ಜೆಸ್ಕಾಂ ಅಧಿಕಾರಿ ವಿಜಯ್ ಕುಮಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ
ಬಳ್ಳಾರಿ ಜು 15 : ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಗರದಲ್ಲಿನ ಜೆಸ್ಕಾಂ ಅಧಿಕಾರಿ ವಿಜಯ್ ಕುಮಾರ್ ಅವರ ಮನೆ ಮತ್ತು ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಅವರು ಕಾರ್ಯ ನಿರ್ವಹಿಸುತ್ತಿದ್ದ ನಗರದ ಕಪ್ಪಗಲ್ಲು ರಸ್ತೆಯಲ್ಲಿರುವ ಜೆಸ್ಕಾಂನ ಬಳ್ಳಾರಿ ಉಪ ವಿಭಾಗದ ಉಪ ವಿದ್ಯುತ್ ಪರಿವೀಕ್ಷಕರು(ಎಲೆಕ್ಟ್ರಿಕಲ್ ಇನ್ಸ್ ಫೆಕ್ಟರ್) ಕಚೇರಿ,
ಮತ್ತು ಬಸವೇಶ್ವರ ನಗರದಲ್ಲಿಹೊಂದಿರುವ ಮನೆ ಹಾಗು ಹಾಲಿ ವಾಸವಿರುವ ವೀರನಗೌಡ ಕಾಲೋನಿಯ ಮನೆಯ ಮೇಲೆ ದಾಳಿ ಮಾಡಲಾಗಿದೆ.
ವಿಜಯಕುಮಾರ್ ಮನೆಯಲ್ಲಿಯೇ ಇದ್ದು ಅವರ ವಿಚಾರಣೆ ನಡೆಸಿದ್ದಾರೆ.
ಮನೆಯಲ್ಲಿ ಸ್ವಂತ ಇನ್ನೋವ ಕಾರ್, ಲಕ್ಷಾಂತರ ರೂಗಳ ಬೈಕ್, ಸಂಬಂಧಿಕರ ಹೆಸರಲ್ಲಿ ಅನೇಕ ಕಡೆ ನಿವೇಶನ, ಚಿನ್ನಾಭರಣ, ಹಣಕಾಸು ವ್ಯವಹಾರದ ದಾಖಲೆಗಳನ್ನು ಹೊಂದಿರುವುದನ್ಬು ಆಧಿಕಾರಿಗಳು ಪರಿಶೀಲನೆ ನಡೆಸಿದ್ದಾರಂತೆ.
ಇತ್ತೀಚೆಗೆ ವಿಜಯ್ ಕುಮಾರ್ ಅವರು ಬಡ್ತಿ ಹೊಂದಿ ಬೆಂಗಳೂರಿಗೆ ವರ್ಗಾ ಆಗಿತ್ತಂತೆ ಆದರೆ ಇಲ್ಲಿನ ಆದಾಯ ಬಿಟ್ಟು ಬೆಂಗಳೂರಿಗೆ ಹೋಗಲು ತಮ್ಮ ಬಡ್ತಿಯನ್ನೇ ತಿರ್ಸಕರಿಸಿದ್ದರೆಂದು ಹೇಳಲಾಗುತ್ತಿದೆ.