ಕಲಬುರಗಿ : ಸೇಡಂ ಪಿಎಸ್ಐ ವಿರುದ್ಧ ಕೇಸ್
ಕಲಬುರಗಿ : ಅವಾಚ್ಯ ಶಬ್ದಗಳಿಂದ ದೂರವಾಣಿಯಲ್ಲಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಸೇಡಂ ಪಿಎಸ್ಐ ನಾನಾಗೌಡ ಪಾಟೀಲ ಅವರ ವಿರುದ್ಧ ಕಲಬುರಗಿಯ ಗ್ರಾಮೀಣ ಠಾಣೆ ಪೆÇಲೀಸರು ಎಫ್ಐಆರ್ದಾಖಲಿಸಿಕೊಂಡಿದ್ಧಾರೆ.
ಅಕ್ರಮವಾಗಿ ಹಸುಗಳ ಸಾಗಣೆಯ ಪ್ರಕರಣ ಕುರಿತು ವಿಚಾರಿಸಿದ ಹಿನ್ನೆಲೆಯಲ್ಲಿ ನಗರದ ಆಳಂದ ರಸ್ತೆಯಲ್ಲಿರುವ ನಂದಿ ಎನಿಮಲ್ ವೆಲ್ಫೇರ್ ಸೊಸೈಟಿಯ ಹುಣಚಿರಾಯ (ಕೇಶವ) ಮೋಟಗಿಗೆ ಪಿಎಸ್ಐ ನಿಂದಿಸಿದ್ದರು. ಈ ಕುರಿತು ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲ್ಲೆಯಲ್ಲಿ ನ್ಯಾಯಾಲಯ ಮೊರೆ ಹೋಗಿದ್ದರು. ನ್ಯಾಯಾಲಯ ಸೂಚನೆಯಂತೆ ಕೇಸ್ ದಾಖಲಿಸಿಕೊಂಡು ತನಿಖೆ ಅರಂಭಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ಧಾರೆ.