ಬಡತನ ಇನ್ನೂ ನಮ್ಮ ಮಧ್ಯೆ ಎಷ್ಟರ ಮಟ್ಟಿಗೆ ಜೀವಂತವಾಗಿದೆ ಎಂಬುದಕ್ಕೆ ಈಗ ನಾವು ಹೇಳುತ್ತಿರುವ ಸ್ಟೋರಿಯೇ ಸಾಕ್ಷಿ, ಫುಡ್ಕಿಟ್ ಕೊಡುತ್ತಾರೆ ಎಂಬ ಸುಳ್ಳು ವದಂತಿಯಿಂದ ಬಡ ಕಾರ್ಮಿಕರು ಎಷ್ಟರ ಮಟ್ಟಿಗೆ ಪರದಾಡಿದ್ದಾರೆ ನೀವೆ ನೋಡಿ.
ಕಾರ್ಮಿಕ ಇಲಾಖೆಯ ಫುಡ್ ಕಿಟ್ ವಿತರಣೆ ಮಾಡುತ್ತದೆ ಅಂತ ಯಾರೋ ಹೇಳಿದ್ದಾರೆ. ಈ ವಿಷಯ ತಿಳಿದ ಜನ ನಾ ಮುಂದೆ ತಾ ಮುಂದೆ ಅಂತ ಕ್ಯೂ ನಿಂತು ಬಂದ ದಾರಿಗೆ ಸುಂಕ ಇಲ್ಲದೆ ವಾಪಸ್ ಆಗಿದ್ದಾರೆ. ಕಾರ್ಮಿಕ ಇಲಾಖೆಯಿಂದ ಮಧ್ಯಾಹ್ನ 3-30 ರ ಬಳಿಕ ಕಿಟ್ ವಿತರಿಸುತ್ತಾರೆ ಎಂದು ತಿಳಿದ ನೂರಾರು ಜನ ರಾಯಚೂರಿನ ಬಾಲಕಿಯರ ವಸತಿ ನಿಲಯದ ಮುಂದೆ ಕ್ಯೂ ನಿಂತಿದ್ದಾರೆ.
ಕಿಟ್ ಪಡೆಯಲು ರಾಯಚೂರು ನಗರದ ವಿವಿಧೆಡೆಯಿಂದ ಕಟ್ಟಡ ಕಾರ್ಮಿಕರು, 12 ಗಂಟೆಗಳ ಮುಂಚೆಯೇ ಬಂದು ಕಾದು ಕುಳಿತಿದ್ದಾರೆ, ಈ ವೇಳೆ ಸಾಮಾಜಿಕ ಅಂತರ, ಕೋವಿಡ್ ನಿಯಮ ಮರೆತಿದ್ದಾರೆ. ಕಿಟ್ ಬಗ್ಗೆ ಸೂಕ್ತ ಮಾಹಿತಿ ನೀಡದ ಕಾರ್ಮಿಕ ಇಲಾಖೆಯಿಂದ ಅಧಿಕಾರಿಗಳಿಗಾಗಿ ಕಾದು ಕುಳಿತದ್ದರು. ಅಧಿಕಾರಿಗಳ ಮಾಹಿತಿ ಕೊರತೆಯಿಂದ ಕಿಟ್ ಗಾಗಿ ಕಾರ್ಮಿಕರ ಪರದಾಡಿದ್ದಾರೆ. ಅತ್ತ ಕಿಟ್ಟೂ ಇಲ್ಲದೇ, ಇತ್ತ ದಿನ ಕೆಲಸವೂ ಇಲ್ಲದಂತಾಗಿದೆ.