ಸಂಸದೆ ಸುಮಲತಾ ರವರು ತಮ್ಮ ಗಂಡ ಅಂಬರೀಶ್ ಹೆಸರು ಸಹ ಹೇಳಲು ಯಾರಿಗೂ ಯೋಗ್ಯತೆ ಇಲ್ಲ ಎಂದು ಮಾಧ್ಯಮದ ಮುಂದೆ ಗುಡುಗಿದ್ದರು. ಈ ವಿಚಾರ ಸಂಬಂಧ ಇದೀಗ ಸಾರಾ ಮಹೇಶ್ ಪ್ರತಿಕ್ರಿಯಿಸಿದ್ದು, ಸಂಸದೆ ಸುಮಲತಾ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನನಗಾಗಲೀ , ನಮ್ಮ ಪಕ್ಷದವರಿಗಾಗಲೀ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಾರಾ ಮಹೇಶ್ ನಮ್ಮ ಕ್ಷೇತ್ರದ ಸಂಸದೆ, ದಿ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಕ್ಷೇತ್ರದಲ್ಲಿ ಕೋವಿಡ್ ನಂತರ ಭೇಟಿ ಕೊಟ್ಟು ಕೆಲಸ ಮಾಡುವ ಮೂಲಕ ಬ್ಯುಸಿಯಾಗಿದ್ದಾರೆ. ಹೀಗಾಗಿ ಸುಮಲತಾ ಬಗ್ಗೆ ಮಾತನಾಡಬೇಡಿ ಎಂದು ಕುಮಾರಣ್ಣನ ಬಳಿ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಇದೆ ವೇಳೆ ಮಾತನಾಡಿದ ಸಾರಾ ರವರು ಕೆ ಆರ್ ಎಸ್ ಡ್ಯಾಂ ನಲ್ಲಿ ಬಿರುಕು ಬಿಟ್ಟಿದೆ ಎಂದರೆ ಆ ವಿಚಾರಕ್ಕೆ ಸಂಬಂಧಿಸಿದಂತೆ ಅವರೇ ಹೊಗಿ ಪರಿಶೀಲನೆ ಮಾಡಬೇಕಿತ್ತೇ ಹೊರತು ಈ ರೀತಿ ಯಾರದ್ದೋ ಮಾತನ್ನು ಕೇಳಿ, ಬಿರುಕಿನ ಬಗ್ಗೆ ಮಾತನಾಡಬಾರದಿತ್ತು. ಕೃಷ್ಣರಾಜ ಸಾಗರ ಕೇವಲ ಕಟ್ಟೆಯಲ್ಲ, ಅದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಜನರ ದಿನನಿತ್ಯದ ಜೀವನಾಡಿ ಎಂದು ಹೇಳಿದ್ದಾರೆ.