ಮುಸ್ಲಿಮರಿಗೆ ಇಂದು ಬಕ್ರೀದ್‌ ಹಬ್ಬದ ಸಂಭ್ರಮ: ಪ್ರಧಾನಿ ಮೋದಿ, ರಾಷ್ಟ್ರಪತಿಯಿಂದ ಶುಭ ಹಾರೈಕೆ!

ಹೈಲೈಟ್ಸ್‌:

  • ದೇಶದ ಮುಸ್ಲಿಮರಿಗೆ ಇಂದು ಬಕ್ರೀದ್‌ ಹಬ್ಬದ ಸಂಭ್ರಮ
  • ಪ್ರಧಾನಿ ಮೋದಿ, ರಾಷ್ಟ್ರಪತಿಯಿಂದ ಶುಭ ಹಾರೈಕೆ
  • ಮುಸ್ಲಿಮರ ಪ್ರಮುಖ ಹಬ್ಬದಲ್ಲೊಂದು ಈ ಬಕ್ರೀದ್‌

ಹೊಸದಿಲ್ಲಿ: ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ‘ಬಕ್ರೀದ್‌’ ಕೂಡ ಒಂದು. ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ಹಜ್ಜ್‌’ ತಿಂಗಳ 10ರಂದು ಈ ಹಬ್ಬ ಆಚರಿಸಲಾಗುತ್ತದೆ. ಇಸ್ಲಾಮಿನ ಇತಿಹಾಸವನ್ನು ಸ್ಮರಿಸುವ ಈ ಹಬ್ಬ ಮನುಷ್ಯನಲ್ಲಿ ಮುಖ್ಯವಾಗಿ ಇರಬೇಕಾದ ಸಹೋದರತೆ, ತ್ಯಾಗ, ಸಮರ್ಪಣಾ ಮನೋಭಾವ, ಬದ್ಧತೆಯ ಗುಣಗಳನ್ನು ನೆನಪಿಸುತ್ತದೆ.ಇನ್ನು

ಬಕ್ರೀದ್‌ ಹಿನ್ನೆಲೆ ಮುಸ್ಲಿಮರು ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸಿ ತಮ್ಮ ಕುಟುಂಬಸ್ಥರು, ಗೆಳಯರಿಗೆ ಶುಭಾಶಯ ಹಂಚಿಕೊಳ್ಳುತ್ತಾರೆ. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಇನ್ನು ಬಕ್ರೀದ್‌ ಹಬ್ಬಕ್ಕೆ ಕೇಂದ್ರ ರಾಜ್ಯ ನಾಯಕರು, ಗಣ್ಯರು ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆ.

ರಾಷ್ಟ್ರಪತಿ ರಾಮಾನಾಥ್‌ ಕೋವಿಂದ್‌ ದೇಶದ ಮುಸ್ಲಿಂರಿಗೆ ಬಕ್ರೀದ್‌ ಹಬ್ಬದ ಶುಭಾಶಯ ಕೋರಿದ್ದಾರೆ. ಉರ್ದುನಲ್ಲಿಯೂ ರಾಷ್ಟ್ರಪತಿಗಳು ವಿಶ್‌ ಮಾಡಿದ್ದಾರೆ.

ಈದ್-ಉಲ್-ಅಧಾದ ಶುಭಾಶಯಗಳು. ಈ ದಿನವು ಸಾಮೂಹಿಕ ಅನುಭೂತಿ, ಸಾಮರಸ್ಯ ಮತ್ತು ಹೆಚ್ಚಿನ ಒಳ್ಳೆಯ ಸೇವೆಯಲ್ಲಿ ಸೇರ್ಪಡಿಸುವಂತಹ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.

ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ ಎಂದು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ನಾಡಿನ ಜನತೆಗೆ ಶುಭ ಕೋರಿದ್ದಾರೆ.

ಬಕ್ರೀದ್‌ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ನನ್ನ ಎಲ್ಲ ಮುಸ್ಲಿಂ ಗೆಳಯರಿಗೆ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಎಲ್ಲರಿಗೂ ಬಕ್ರೀದ್‌ ಹಬ್ಬದ ಶುಭಾಶಯಗಳು, ಈ ಸುದಿನ ಖುಷಿ ಹಾಗೂ ಸೌಹಾರ್ದತೆ ಇನ್ನಷ್ಟು ಹೆಚ್ಚಾಗಲಿ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್‌ ಬಯಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *