ಸುಮಲತಾ ಹೆಸರಿಗೆ ಮಸಿ ಬಳಿಯುವ ಷಡ್ಯಂತರ: ರಾಕ್ ಲೈನ್ ಗಂಬೀರ ಆರೋಪ
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯ ಸಮಯದಲ್ಲಿ ತಮ್ಮ ಹಾಗು ಸುಮಲತಾ ಅವರ ನಕಲಿ ವಿಡಿಯೋ ಸೃಷ್ಠಿಸಿ ತೇಜೋವಧೆ ಮಾಡಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಪ್ರಯತ್ನ ಮಾಡಿದ್ದರು ಎಂದು ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗಂಬೀರ ಆರೋಪ ಮಾಡಿದ್ದಾರೆ.
ಹೋಟೆಲ್ ಒಂದಕ್ಕೆ ಊಟಕ್ಕೆ ಹೋದ ವಿಡಿಯೋ ಕ್ಲಿಪ್ಲಿಂಗ್ ತೆಗೆದುಕೊಂಡು ಅದಕ್ಕೆ ಅಶ್ಲೀಲ ಚಿತ್ರ ಜೋಡಿಸಿ ತೇಜೋವಧೆ ಮಾಡುವ ಸಣ್ಣತನಕ್ಕೆ ಮುಂದಾಗಿದ್ದರು ಎಂದು ದೂರಿದ್ದಾರೆ.
ಕೆ ಆರ್ ಎಸ್ ಬಿರುಕು ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅವರ ನಡುವೆ ವಯಕ್ತಿಕ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ನಡುವೆಯೇ ರಾಕ್ ಲೈನ್ ವೆಂಕಟೇಶ್ ಅವರ ಆರೋಪ ಮಹತ್ವ ಪಡೆದುಕೊಂಡಿದೆ.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂತಹ ಕೆಲಸಕ್ಕಾದರೂ ಇಳಿಯುತ್ತಾರೆ ಎನ್ನುವುದು ಇದೊಂದು ಉದಾಹರಣೆ ಸಾಕು. ಮುಖ್ಯಮಂತ್ರಿಯಾಗಿದ್ದರು , ಹೋಟೆಲ್ ನಲ್ಲಿ ಊಟಕ್ಕೆ ಹೋದ ವಿಡಿಯೋ ಕ್ಲಿಪ್ ಗಳನ್ನು ತೆಗೆದುಕೊಂಡು ಅದನ್ನು ನಾನು ಅರ್ಥ ಬರುವ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದರು ಕೊನೆಗೆ ಈಗ ಬೇಡ ಎಂದು ಸುಮ್ಮನಾಗಿದ್ದರು ಎನ್ನುವ ಸಂಗತಿಯನ್ನು ಬಯಲು ಮಾಡಿದ್ದಾರೆ.
ಚುನಾವಣೆ ಸಂಬಂಧ ಬೆಂಗಳೂರು ಮತ್ತು ಮಂಡ್ಯದಲ್ಲಿ ಹಲವು ಸಭೆಗಳನ್ನು,ಚರ್ಚೆಗಳನ್ನು ಮಾಡುತ್ತಿದ್ದೆವು. ನಮ್ಮ ಬೆಂಬಲಿಗರ ಜೊತೆ ಚರ್ಚಿಸಲು ಹೊಟೇಲ್ ಗಳಲ್ಲಿ ಕೂಡ ಸಭೆ ಮಾಡುತ್ತಿದ್ದೆವು ಎಂದು ಅವರು ತಿಳಿಸಿದ್ದಾರೆ.
ಏಟ್ರಿಯಾ ಹೊಟೇಲ್ ನಲ್ಲಿ ಸಭೆ ನಡೆಸಲು ನಿಶ್ಚಯಿಸಿದ್ದಾಗ ಕಾರಿನಿಂದ ನಾನು ಮತ್ತು ಸುಮಲತಾ ಅವರು ಇಳಿದು ಹೋಗುವಾಗ ಹೊಟೇಲ್ ನ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಸೆಕ್ಯುರಿಟಿ ಕೈಯಿಂದ ಪಡೆದುಕೊಂಡು ಸುಮಲತಾ ಅವರ ಹೆಗಲಿಗೆ ಯಾರೋ ಕೈ ಹಾಕಿದ್ದ ಫೋಟೋ ಬಳಸಿಕೊಂಡು ನಾನು ಮತ್ತು ಸುಮಲತಾ ಅವರು ಹೊಟೇಲ್ ಕಾರಿಡಾರ್ ಮೂಲಕ ರೂಂಗೆ ಇಬ್ಬರೇ ಹೋಗುತ್ತೇವೆ ಎಂದು ಅಶ್ಲೀಲ ಚಿತ್ರಗಳನ್ನು ತಂದು ಪೇಸ್ಟ್ ಮಾಡಿ ನಕಲಿ ವಿಡಿಯೊ ಸೃಷ್ಟಿಸಿ ಚುನಾವಣೆ ಸಂದರ್ಭದಲ್ಲಿ ಹರಿಬಿಡಲು ಆಸೆಪಟ್ಟಿದ್ದರು ಆದರೆ ಅದು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಸಂಖ್ಯಾತ ಅಭಿಮಾನಿಗಳಿದ್ದಾರೆ:
ಸಂಸದೆ ಸುಮಲತಾ ಅಂಬರೀಶ್ ಅವರ ಪರವಾಗಿ ಅಂಬರೀಶ್ ಅವರ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ ಅವರು ಹೆದರುವ ಅಗತ್ಯವಿಲ್ಲ ಎಂದು ಇದೇ ವೇಳೆ ತಿಳಿಸಿದರು.