ಸಿಎಂ ರೇಸ್ ನಲ್ಲಿ ನಾನಿದ್ದೇನೆ: ಉಮೇಶ್ ಕತ್ತಿ
ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿ ತಾವು ಮುಂಚೂಣಿಯಲ್ಲಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿ ವಾಪಸ್ ಬಂದ ನಂತರ ಅವರು ರಾಜೀನಾಮೆ ನೀಡುತ್ತಾರೆಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಪೈಪೋಟಿ ಕಂಡುಬಂದಿದೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಹಿರಿತನವಿದೆ. ಕಳಂಕ ರಹಿತನಾಗಿದ್ದೇನೆ. ಅದೃಷ್ಟ ಒಲಿದರೆ ಹಾಗೂ ಪಕ್ಷದ ಮುಖಂಡರು ತೀರ್ಮಾನಿಸಿದರೆ ಜವಾಬ್ದಾರಿ ನಿರ್ವಹಿಸುವ ಆಸೆ ಇಟ್ಟುಕೊಂಡಿರುವುದಾಗಿ ತಿಳಿಸಿದರು.
ಒಂದು ವರ್ಷದಿಂದ ಸಿಎಂ ಬದಲಾವಣೆ ಕೂಗು ಕೇಳಿಬರುತ್ತಿದೆ. ಆದರೆ ಯಾರು ಈ ಕೂಗು ಹಬ್ಬಿಸುತ್ತಿದ್ದಾರೊ ಗೊತ್ತಿಲ್ಲ.ಈ ಬಗ್ಗೆ ಪ್ರತಿಕ್ರಿಯಿಸಲು ಉಮೇಶ್ ಕತ್ತಿ ನಿರಾಕರಿಸಿದರು.