Trek for Health: ಶುದ್ಧ ಗಾಳಿಗಾಗಿ ಕಪ್ಪತ್ತಗುಡ್ಡಕ್ಕೆ ಹೋಗ್ತಿದ್ದಾರೆ ಜನ, ಇಲ್ಲಿರೋ ಔಷಧೀಯ ಸಸ್ಯಗಳಿಂದ ಆರೋಗ್ಯ ಸುಧಾರಣೆ ?
ಗದಗ: ಲಾಕ್ ಡೌನ್ ಸಮಯದಲ್ಲಿ ನಾಲ್ಕು ಗೋಡೆ ಮಧ್ಯದ ಉಸಿರುಗಟ್ಟಿಸೋ ವಾತಾವರಣದ ಜನ್ರಿಗೆ ಲಾಕ್ ಡೌನ್ ಓಪನ್ ಆಗಿದೆ ತಡ ಪ್ರಕೃತಿ ಸೌಂದರ್ಯ ಸವಿಯಲ್ಲಿ ಉತ್ತರ ಕರ್ನಾಟಕ ಸೈಹಾದ್ರಿ ಕಪ್ಪತ್ತಗುಡ್ಡದತ ಮುಖ ಮಾಡಿದ್ದಾರೆ. ಕಪ್ಪತ್ತಗುಡ್ಡದಲ್ಲಿರುವ ಪ್ಯೂರ್ ಏರ್ ಫೀಲ್ ಪಡೆದು ಕೆಲ ಹೊತ್ತು ಪ್ರಕೃತಿಯ ಮಡಿಯಲ್ಲಿ ಇದ್ದು ಎಂಜಾಯ್ ಮಾಡುತ್ತಿದ್ದಾರೆ. ಹೌದು ಹಸಿರ ಸೀರೆಯುಟ್ಟು ಕಂಗೊಳ್ತಿರೋ ಔಷಧೀಯ ಸಸ್ಯಗಳ ಕಾಶಿ ಕಪ್ಪತ್ತಗುಡ್ಡದ ಪ್ರಕೃತಿ ಸೌಂದರ್ಯ ದಶ್ಯಗಳು ನೋಡಲು ಎಂತವರು ಒಂದು ಸಲ ಬಂದು ಸೌಂದರ್ಯ ಸವಿ ಬೇಕು ಅನ್ಸೂತೆ. ವೀಕೆಂಡ್ ಕರ್ಫ್ಯೂ ತೆಗೆದ್ಮೇಲೆ ಸದ್ಯ ಯುವ ಜನರು ವೀಕೆಂಡ್ ಪಿಕ್ನಿಕ್ ಗಳನ್ನ ಪ್ಲಾನ್ ಮಾಡ್ಕೊತಿದಾರೆ. ಅದ್ರಲ್ಲೂ ಗದಗ ಸುತ್ತಮುತ್ತಲಿರೋ ಜನ ಕಪ್ಪತಗುಡ್ಡಕ್ಕೆ ವಿಸಿಟ್ ಮಾಡೋದಕ್ಕೆ ಶುರುಮಾಡಿದಾರೆ. ಪಕ್ಕದ ಧಾರವಾಡ ಹುಬ್ಬಳ್ಳಿ, ಕೊಪ್ಪಳ, ಬಾಗಲಕೋಟಿಯಿಂದ ಜನರು ಗುಡ್ಡಕ್ಕೆ ವಿಸಿಟ್ ಮಾಡ್ತಿದಾರೆ. ಅದ್ಯಾವಾಗ ದೇಶದಲ್ಲಿ ಅತ್ಯುತ್ತಮ ಗಾಳಿ ಹೊಂದಿರೋ ನಗರದಲ್ಲಿ ಗದಗ ಫಸ್ಟ್ ಅಂತಾ ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಪಟ್ಟಿ ಬಿಡುಗಡೆ ಮಾಡ್ತೊ ಅಲ್ಲಿಂದ ಕಪ್ಪತ ಗುಡ್ಡಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.
ಗದಗ ತಾಲೂಕಿನ ಬಿಂಕದಕಟ್ಟೆಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರು ವ್ಯಾಪ್ತಿಯಲ್ಲಿ ಈ ಪರ್ವತ ಸಾಲುಗಳು ಹರಡ್ಕೊಂಡಿವೆ. ಸುಮಾರು 80 ಹೆಕ್ಟೇರ್ ಪ್ರದೇಶವನ್ನ ವ್ಯಾಪಿಸಿರುವ ವನ, ಮಲೆನಾಡ ಸೊಬಗನ್ನು ಸೃಷ್ಟಿಸಿದೆ.. ಕಪ್ಪತಗುಡ್ಡ ತನ್ನ ಔಷಧಿ ಸಸ್ಯಗಳ ಭಂಡಾರದಿಂದಲೇ ಹೆಚ್ಚು ಪ್ರಚಲಿತವಾಗಿದೆ. ಸುಮಾರು 150 ಕ್ಕೂ ವಿವಿಧ ಬಗೆಯ ಔಷಧಿ ಸಸ್ಯಗಳು ಈ ಗುಡ್ಡದಲ್ಲಿ ಲಭ್ಯವಿದ್ಯಂತೆ.. ಹೀಗಾಗಿ ಅಪರೂಪದ ಸಸ್ಯಕಾಶಿಯನ್ನ ನೋಡೋದಕ್ಕೆ ಜನರ ದಂಡು ಹರಿದುಬರ್ತಿದೆ..ಬೆಳಗಿನ ಮೋಡ ಮುಸುಕಿನ ಆಟ ನೋಡೋದು ಪ್ರವಾಸಿಗರಿಗೆ ಹಬ್ಬವೇ ಸರಿ.. ಅರೆ ಕ್ಷಣ ಇಬ್ಬನಿಯಿಂದ ತುಂಬಿಕೊಳ್ಳುವ ಗುಡ್ಡ ಮತ್ತೆ ಕೆಲ ಸೆಕೆಂಡ್ ಶುಭ್ರವಾಗಿ ಇಡೀ ಗುಡ್ಡ ಕಂಗೊಳಿಸುತ್ತೆ.. ಗುಡ್ಡದ ಮೇಲ್ಭಾಗದಲ್ಲಿ ಬೀಸುವ ಶುದ್ಧಗಾಳಿ ಎಂಥ ದಣಿವನ್ನೂ ಸುಧಾರಿಸುವ ಶಕ್ತಿಹೊಂದಿದೆ.. ಪೀಕ್ ನಲ್ಲಿರೋ ಗಾಳಿಗುಂಡಿ ಸ್ಪಾಟ್ ನಲ್ಲಿ ಜನ ಜಾತ್ರೆಯೇ ಸೇರುತ್ತೆ.
ಯಾಕಂದ್ರೆ ಅಲ್ಲಿ ಬಿಸೋ ಗಾಳಿ ಅತ್ಯಂತ ವೇಗ ಹಾಗೂ ತಂಪಾಗಿರುತ್ತೆ. ಗುಡ್ಡದ ತುದಿವರೆಗೂ ಟ್ರ್ಯಾಕ್ ಮಾಡ್ತಾ ಬರೋ ಜನ ಗಾಳಿ ಗುಂಡು ಬಸವೇಶ್ವರ ದೇವಸ್ಥಾನದ ಪಕ್ಕ ಕೂತು ಸ್ವಲ್ಪಹೊತ್ತು ರಿಲ್ಯಾಕ್ಸ್ ಆಗ್ತಾರೆ.. ತಂಪು ವಾತಾವರಣಕ್ಕೆ ಮೈವೊಡ್ಡಿ ಎಂಜಾಯ್ ಮಾಡ್ತಾರೆ.ಜನರು ವೀಕೆಂಡ್ ಪ್ಲಾನ್ ಗಳನ್ನ ಮಾಡ್ತಿದಾರೆ. ಹತ್ತಿರದ್ದೇ ಸ್ಪಾಟ್ ಗಳಿಗೆ ವಿಸಿಟ್ ಮಾಡಿ ಬೇಜಾರು ಕಳ್ಕೊಬೇಕು ಅನ್ನೋ ಉಮೇದಿನಲ್ಲೂ ಇದಾರೆ.. ಆದ್ರೆ, ಇನ್ನೂ ಸಂಪೂರ್ಣವಾಗಿ ಕೊವಿಡ್ ಹೋಗಿಲ್ಲ ಅನ್ನೋದನ್ನ ಮರೆಯೋಹಾಗಿಲ್ಲ.. ಮಾಸ್ಕ್ ಬಳಸ್ದೆ ಗುಂಪು ಗುಂಪಾಗಿ ಸೇರಿದ್ರೆ ಅಪಾಯಕ್ಕೆ ನಾವೇ ಆಹ್ವಾನ ಕೊಟ್ಟಹಾಗೆ.. ಹೀಗಾಗಿ ಎಂಜಾಯ್ ಮಾಡ್ತಾ ಮೈ ಮರೆಯೋ ಬದ್ಲು ಸೆಫ್ಟಿ ಬಗ್ಗೆಯೂ ಪ್ರವಾಸಿಗರು ಗಮನ ಹರಿಸ್ಲೇಬೇಕು.