ನವೆಂಬರ್‌ನಲ್ಲಿ ಸಿಗಲಿದೆಯೇ ಕರೋನಾ ಲಸಿಕೆ ? ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದೇನು?

ಕೊರೊನಾವೈರಸ್ (Coronavirus) ಲಸಿಕೆ ಈ ವರ್ಷದ ನವೆಂಬರ್ ವೇಳೆಗೆ ಬರಬಹುದು. ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಲಸಿಕೆ ತಯಾರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.

ವಾಷಿಂಗ್ಟನ್: ಈ ವರ್ಷದ ನವೆಂಬರ್ ವೇಳೆಗೆ ಕೊರೊನಾವೈರಸ್ (Coronavirus) ಲಸಿಕೆ ಬರಬಹುದು. ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಲಸಿಕೆ ತಯಾರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  (Donald Trump) ಹೇಳಿದ್ದಾರೆ. ಆದಾಗ್ಯೂ ಟ್ರಂಪ್ ಅವರ ಈ ಗಡುವು ಅಮೆರಿಕದ ತಜ್ಞರು ನೀಡಿದ ಗಡುವುಗಿಂತಲೂ ಮುಂದಿದೆ.

ಕರೋನಾ ಲಸಿಕೆ ಚುನಾವಣೆಗೆ ಮುನ್ನ ಸಿದ್ಧವಾಗುವ ಸಾಧ್ಯತೆಯಿದೆಯೇ ಎಂದು ಗುರುವಾರ ನಡೆದ ರೇಡಿಯೋ ಟಾಕ್ ಶೋನಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆಲವು ಸಂದರ್ಭಗಳಲ್ಲಿ ಇದು ಸಾಧ್ಯ ಎಂದು ನಾನು ಭಾವಿಸುತ್ತೇನೆ. ‘ವರ್ಷಾಂತ್ಯದ ಮೊದಲು ಲಸಿಕೆ ಸಿದ್ಧವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಲಸಿಕೆ ಬಗ್ಗೆ ಹಲವು ಸಂಶೋಧನೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ನಮಗೆ ಯಶಸ್ಸು ಸಿಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆಯಿಂದ ನುಡಿದರು.

ಅದೇ ಸಮಯದಲ್ಲಿ ಕರೋನಾವೈರಸ್ ವಿರುದ್ಧ ಹೋರಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ವೈದ್ಯ ಆಂಥೋನಿ ಫೌಸಿ ಬುಧವಾರ ‘ನಾವು ಯಶಸ್ಸಿನ ವಿಶ್ವಾಸ ಹೊಂದಿದ್ದೇವೆ. ಈ ವರ್ಷದ ಕೊನೆಯಲ್ಲಿ ಅಥವಾ 2021 ರ ಆರಂಭದಲ್ಲಿ ನಮ್ಮಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಇದೆಯೇ ಎಂದು ನಮಗೆ ತಿಳಿಯುತ್ತದೆ ಎಂದರು.

ವಾಸ್ತವವಾಗಿ, ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಕರೋನಾವೈರಸ್ ಅನ್ನು ತಡೆಗಟ್ಟಲು ಅವರ ಸರ್ಕಾರ ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರು ಚುನಾವಣೆಗೆ ಮುನ್ನ ಲಸಿಕೆಯನ್ನು ಮಾರುಕಟ್ಟೆಯಲ್ಲಿ ಪಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಲಸಿಕೆ ತಯಾರಿಸಲು ಟ್ರಂಪ್ ಆಡಳಿತವು ಫೆಡರಲ್ ಹಣವನ್ನು ಸಹ ಒದಗಿಸುತ್ತಿದೆ. ಒಂದೊಮ್ಮೆ ಚುನಾವಣೆಗೂ ಮೊದಲ ಲಸಿಕೆ ಮಾರುಕಟ್ಟೆಗೆ ಬಂದಲ್ಲಿ ಟ್ರಂಪ್ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಸಬಹುದು.

ಬಯೋಟೆಕ್ ಕಂಪನಿ ಮೊರ್ಡೆನಾ ಅಭಿವೃದ್ಧಿಪಡಿಸಿದ ಸಂಭಾವ್ಯ  ಕೋವಿಡ್ -19 (Covid 19)  ಲಸಿಕೆಯ ಮೂರನೇ ಹಂತದ ಪ್ರಯೋಗದ ಆರಂಭದಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ ಟ್ರಂಪ್, ಮಾಡರ್ನಾ (Moderna) ಕ್ಕೆ ಹೆಚ್ಚುವರಿಯಾಗಿ 472 ಮಿಲಿಯನ್ ಪಾವತಿಸುವ ಭರವಸೆ ನೀಡಿದ್ದರು. ಇದಕ್ಕೂ ಮೊದಲು ಕಂಪನಿಯು ಏಪ್ರಿಲ್‌ನಲ್ಲಿ 483 ಮಿಲಿಯನ್ ಪಡೆದಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *