ಕಾಣದ ಕೈ ಕೆಲಸ; ನಟ ದರ್ಶನ್ ಕೆಂಡಾಮಂಡಲ

ಬೆಂಗಳೂರು :  25 ಕೋಟಿ ವಂಚನೆ ಪ್ರಕರಣ ನಿರ್ಮಾಪಕ ಉಮಾಪತಿ, ಅರುಣಾ ಕುಮಾರಿ, ದಲಿತ ಮೇಲಿನ ಹಲ್ಲೆ, ದೊಡ್ಮನೆ ಆಸ್ತಿ ವಿವಾದದ ತನಕ ಬಂದು ನಿಂತಿದೆ. ದೊಡ್ಮನೆ ಆಸ್ತಿ ವಿಷಯ ಬೆಳಕಿಗೆ ಬರುತ್ತಿದ್ದಂತೆ ದರ್ಶನ್ ಕೆರಳಿ ಕೆಂಡಾಮಂಡಲರಾಗಿದ್ದು ಬೇಕಂತಲೇ ಪ್ರಚೋದಿಸುತ್ತಿದ್ದಾರೆ, ಪ್ರಕರಣದ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ. ಸುಮ್ಮನೆ ಇರುವುದಿಲ್ಲ ಎಂದು ಗುಡುಗಿದ್ದಾರೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಳಸಿದ ಗಾಂಡುಗಿರಿ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ನಟ ದರ್ಶನ್, ಅವರಪ್ಪನಿಗೇ ಹುಟ್ಟಿ, ಗಂಡಸು ಆಗಿದ್ದರೆ ಸಂಜೆಯೊಳಗೆ ನನ್ನ ವಾಯ್ಸ್ ನೋಟು ಬಿಡುಗಡೆ ಮಾಡಲಿ, ಅಲ್ಲದೆ ಅವರ ಬಳಿ ಎಷ್ಟು ಭಾಣ ಬಿರುಸು ಇದ್ದರೆ ಬಿಡಲಿ ತಲೆ ಕೆಡಿಸಿಕೊಳ್ಳಲ್ಲ ಎಂದು ಇಂದಿಲ್ಲಿ ಸವಾಲು ಹಾಕಿದ್ದಾರೆ.
ಮೈಸೂರಿನ ಫಾರ್ಮ್ ಹೌಸ್‍ನಲ್ಲಿ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಸೇರಿದಂತೆ ಮತ್ತಿತರ ವಿರುದ್ದ ಹರಿಹಾಯ್ದರು,
ನಾನು ಮೂರು ಬಿಟ್ಟು ನಿಂತಿದ್ದೇನೆ. ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಮಾತನಾಡಿದ ಆಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಕಳುಹಿಸಿರುವ ವಾಯ್ಸ್ ನೋಟು ತಾಕತ್ತಿದ್ದರೆ ಬಿಡುಗಡೆ ಮಾಡಲು ಸಿದ್ದ. ಇಂದ್ರಜಿತ್ ಲಂಕೇಶ್ ಅವರಪ್ಪನಿಗೆ ಹುಟ್ಟಿದ್ದರೆ ನಾನು ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನಾನು ಹತ್ತನೇ ತರಗತಿ ಪಾಸಾಗಿದ್ದೇನೆ, ಡಿಎಫ್‍ಟಿ ಮಾಡಿದ್ದೇನೆ. ನಟಗಾಗಿ ಬುದಕು ಕಂಡುಕೊಂಡು ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಕಲಾವಿದರನ್ನು ಅನಕ್ಷರಸ್ತರನ್ನು ಎಂದಿದ್ದಾರೆ ಎಷ್ಟು ಮಂದಿ ಕಲಾವಿದರು ಪ್ರತಿಕ್ರಿಯೆ ನೀಡಿದ್ದಾರೆ ಪತ್ರಕರ್ತನಾಗಿರುವ ಇಂದ್ರಜಿಲ್ ಲಂಕೇಶ್ ನಿರ್ದೇಶಕನಾಗಲು ಯಾವ ತರಬೇತಿ ಪಡೆದಿದ್ದಾರೆ ಎನುವುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.
ನಮ್ಮ ಫಾರಂ ಹೌಸ್‍ನಲ್ಲಿ ರೇವ್ ಪಾರ್ಟಿ ಮಾಡಿ ಮಾದಕ ವಸ್ತು ಸರಬರಾಜು ಮಾಡಲಾಗಿತ್ತು ಎನ್ನುತ್ತಾರೆ. ತೋಟದಲ್ಲಿ ಫಾರಂ ಹೌಸ್‍ನಲ್ಲಿ ಪಾರ್ಟಿ ಮಾಡಲು ಆಗುತ್ತಾ? ನನಗೆ ಪಾರ್ಟಿ ಮಾಡುವ ಮೂಡ್ ಇಲ್ಲ, ಹಾಗಿದ್ದರೆ ಇನ್ನೂ ದೊಡಡ್ದಾಗಿ ಮಾಡುತ್ತಿದ್ದೆ ಎಂದರು.
ಉಮಾಪತಿ ವಿರುದ್ದವೂ ಗುಡುಗು:
ಡೊಡ್ಮನೆ ಆಸ್ತಿ ವಿವಾದವನ್ನು ನಿರ್ಮಾಪಕ ಉಮಾಪತಿ ಎಳೆದು ತಂದಿದ್ಧಾರೆ. ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರಿಂದ ನೋಂದಾಯಿಸಿದ ಆಸ್ತಿಯನ್ನು ನನಗೆ ಕೊಡುವುದಾಗಿ ಕೇಳಿದ್ದರು. ಕಳೆದ ಒಂದೂವರೆ ವರ್ಷದಿಂದ ಅದರ ಬಾಡಿಗೆ ತಂದುಕೊಡುತ್ತಿದ್ದರು. ಈ ಪ್ರಕರಣ ಬಂದ ನಂತರ ಆಸ್ತಿ ನೋಂದಣೀ ಮಾಡಿಕೊಡದೆ ವಿಷಯ ಬೇರೆ ಕಡೆ ಸ್ಥಳಾಂತರ ಮಾಡುತ್ತಿದ್ದಾರೆ ಇದಕ್ಕೆ ಉಮಾಪತಿ ಕಾರಣ ಎಂದು ದೂರಿದ್ದಾರೆ.
ಸಿನಿಮಾ ಸಂಭಾವನೆಯ ಹಣವನ್ನು ಆಸ್ತಿಯಾಗಿ ಕೊಡಲು ಕೇಳಿದ್ದೆ.ಆಗ ಅವರು ಉಮಾಪತಿ ಅವರು ದೊಡ್ಮನೆ ಆಸ್ತಿ ಕೊಡಲು ಮುಂದೆ ಬಂದರು. ಅದಕ್ಕಾಗಿ ಬಾಡಿಗೆಯನ್ನು ತಂದು ಕೊಡುತ್ತಿದ್ದರು ಯಾಕಾಗಿ ಕೊಡುತ್ತಿದ್ದರು ಎಂದು ಪ್ರಶ್ನಿಸಿದರು.

ಪ್ರೇಮ್ ದೊಡ್ಡ ಪುಡಂಗಿನಾ?
ನಿರ್ಮಾಪಕ ಉಮಾಪತಿ ಅವರು ನಿರ್ದೇಶಕ ಪ್ರೇಮ್ ಜೊತೆ ಸಿನಿಮಾ ಮಾಡಲು ಮುಂದೆ ಬಂದರು. 70 ದಿನ ಕಾಲ್ ಶೀಟ್ ಕೇಳಿದರು. 70 ದಿನ ಕಾಲ್ ಶೀಟ್ ನೀಡಲು ಪ್ರೇಮ್ ಏನು ದೊಡ್ಡ ಪುಡಂಗಿನಾ. ಅವರಿಗೆ ಕೊಂಬು ಇದೆಯಾ ಎಂದು ನಟ ದರ್ಶನ್ ಪ್ರಶ್ನಿಸಿದರು.
ಅನಗತ್ಯವಾಗಿ ನಿರ್ಮಾಪಕ ಉಮಾಪತಿ ವಿಷಯವನ್ನು ದೊಡ್ಡದು ಮಾಡುತ್ತಾರೆ ಎಂದು ಆರೋಪಿಸಿದ್ಧಾರೆ.

ದೊಡ್ಮನೆ ದೊಡ್ಮನೆಯೇ
ಕನ್ನಡ ಚಿತ್ರರಂಗದಲ್ಲಿ ದೊಡ್ಡಮನೆ ಎಂದಿಗೂ ದೊಡ್ಡಮನೆಯೇ. ಡಾ. ರಾಜ್ ಕುಮಾರ್ ಅವರು ಬಂದರೆ ನಮ್ಮಪ್ಪ ತೂಗುದೀಪ ಶ್ರೀನಿವಾಸ್ ಎದ್ದು ನಿಲ್ಲುತ್ತಿದ್ದರು. ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರು ಬಂದರೆ ನಾನು ಎದ್ದು ನಿಂತು ಗೌರವ ಸಲ್ಲಿಸುತ್ತೇನೆ. ಇದು ನಮಗೆ ನಮ್ಮ ಮನೆಯವರು ಕಲಿಸಿದ ಪಾಠ ಎಂದು ನಟ ದರ್ಶನ್ ಹೇಳಿದರು.
ಪುನೀತ್ ಅವರನ್ನು ಬಿಟ್ಟರೆ ನನ್ನ ಬಳಿಯೇ ದುಬಾರಿ ಕಾರು ಇರುವುದು. ಕನ್ನಡ ಚಿತ್ರರಂಗದಲ್ಲಿ ಯಾವ ನಟನ ಬಳಿ ಇದೆ ತೋರಿಸಲಿ ಎಂದೂ ಕೂಡ ಸವಾಲು ಹಾಕಿದರು. ದೊಡ್ಡ ಮನೆ ಎಂದಿಗೂ ದೊಡ್ಡ ಮನೆ. ಅದರ ಮೌಲ್ಯ ಯಾವತ್ತೂ ಕಡಿಮೆ ಆಗಲ್ಲ ಎಂದರು.

ಬಾಕ್ಸ್-2

ಮಾದ್ಯಮದ ವಿರುದ್ದವೂ ಗರಂ
ನಟ ದರ್ಶನ್ ಮಾತನಾಡುವ ಸಮಯದಲ್ಲಿ ಏಕ ವಚನ ಪದಪ್ರಯೋಗ ಮಾಡಿದ ಅವರು ಮಾಧ್ಯಮದ ವಿರುದ್ದವೂ ಹರಿಯಾಯ್ದರು. ನಾನು ನನ್ನ ಅಭಿಮಾನಿಗಳಿಗೆ ಮಾತ್ರ ಉತ್ತರ ಕೊಡುವೆ ಬೇರೆ ಯಾರಿಗೂ ಉತ್ತರ ನೀಡುವುದಿಲ್ಲ ಅದರ ಅಗತ್ಯವೂ ಇಲ್ಲ ಎಂದು ನಟ ದರ್ಶನ್ ಹೇಳಿದರು
ಅಂತರಂಗದ ಶತ್ರು, ಹಿತ ಶತ್ರು ಮತ್ತು ಬಹಿರಂಗ ಶತ್ರು ಮತ್ತು ಅಂತರಂಗದ ಶತ್ರುವಿನ ವಿರುದ್ದ ಹೋರಾಟ ಮಾಡಬೇಕಾಗಿದೆ.ಈಗ ಅವರು ಯಾರು ಎನ್ನುವುದು ಗುರುತಿಸಬೇಕಾಗಿದೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *