ಷಾ ಬಂಧನ ನಡೆದು ಸಮಾಜ ಬಾಂಧವರಿಗೆ ರಾಖಿ ಕಟ್ಟಲಾಯಿತು.
ಸಂತ ಸೇನಾ ಮಾಹಾರಾಜ, ಪಂಡಿತ ರೇವತಿ ಪ್ರಸಾದ ಶರ್ಮಾ ಮತ್ತು ಘಾಳೆಪ್ಪ ಹಾರೂರಗೇರಿ ಅವರ ಕುರಿತು ಸಮಾಜ ಅಧ್ಯಕ್ಷ ಉಮೇಶ ಗೊಂದೆಗಾಂವಕರ ಮತ್ತು ಪ್ರಕಾಶ ಮಾಹಾರಾಜ ಅವರು ಮಾತನಾಡಿ ಮಹನಿಯರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೆಕೆಂದು ಕರೆ ನೀಡಿದರು,
ಈ ಕಾರ್ಯಕ್ರಮಗಳಲ್ಲಿ ಸಮಾಜದ ಉಪಾಧ್ಯಕ್ಷ ನಾಗರಾಜ ಆರ್ಯ, ಸಂಜುಕುಮಾರ ಮೋರ್ಗಿಕರ, ಪ್ರಧಾನ ಕಾರ್ಯದರ್ಶಿ ಅಂಬಾದಾಸರಾವ ಡೊಂಗರಗಿಕರ, ಕೋಶಾಧ್ಯಕ್ಷ ವಸಂತ ಶ್ರೀಮನದಾರ, ಸಹಕಾರ್ಯದರ್ಶಿ ಹರಿಷ್ ಚಲುವಾ, ಮುಖಂಡರಾದ ಮಾಣಿಕರಾವ ಚಿನಿಮಿಶ್ರೀ, ನರಸಿಂಗರಾವ ಆರ್ಯ, ಕಾರ್ಯಕಾರಣಿ ಸಮಿತಿ ಸದಸ್ಯರಾದ ಪ್ರಕಾಶ ಭೋಪಳಗಢ, ಪ್ರಕಾಶ ಬೆಳ್ಳೂರೆ ಅವರ ಸೇರಿದಂತೆ ಸಮಾಜದ ಬೀದರ ಜಿಲ್ಲಾ ಸವಿತಾ ನಾವಿ ಸಮಾಜದ ಪ್ರಧಾನ ಕಾರ್ಯದರ್ಶಿ ಅಂಬಾದಾಸ ಕೆ. ಡೊಂಗರಗಿಕರ ಬಾಂಧವರು ಉಪಸ್ಥಿತರಿದ್ದರು.
ವರದಿ:-ಮಹೇಶ ಸಜ್ಜನ ಬೀದರ