”ನಗ್ನವಾಗಿ ಆಡಿಷನ್ ಕೊಡುವಂತೆ ಹೇಳಿದ್ದರು”: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ!

ಹೈಲೈಟ್ಸ್‌:

  • ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ
  • ನೀಲಿ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅರೆಸ್ಟ್
  • ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ ಸಾಗರಿಕಾ ಶೋನಾ ಸುಮನ್
  • ”ನಗ್ನ ಆಡಿಷನ್ ಕೊಡುವಂತೆ ಹೇಳಿದ್ದರು” ಎಂದ ಸಾಗರಿಕಾ ಶೋನಾ ಸುಮನ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಶ್ಲೀಲ ಸಿನಿಮಾಗಳ ನಿರ್ಮಾಣ ಆರೋಪದಡಿಯಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ ಕುಂದ್ರಾ ಅರೆಸ್ಟ್ ಆಗುತ್ತಿದ್ದಂತೆಯೇ ಮಾಡೆಲ್ ಸಾಗರಿಕಾ ಶೋನಾ ಸುಮನ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ರಾಜ್ ಕುಂದ್ರಾ ವಿರುದ್ಧ ಸಾಗರಿಕಾ ಶೋನಾ ಸುಮನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ”ನಗ್ನವಾಗಿ ಆಡಿಷನ್ ಕೊಡುವಂತೆ ರಾಜ್ ಕುಂದ್ರಾ ಹೇಳಿದ್ದರು” ಎಂದು ವಿಡಿಯೋದಲ್ಲಿ ಸಾಗರಿಕಾ ಶೋನಾ ಸುಮನ್ ಆರೋಪಿಸಿದ್ದಾರೆ.

ವಿಡಿಯೋದಲ್ಲಿ ಸಾಗರಿಕಾ ಶೋನಾ ಸುಮನ್ ಹೇಳಿರುವುದೇನು?
”ನಾನು ಮಾಡೆಲ್. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಇಂಡಸ್ಟ್ರಿಯಲ್ಲಿದ್ದೇನೆ. ನಾನೇನು ಹೆಚ್ಚು ಕೆಲಸ ಮಾಡಿಲ್ಲ. ಆದರೆ, ಲಾಕ್‌ಡೌನ್‌ನಲ್ಲಿ ಆದ ಕೆಲ ಬೆಳವಣಿಗೆಗಳ ಬಗ್ಗೆ ನಾನು ಹಂಚಿಕೊಳ್ಳಬೇಕಿದೆ. 2020ರ ಆಗಸ್ಟ್‌ನಲ್ಲಿ ನನಗೆ ಉಮೇಶ್ ಕಾಮತ್ ಅವರು ಫೋನ್ ಮಾಡಿದರು. ರಾಜ್ ಕುಂದ್ರಾ ನಿರ್ಮಾಣದ ವೆಬ್ ಸೀರೀಸ್‌ನಲ್ಲಿ ನಟಿಸುವ ಆಫರ್‌ಅನ್ನು ನನಗೆ ನೀಡಿದರು. ರಾಜ್ ಕುಂದ್ರಾ ಬಗ್ಗೆ ಕೇಳಿದಾಗ ”ಅವರು ಶಿಲ್ಪಾ ಶೆಟ್ಟಿ ಪತಿ” ಎಂದು ಉಮೇಶ್ ಕಾಮತ್ ಹೇಳಿದ್ದರು”

”ಈ ವೆಬ್ ಸೀರೀಸ್‌ಗೆ ಸೇರಿಕೊಂಡರೆ, ಬ್ಯಾಕ್ ಟು ಬ್ಯಾಕ್ ಕೆಲಸಗಳು ಸಿಗುತ್ತವೆ. ವೃತ್ತಿ ಜೀವನದಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂದು ಅವರು ಹೇಳಿದ್ದರು. ಹೀಗಾಗಿ ನಾನೂ ಒಪ್ಪಿಕೊಂಡೆ. ಆಡಿಷನ್ ಕೊಡುವಂತೆ ಹೇಳಿದ್ದರು. ಕೋವಿಡ್ ಇರುವ ಕಾರಣ ಆಡಿಷನ್ ಹೇಗೆ ಕೊಡೋದು ಅಂತ ನಾನು ಕೇಳಿದೆ. ವಿಡಿಯೋ ಕಾಲ್ ಮೂಲಕ ಕೊಡಬಹುದು ಎಂದಿದ್ದರು”

”ನಾನು ವಿಡಿಯೋ ಕಾಲ್ ಜಾಯಿನ್ ಆದಾಗ ಮೂರು ಜನ ಇದ್ದರು. ಆ ಪೈಕಿ ಒಬ್ಬರು ತಮ್ಮ ಮುಖವನ್ನು ಕವರ್ ಮಾಡಿಕೊಂಡಿದ್ದರು. ಇನ್ನೊಬ್ಬರು ರಾಜ್ ಕುಂದ್ರಾ ಅನಿಸುತ್ತದೆ. ವಿಡಿಯೋ ಕಾಲ್‌ನಲ್ಲಿ ನಗ್ನವಾಗಿ ಆಡಿಷನ್ ಕೊಡುವಂತೆ ಡಿಮ್ಯಾಂಡ್ ಮಾಡಿದರು. ನನಗೆ ಶಾಕ್ ಆಯ್ತು. ನಗ್ನವಾಗಿ ನಾನು ಆಡಿಷನ್ ಕೊಡಲಿಲ್ಲ” ಎಂದು ವಿಡಿಯೋದಲ್ಲಿ ಸಾಗರಿಕಾ ಶೋನಾ ಸುಮನ್ ಹೇಳಿದ್ದಾರೆ.

ಉಮೇಶ್ ಕಾಮತ್, ಗೆಹನಾ ವಸಿಷ್ಠ್ ಬಂಧನ
ಕಳೆದ ಫೆಬ್ರವರಿ ತಿಂಗಳಿನಲ್ಲೇ ಈ ಪ್ರಕರಣವನ್ನು ಭೇದಿಸಿದ ಪೊಲೀಸರು, ಉಮೇಶ್ ಕಾಮತ್, ಗೆಹನಾ ವಸಿಷ್ಠ್ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದರು. ಗೆಹನಾ ವಸಿಷ್ಠ್ ತಯಾರಿಸಿದ ವಿಡಿಯೋಗಳನ್ನು ಆಪ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪ ಉಮೇಶ್ ಕಾಮತ್ ಮೇಲಿದೆ. ರಾಜ್ ಕುಂದ್ರಾ ಕಂಪನಿಯಲ್ಲೇ ಈ ಹಿಂದೆ ಉಮೇಶ್ ಕಾಮತ್ ಕೆಲಸ ಮಾಡುತ್ತಿದ್ದರು.

ಪ್ರಮುಖ ಆರೋಪಿಯೇ ರಾಜ್ ಕುಂದ್ರಾ
”ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಅವುಗಳನ್ನು ವಿವಿಧ ಆಪ್‌ಗಳ ಮೂಲಕ ರಿಲೀಸ್ ಮಾಡುತ್ತಿದ್ದಾರೆ ಎಂದು ಫೆಬ್ರವರಿ ತಿಂಗಳಲ್ಲೇ ಕ್ರೈಂ ಬ್ರಾಂಚ್ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳ ನಿರ್ಮಾಣದ ಪ್ರಮುಖ ಆರೋಪಿ ರಾಜ್ ಕುಂದ್ರಾ ಅವರೇ ಆಗಿದ್ದಾರೆ” ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *