Raj Kundra Arrest: ನಾವು ಮಾಡಿದ್ದು ಬೋಲ್ಡ್ ಸಿನಿಮಾ, ಅದು ಪೋರ್ನ್ ಅಲ್ಲ; ರಾಜ್ ಕುಂದ್ರಾ ಬೆಂಬಲಕ್ಕೆ ನಟಿ ಗೆಹೆನಾ ವಸಿಷ್ಠ್
Raj Kundra: ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಚಿತ್ರಗಳ ನಿರ್ಮಾಣ ಮಾಡಿ ಅಲ್ಲಿನ ಕಲಾವಿದರನ್ನು ಅದರಲ್ಲೂ ನಟಿಯರ ಶೋಷಣೆ ಮಾಡುತ್ತಿದ್ದರು ಎನ್ನುವ ಆರೋಪದಡಿಯಲ್ಲಿ ಬಂಧಿತರಾಗಿದ್ದಾರೆ. ಜುಲೈ 23ರವರಗೆ ಅವರನ್ನು ಪೋಲೀಸರ ಕಸ್ಟಡಿಗೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ‘ಗಂದಿ ಬಾತ್’ ಎನ್ನುವ ಆನ್ಲೈನ್ ಶೋ ಮೂಲಕ ಹೆಸರು ಮಾಡಿರುವ ನಟಿ ಗೆಹೆನಾ ವಸಿಷ್ಠ್ ಮಾತನಾಡಿ ರಾಜ್ ಕುಂದ್ರಾ ಜೊತೆಗೆ ತಾನು ಕೆಲಸ ಮಾಡಿದ್ದೇನೆ. ಆತ ಮಾಡುತ್ತಿರುವುದು ಪೋರ್ನ್ ಸಿನಿಮಾ ಅಲ್ಲ, ಅದು ಬೋಲ್ಡ್ ಸಿನಿಮಾ. ಅದರಲ್ಲಿ ನಟಿಸುವವರಿಗೆ ಸರಿಯಾಗಿ ಹಣ ನೀಡುತ್ತಾರೆ ಮತ್ತು ಕಲಾವಿದರು ತಮ್ಮ ಇಚ್ಛೆಯಿಂದಷ್ಟೇ ನಟಿಸುತ್ತಾರೆ, ನಾನು ಕೂಡಾ ಆತ ನಿರ್ಮಿಸಿದ 3 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದೇನೆ ಎಂದಿದ್ದಾರೆ ಗೆಹೆನಾ.
8 ಜನರ ಜೊತೆಗೆ ಗೆಹೆನಾ ವಸಿಷ್ಠ್ ಕೂಡಾ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದರು. ಈ ಸಂಬಂಧ ತಾನು ತನ್ನದಲ್ಲದ ತಪ್ಪಿಗೆ ಜೈಲಿನಲ್ಲಿ ಇರುವಂತಾಯ್ತು. ಅದರಿಂದ ತನ್ನ ಇಡೀ ಬದುಕೇ ನಿರ್ಣಾಮವಾಗಿದೆ ಎಂದು ಗೆಹೆನಾ ವಿಡಿಯೋ ಒಂದರಲ್ಲಿ ಹೇಳಿದ್ದಾರೆ. jನ ಬೋಲ್ಡ್ ಅಥವಾ ಎರಾಟಿಕ್ ಸಿನಿಮಾ ಅಂದ್ರೆ ಏನು ಎಂದು ಮೊದಲು ತಿಳಿದುಕೊಳ್ಳಬೇಕು. ಎರಾಟಿಕ್ ಚಿತ್ರಗಳಿಗೂ ನೀಲಿ ಚಿತ್ರಗಳಿಗೂ ಬಹಳ ವ್ಯತ್ಯಾಸವಿದೆ. ಅದನ್ನು ಅರಿತರೆ ಮಾತ್ರ ಈ ತಪ್ಪು ಕಲ್ಪನೆಗಳು ದೂರವಾಗುತ್ತವೆ. ನಾನು ನಟಿಸಿದ ಚಿತ್ರಗಳಿಗೆ ನನಗೆ ಉತ್ತಮವಾಗಿ ಸಂಭಾವನೆ ದೊರಕಿದೆ. ನಾನು ಯಾವ ತಪ್ಪು ಕೆಲಸವನ್ನೂ ಮಾಡಿಲ್ಲ, ಮಾಡದ ತಪ್ಪಿಗೆ ಶಿಕ್ಷ ಅನುಭವಿಸಿದ್ದೇನೆ. ಈಗ ರಾಜ್ ಕುಂದ್ರಾ ವಿಚಾರದಲ್ಲೂ ಅದೇ ಆಗುತ್ತಿದೆ ಎಂದಿದ್ದಾರೆ ಗೆಹೆನಾ ವಸಿಷ್ಠ್.
ನೀಲಿ ಚಿತ್ರಗಳನ್ನು ಮಾಡುವವರನ್ನು ಬಂಧಿಸಿ. ಅದನ್ನು ಬಿಟ್ಟು ನೀಲಿ ಚಿತ್ರ ಮತ್ತು ಎರಾಟಿಕ್ ಸಿನಿಮಾ ನಡುವೆ ವ್ಯತ್ಯಾಸ ತಿಳಿಯದೆ ಇಂಥಾ ಆರೋಪ ಮಾಡಿ ಬದುಕು ಹಾಳು ಮಾಡುವುದು ಸರಿಯಲ್ಲ ಎಂದಿದ್ದಾರೆ ಗೆಹೆನಾ. ಇನ್ನು ರಾಜ್ ಕುಂದ್ರಾ ಬಂಧನದ ನಂತರ, ಅಕ್ಟೋಬರ್ನಲ್ಲಿ ನಡೆದ ಕೆಲವು ವಾಟ್ಸಾಪ್ ಚಾಟ್‌ಗಳು ಹೊರ ಬಂದಿವೆ. ಪೋರ್ನ್ ಸಿನಿಮಾ ವ್ಯವಹಾರದಿಂದ ರಾಜ್ ಕುಂದ್ರಾ ಸಾಕಷ್ಟು ಹಣ ಸಂಪಾದಿಸಿದ್ದರು ಎಂಬುದು ಈ ಚಾಟ್ಗಳಿಂದ ಬಹಿರಂಗವಾಗಿದೆ ಎಂದು ಮುಂಬೈ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಎಚ್ ಅಕೌಂಟ್ಸ್’ ಹೆಸರಿನ ಗ್ರೂಪ್ನ ಚಾಟ್‌ಗಳು ಇವಾಗಿದ್ದು ಇದರ ಅಡ್ಮಿನ್ ರಾಜ್ ಕುಂದ್ರಾ ಆಗಿದ್ದಾರೆ. ಈ ಗ್ರೂಪ್ನಲ್ಲಿ ರಾಜ್ ಅವರು ತಮ್ಮ ಸಂಬಂಧಿ ಮತ್ತು ಕೆನ್ರಿನ್ ಪ್ರೊಡಕ್ಷನ್ ಹೌಸ್ ಅಧ್ಯಕ್ಷ ಪ್ರದೀಪ್ ಭಕ್ಷಿ ಅವರೊಂದಿಗೆ ಹಣದ ವ್ಯವಹಾರದ ಬಗ್ಗೆ ಚರ್ಚಿಸಿರುವುದು ಕಂಡು ಬಂದಿದೆ. ಸಿನಿಮಾದಿಂದ ದಿನಕ್ಕೆ ಲಕ್ಷಾಂತರ ರೂಪಾಯಿ ಹಣ ಬರುತ್ತಿತ್ತು ಎಂಬುದು ಚಾಟ್ನಿಂದ ಗೊತ್ತಾಗಿದೆ.